ಜಿಲ್ಲೆ

ಬುರ್ಖಾ ಧರಿಸಿದ ಮಹಿಳೆ ಸತ್ರೆ ಸ್ವರ್ಗಕ್ಕೆ ಹೋಗ್ತಾರಂತೆ..!

ಚಾಮರಾಜನಗರ:  ಹುಡಾ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನಾಲಯದಲ್ಲಿ ಬುರ್ಕಾ ವಿವಾದದ ವಿಡಿಯೋ ವೈರಲ್ ಆಗಿದೆ. ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನೂ ಆಗಲ್ಲ. ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನು ಹಾವು ಚೇಳು ತಿನ್ನುತ್ತವೆ ಎಂದು ವಸ್ತು ಪ್ರದರ್ಶನದಲ್ಲಿ ಬಾಲಕಿ ವಿವರಣೆ ನೀಡುವ ವಿಡಿಯೋ ಇದಾಗಿದೆ.

ವಿದ್ಯಾರ್ಥಿನಿ ಮಾಡಿರುವ ಸೈನ್ಸ್‌ ಪ್ರಾಜೆಕ್ಟ್‌ನಲ್ಲಿ, ಎರಡು ಗೊಂಬೆಗಳನ್ನು ಶವದಂತೆ ಪೆಟ್ಟಿಗೆಯಲ್ಲಿ ಮಲಗಿಸಿದ್ದು, ಒಂದು ಗೊಂಬೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊದ್ದು ಗೊಂಬೆಯನ್ನು ಚೇಳು, ಹಾವಿನ ಚಿತ್ರವಿರುವ ಬಟ್ಟೆಯಿಂದ ಮುಚ್ಚಲಾಗಿದೆ. ಇದಕ್ಕೆ ವಿದ್ಯಾರ್ಥಿನಿ ವಿವರಣೆಯನ್ನೂ ಸಹ ನೀಡಿದ್ದಾಳೆ.

“ಬುರ್ಖಾ ಧರಿಸಿದರೆ ಸತ್ತ ಮೇಲೆ ಶವಕ್ಕೆ ಏನೂ ಆಗಲ್ಲ. ಒಂದು ವೇಳೆ ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜತೆಗೆ ನಿಮ್ಮ ದೇಹವನ್ನು ಹಾವು, ಚೇಳು ತಿನ್ನುತ್ತವೆ” ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇನ್ನು ಈ ವಿಡಿಯೋವನ್ನು ಸರವಣಪ್ರಸಾದ್ ಬಾಲಸುಬ್ರಮಣಿಯನ್ ಅನ್ನೋರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, “ಕರ್ನಾಟಕದ ಚಾಮರಾಜನಗರದಲ್ಲಿನ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ನಡೆಸಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಯೊಬ್ಬಳ ಸೈನ್ಸ್‌ ಪ್ರಾಜೆಕ್ಟ್‌ ಈ ರೀತಿ ಇದೆ. ಬುರ್ಖಾ ಧರಿಸಿದರೆ ಸಮಾಧಿ ಹೂವುಗಳಿಂದ ತುಂಬಿರುತ್ತದೆ. ನೀವು ತುಂಡು ಉಡುಗೆ ತೊಟ್ಟರೆ, ಸಾವಿನ ನಂತರ ಸಮಾಧಿಯಲ್ಲಿ ಚೇಳುಗಳು ಮತ್ತು ಹಾವುಗಳು ಇರುತ್ತವೆ ಮತ್ತು ನರಕಕ್ಕೆ ಹೋಗುತ್ತೀರಿ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ” ಎಂದು ಅವರು ಬರೆದಿದ್ದಾರೆ.

https://x.com/BS_Prasad/status/1903993178476490899

ಮಕ್ಕಳು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಧರ್ಮದ ವಿಚಾರ ಏಕೆ ತಂದರು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ವೀಡಿಯೋ ಬಗ್ಗೆ ಸ್ಪಷ್ಟನೆ, ಪ್ರತಿಕ್ರಿಯೆ ಕೊಡಲು ಶಾಲಾ ಪ್ರಾಂಶುಪಾಲ ಜಾವೇದ್ ನಿರಾಕರಿಸಿದ್ದಾರೆ. ಪ್ರಾಂಶುಪಾಲರ ನಡೆಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ನೀವು ಶಾಲೆಯ ಮುಖ್ಯಸ್ಥರಾಗಿ ಇಂತಹ ವಿಚಾರಕ್ಕೆ ಸ್ಪಷ್ಟನೆ ನೀಡಲು ನಿಮಗೇನು ಕಷ್ಟ ಅಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button