Top Newsಕ್ರಿಕೆಟ್

IPL DHONI: ಧೋನಿಗಿದೆ ಅಂತಿಮ ಸೀಜನ್ನಾ? ಕೂಲ್ ಕ್ಯಾಪ್ಟನ್ ಗೆಳೆಯ ಹೇಳಿದ್ದೇನು?

ಐಪಿಎಲ್-2024 (IPL 2024)ಸೀಜನ್.. ಮಾರ್ಚ್ 22ರಿಂದ ಆರಂಭ ಆಗಲಿದೆ. ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್(RCB) ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ.

ಈ ಹೊತ್ತಲ್ಲಿಯೇ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ(MS Dhoni)ಗಿದು ಅಂತಿಮ ಸೀಜನ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಧೋನಿ ಆಗಲಿ.. ಚೆನ್ನೈ ಮ್ಯಾನೇಜ್‌ಮೆಂಟ್ ಆಗಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಕಳೆದ ವರ್ಷವೂ ಇಂಥಾದ್ದೇ ಮಾತು ಕೇಳಿಬಂದಿತ್ತು.. ಆದರೆ ಚೆನ್ನೈ ತಂಡವನ್ನು ಚಾಂಪಿಯನ್ ಸ್ಥಾನದಲ್ಲಿ ಧೋನಿ ನಿಲ್ಲಿಸಿದ್ರು. ಹೀರೋ ರೀತಿ ಕಮ್​ಬ್ಯಾಕ್ ಆಗಿ ತಮ್ಮ ನಿವೃತ್ತಿ ಬಗ್ಗೆ ಮಾತಾಡ್ತಿದ್ದವರ ಬಾಯಿ ಮುಚ್ಚಿಸಿದ್ರು.

ಈಗಲೂ ಧೋನಿ ನಿವೃತ್ತಿ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಧೋನಿಯ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ.

ಧೋನಿ ಫಿಟ್ನೆಸ್ ನೋಡಿದ್ರೆ ಇದು ಅವರ ಕೊನೆಯ ಸೀಜನ್ ಎನಿಸ್ತಿಲ್ಲ. ಈಗಿನ ಸೀಜನ್ ಜೊತೆಗೆ ಇನ್ನೆರಡು ವರ್ಷ ಐಪಿಎಲ್‌ನಲ್ಲಿ ಕ್ರಿಕೆಟ್ ಆಡುವ ಸಾಮರ್ಥ್ಯ ಧೋನಿಗೆ ಇದೆ.. ಇದಕ್ಕೆ ಕಾರಣ ಅವರ ಫಿಟ್ನೆಸ್ ಮಟ್ಟ

ಎಂದು ಪರಮ್‌ಜಿತ್ ಸಿಂಗ್ ಹೇಳಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಧೋನಿಗೆ ಬ್ಯಾಟ್‌ಗಳನ್ನು ಒದಗಿಸಿದ ಗೆಳೆಯ ಪರಮ್‌ಜಿತ್ ಸಿಂಗ್..

ಇತ್ತೀಚಿಗೆ ಪ್ರಾಕ್ಟೀಸ್ ವೇಳೆ ಧೋನಿ ಬ್ಯಾಟ್ ಮೇಲೆ ಇರುವ ಒಂದು ಸ್ಟಿಕ್ಕರ್ ಗಮನಿಸಿಯೇ ಇರುತ್ತೀರಾ? ಅದು ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್. ಆ ಶಾಪ್ ಓನರ್ ಇದೇ ಪರಮ್‌ಜಿತ್ ಸಿಂಗ್..

ನಮ್ಮಿಬ್ಬರ ನಡುವಿನ ಸಂಬಂಧ ಅದ್ಭುತವಾದುದು.. ಆತ ಸಹಿ ಹಾಕಿದ ಬ್ಯಾಟ್ ನನಗೆ ಗಿಫ್ಟ್ ಆಗಿ ನೀಡಿದ್ದಾರೆ.. ಅದು ಹೆಮ್ಮೆಯ ಕ್ಷಣ ಎಂದು ಪರಮ್‌ಜಿತ್ ಹೇಳಿದ್ದಾರೆ

Comments (0)

Your email address will not be published. Required fields are marked *

Back to top button