Top Newsಸಿನಿಮಾಸುದ್ದಿ

ಜೈಲಿನಲ್ಲಿ ಐಟಿ ವಿಚಾರಣೆಗೆ ಹಾಜರಾದ ನಟ ದರ್ಶನ್-ವಿಡಿಯೋ ಇಲ್ಲಿದೆ

ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್, ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಚಾಲ್ತಿಯಲ್ಲಿದ್ದು, ಇದೇ 29ಕ್ಕೆ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ. ಜಾಮೀನು ಸಿಕ್ಕು ತಾವು ಹೊರಗೆ ಬರುವ ಉಮೇದಿನಲ್ಲಿ ದರ್ಶನ್ ಇರುವ ಸಂದರ್ಭದಲ್ಲಿಯೇ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಐಟಿ ಅಧಿಕಾರಿಗಳು ದರ್ಶನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ವಿಚಾರಣೆ ನಡೆಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ ಹಣ, ದರ್ಶನ್​ರ ಮನೆ ಮಹಜರಿನ ವೇಳೆ ಸಿಕ್ಕ ನಗದು ಹಣ ಇನ್ನಿತರೆ ವಿಚಾರವಾಗಿ ಐಟಿ ಅಧಿಕಾರಿಗಳು ದರ್ಶನ್​ರ ವಿಚಾರಣೆ ನಡೆಸಲಿದ್ದಾರೆ.

ಐಟಿ ಅಧಿಕಾರಿಗಳು ಮತ್ತು ಆರೋಪಿ ದರ್ಶನ್, ಅವರ ಪರ ಆಡಿಟರ್ ಭಾಗಿದ್ದು, ಪ್ರತಿಯೊಂದನ್ನು ನ್ಯಾಯಲಯದ ಗೈಡ್ ಲೈನ್ಸ್ ಅಡಿಯಲ್ಲಿ ವಿಚಾರಣೆ ಮಾಡಲಾಗಿದೆ. ವಿಚಾರಣೆಯ ಪ್ರತಿಯೊಂದು ಹಂತದ ವಿಡಿಯೋ ರೆಕಾರ್ಡ್ ಒಳಪಟ್ಟಿದೆ.

Comments (0)

Your email address will not be published. Required fields are marked *

Back to top button