Wednesday, April 30, 2025
32 C
Bengaluru
LIVE
ಮನೆಕ್ರಿಕೆಟ್ಟೀಮ್ ಇಂಡಿಯಾ ಯುವ ಆಟಗಾರ ಸರ್ಫರಾಝ್ ಖಾನ್​ಗೆ ಅವಕಾಶ ಸಿಗುವುದು ಅನುಮಾನ

ಟೀಮ್ ಇಂಡಿಯಾ ಯುವ ಆಟಗಾರ ಸರ್ಫರಾಝ್ ಖಾನ್​ಗೆ ಅವಕಾಶ ಸಿಗುವುದು ಅನುಮಾನ

ಬೆಂಗಳೂರು : ಭಾರತ ಮತ್ತು ಇಂಗ್ಲೆಂಡ್ ನಡುವಿಣ 2ನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ಶುರುವಾಗಲಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಆಟಗಾರ ಸರ್ಫರಾಝ್​ ಖಾನ್​ಗೆ ಅವಕಾಶ ಸಿಗುವುದು ಅನುಮಾನ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿನ 11 ವರ್ಷಗಳ ಕಠಿಣ ಪರಿಶ್ರಮದ ಬಳಿಕ ಸರ್ಫರಾಝ್ ಖಾನ್​ಗೆ (Sarfaraz Khan) ಕೊನೆಗೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ತೊಡೆಸಂಧು ಗಾಯಕ್ಕೆ ತುತ್ತಾಗಿದ್ದ ಕೆಎಲ್ ರಾಹುಲ್ ಬದಲಿಗೆ ಇದೀಗ ಸರ್ಫರಾಝ್ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ.

ಆದರೆ ಸರ್ಫರಾಝ್​ ಖಾನ್​ಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚಾನ್ಸ್ ಸಿಗುವುದು ಅನುಮಾನ. ಏಕೆಂದರೆ ಈಗಾಗಲೇ ತಂಡದಲ್ಲಿ ಚೊಚ್ಚಲ ಅವಕಾಶಕ್ಕಾಗಿ ರಜತ್ ಪಾಟಿದಾರ್ ಎದುರು ನೋಡುತ್ತಿದ್ದಾರೆ. ಅಂದರೆ ಸರ್ಫರಾಝ್​ಗೂ ಮುನ್ನವೇ ಪಾಟಿದಾರ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಬದಲಿಗೆ ಮಧ್ಯಮ ಕ್ರಮಾಂಕಕ್ಕೆ ರಜತ್ ಪಾಟಿದಾರ್ ಆಯ್ಕೆಯಾಗಿದ್ದರು. ಇದೀಗ ಕೆಎಲ್ ರಾಹುಲ್ ತಂಡದಿಂದ ಹೊರಗುಳಿದಿರುವ ಕಾರಣ ಪಾಟಿದಾರ್​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.

ಅತ್ತ ಭರ್ಜರಿ ಫಾರ್ಮ್​ನಲ್ಲಿದ್ದರೂ ಸರ್ಫರಾಝ್​ಗೆ ಆಡುವ ಬಳಗದಲ್ಲಿ ಅವಕಾಶ ಸಿಗಬೇಕಿದ್ದರೆ ಶುಭ್​ಮನ್ ಗಿಲ್ ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಬೇಕಾಗುತ್ತದೆ. ಆದರೆ ಕೇವಲ ಒಂದು ಪಂದ್ಯದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಇಂತಹದೊಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.

ಹೀಗಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯಲು ಸರ್ಫರಾಝ್ ಖಾನ್ 3ನೇ ಟೆಸ್ಟ್ ಪಂದ್ಯದವರೆಗೂ ಕಾಯಬೇಕಾಗಿ ಬರಬಹುದು. ಅದರಂತೆ ರಾಜ್​ಕೋಟ್​ನಲ್ಲಿ ನಡೆಯಲಿರುವ ಮೂರನೇ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಅವಕಾಶ ಸಿಗಬಹುದು.

ಅಂದಹಾಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 66 ಇನಿಂಗ್ಸ್ ಆಡಿರುವ ಸರ್ಫರಾಝ್ ಖಾನ್ 14 ಶತಕಗಳು ಹಾಗೂ 11 ಅರ್ಧಶತಕಗಳೊಂದಿಗೆ ಒಟ್ಟು 3912 ರನ್ ಕಲೆಹಾಕಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ಇದೀಗ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿರುವ ಯುವ ದಾಂಡಿಗ ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ , ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಸರ್ಫರಾಝ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments