Thursday, September 11, 2025
18.9 C
Bengaluru
Google search engine
LIVE
ಮನೆ#Exclusive NewsTop NewsIVPL 2024: ಸುರೇಶ್ ರೈನಾ ವಿಧ್ವಂಸಕ ಬ್ಯಾಟಿಂಗ್.. ಸಿಕ್ಸರ್​ಗಳ ಸುನಾಮಿ!

IVPL 2024: ಸುರೇಶ್ ರೈನಾ ವಿಧ್ವಂಸಕ ಬ್ಯಾಟಿಂಗ್.. ಸಿಕ್ಸರ್​ಗಳ ಸುನಾಮಿ!

ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ ಮೊದಲ ಎಡಿಷನ್​ನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ ಸೂಪರ್ ಫಾರ್ಮ್ ಮುಂದುವರೆಸಿದ್ದಾರೆ.

ಐವಿಪಿಎಲ್​-2024ರಲ್ಲಿ ವಿವಿಐಪಿ ಉತ್ತರಪ್ರದೇಶ ತಂಡಕ್ಕೆ ನಾಯಕತ್ವ ವಹಿಸಿರುವ ಸುರೇಸ್ ರೈನಾ ತಮ್ಮ ಮಿಂಚಿನ ಇನ್ನಿಂಗ್ಸ್​ ಮೂಲಕ ತಂಡಕ್ಕೆ ಅದ್ಭುತ ಗೆಲುವುಗಳನ್ನು ತಂದುಕೊಡ್ತಿದ್ದಾರೆ.

ಶನಿವಾರ ಛತ್ತೀಸ್​ಘಡ ವಾರಿಯರ್ಸ್ ವಿರುದ್ಧ ನಡೆದ ಎರಡನೇ ಸೆಮಿಫೈನಲ್​ನಲ್ಲಿಯೂ ರೈನಾ ಮಿಂಚಿದ್ದಾರೆ. 19 ರನ್​ಗಳ ಅಂತರದಿಂದ ತಂಡ ಗೆಲ್ಲುವುದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ವಿವಿಐಪಿ ಉತ್ತರಪ್ರದೇಶ 20 ಓವರ್​ಗಳಲ್ಲಿ 8 ವಿಕೆಟ್ನಷ್ಟಕ್ಕೆ 203 ರನ್ ಪೇರಿಸಿತು. ಪವನ್ ನೇಗಿ 50 ಎಸೆತಗಳಲ್ಲಿ 7 ಫೋರ್​, 6 ಸಿಕ್ಸರ್ ಸಹಿತ 94 ರನ್ ಗಳಿಸಿದರು.

ಅದೇ ರೀತಿ ರೈನಾ ಫಿನಿಶಿಂಗ್ ಟಚ್ ಕೊಟ್ಟರು. ಕೇವಲ 33 ಎಸೆತಗಳಲ್ಲಿ 5 ಫೋರ್​, 4 ಸಿಕ್ಸ್ ಸಹಿತ ಮಿಸ್ಟರ್ ಐಪಿಎಲ್ 56 ರನ್ ಬಾರಿಸಿದ್ರು.

ನಂತರ ಬ್ಯಾಟಿಂಗ್​ಗೆ ಇಳಿದ ಛತ್ತೀಸ್​ಘಡ 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 184 ರನ್​ಗಳಿಗೆ ಸೀಮಿತ ಆಯ್ತು

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments