Tuesday, February 24, 2026
29.9 C
Bengaluru
Google search engine
LIVE
ಮನೆವೆಬ್ ಸ್ಟೋರೀಸ್ನಿಮ್ಮ ನಾಯಿ ನಿಮ್ಮನ್ನು ನೆಕ್ಕುತ್ತಿದೆಯೇ? ನಾಯಿ ಪ್ರೀತಿಯಿಂದ ನೆಕ್ಕಿದ್ದಕ್ಕೆ ಕೈ-ಕಾಲು ಕಳೆದುಕೊಂಡ ಮಹಿಳೆ!

ನಿಮ್ಮ ನಾಯಿ ನಿಮ್ಮನ್ನು ನೆಕ್ಕುತ್ತಿದೆಯೇ? ನಾಯಿ ಪ್ರೀತಿಯಿಂದ ನೆಕ್ಕಿದ್ದಕ್ಕೆ ಕೈ-ಕಾಲು ಕಳೆದುಕೊಂಡ ಮಹಿಳೆ!

ನಿಮ್ಮ ಮನೆಯ ಮುದ್ದಿನ ನಾಯಿ ನಿಮ್ಮನ್ನು ಪ್ರೀತಿಯಿಂದ ನೆಕ್ಕುತ್ತಿದೆಯೇ? ಹಾಗಿದ್ದರೆ ಈ ಸ್ಟೋರಿ ಓದಲೇಬೇಕು. ನಾಯಿಯ ಮೇಲಿನ ಅತಿಯಾದ ಪ್ರೀತಿ ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಎಂಬ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಸಾಕುಪ್ರಾಣಿ ಪ್ರೀತಿಯಿಂದ ನೆಕ್ಕಿದ್ದೇ ಮುಳುವಾಗಿ, ಮಹಿಳೆಯೊಬ್ಬರು ತಮ್ಮ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡ ಭೀಕರ ಘಟನೆ ಈಗ ಎಲ್ಲರನ್ನು ಬೆಚ್ಚಿಬೀಳಿಸಿದೆ.

ಯುಕೆಯ 52 ವರ್ಷದ ಮಂಜೀತ್ ಸಂಘಾ ಎಂಬುವವರಿಗೆ ಎದುರಾದ ಈ ವಿಧಿಬರಹ ನಂಬಲಸಾಧ್ಯವಾಗಿದೆ. ಅವರ ಮೈಮೇಲಿದ್ದ ಒಂದು ಸಣ್ಣ ಗಾಯವನ್ನು ಅವರ ಸಾಕು ನಾಯಿ ಪ್ರೀತಿಯಿಂದ ನೆಕ್ಕಿತ್ತು. ಆದರೆ, ನಾಯಿಯ ಲಾಲಾರಸದಲ್ಲಿದ್ದ ‘ಕ್ಯಾಪ್ಲೋಸೈಟೋಫಗಾ’ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾ ಆ ಸಣ್ಣ ಗಾಯದ ಮೂಲಕ ಮಂಜೀತ್ ಅವರ ರಕ್ತವನ್ನು ಸೇರಿತ್ತು. ಈ ಬ್ಯಾಕ್ಟೀರಿಯಾ ಮನುಷ್ಯರಲ್ಲಿ ಅತ್ಯಂತ ಭಯಾನಕವಾದ ‘ಸೆಪ್ಸಿಸ್’ ಸೋಂಕನ್ನು ಹರಡುತ್ತದೆ. ಸೋಂಕು ತಗುಲಿದ ಒಂದೇ ದಿನದಲ್ಲಿ ಮಂಜೀತ್ ಅವರ ಸ್ಥಿತಿ ಗಂಭೀರವಾಗಿದ್ದು, ಪಾದಗಳು ಮಂಜುಗಡ್ಡೆಯಂತೆ ಗಟ್ಟಿಯಾಗಿ, ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು.

ಆಸ್ಪತ್ರೆಗೆ ದಾಖಲಾದ ಮಂಜೀತ್ ಅವರಿಗೆ ಚಿಕಿತ್ಸೆ ವೇಳೆ ಹೃದಯಾಘಾತ ಸಂಭವಿಸಿದರೂ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಆದರೆ, ಸೋಂಕು ದೇಹದಾದ್ಯಂತ ಹರಡಿದ್ದರಿಂದ ಅವರ ಜೀವ ಉಳಿಸಲು ವೈದ್ಯರು ಅನಿವಾರ್ಯವಾಗಿ ಎರಡೂ ಕೈಗಳು ಮತ್ತು ಕಾಲುಗಳನ್ನು ಕತ್ತರಿಸಿ ತೆಗೆಯಬೇಕಾಯಿತು. ಒಂದು ಸಣ್ಣ ಗಾಯ ಮತ್ತು ನಾಯಿಯ ನೆಕ್ಕುವಿಕೆ ಇಷ್ಟೊಂದು ದೊಡ್ಡ ಗಂಡಾಂತರ ತಂದೊಡ್ಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನಾಯಿ ಪ್ರಿಯರು ತಮ್ಮ ಸಾಕುಪ್ರಾಣಿಗಳ ಜೊತೆ ವ್ಯವಹರಿಸುವಾಗ ಮೈಮೇಲೆ ಗಾಯಗಳಿದ್ದರೆ ಅತಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments