ರಾಜ್ಯ

ಹತ್ತು ವರ್ಷದ ಜಾತಿ ಗಣತಿ ಈಗ ಪ್ರಕಟ ಮಾಡುವುದು ಸಮರ್ಪಕವಲ್ಲ : ಸಿದ್ದಲಿಂಗ ಶ್ರೀಗಳು

ಹತ್ತು ವರ್ಷದ ಹಿಂದೆ ನಡೆಸಿದ ಜಾತಿ ಗಣತಿ ಈಗ ಪ್ರಕಟಮಾಡುವುದು ಸಮರ್ಪಕವಲ್ಲ.ಇನ್ನೋಂದು ಸರಿ ವೈಜ್ಞಾನಿಕವಾಗಿ ಹೊಸ ಸಮೀಕ್ಷೆ ಮಾಡುವುದು ಒಳ್ಳೆಯದು ಎಂದುತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.

ಹತ್ತು ವರ್ಷದ ಹಿಂದಿನ ವರದಿ ಈಗ ಏಕೆ ಪ್ರಕಟ ಮಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗ್ತಿಲ್ಲ. 10 ವರ್ಷದಿಂದ ಇಲ್ಲಿವರೆಗೆ ಎಷ್ಟೋ ಬದಲಾವಣೆ ಆಗಿರಬಹುದು. ಜನ ಸಂಖ್ಯೆ ಹೆಚ್ಚಿರಬಹುದು, ಎಷ್ಟೋ ಬೇರೆ ಬೇರೆ ಬೆಳವಣಿಗೆ ಆಗಿರಬಹುದು ಎಂದರು. ಸಮೀಕ್ಷೆ ಮಾಡಲು ಮಠಕ್ಕೆ ಬಂದಿದ್ದರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನಮಗೆ ಗೊತ್ತೇ ಇಲ್ಲ, ನನಗಂತೂ ಯಾರೂ ಕೇಳಿಲ್ಲ. ಸಣ್ಣ ಹಳ್ಳಿಯಿಂದ ಹಿಡಿದು ಎಲ್ಲರನ್ನೂ ಭೇಟಿ ಮಾಡಿ ಹೊಸ ಸಮೀಕೆ ಮಾಡಿದರೆ ಒಳ್ಳೆಯದು ಎಂದರು.

ಜಾತಿ ಜನಗಣತಿ ವಿಚಾತವಾಗಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ,ಲಿಂಗಾಯತ ಸಚಿವರು ,ಶಾಸಕರು ರಾಜೀನಾಮೆ ನೀಡಿ ಎಂದು ಕರೆ ಕೊಟ್ಟಿದ್ದಾರೆ..ಜಾತಿ ಜನಗಣತಿ ಅಸಮರ್ಪಕವಾಗಿದೆ ಎಂದು ತೋಂಟದಾರ್ಯ ಶ್ರೀಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Comments (0)

Your email address will not be published. Required fields are marked *

Back to top button