ವೈರಲ್ ನ್ಯೂಸ್ಸಿನಿಮಾಸುದ್ದಿ

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್? ಮೌನ ಮುರಿದ ಮಾಜಿ ನೀಲಿ ತಾರೆ!

ಮಾಜಿ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಹಾಗೂ ವಿಶ್ವಪ್ರಸಿದ್ಧ ಹಾಸ್ಯ ನಟ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. 32 ವರ್ಷದ ಮಿಯಾ ಮತ್ತು 71 ವರ್ಷದ ರೋವನ್ ಒಟ್ಟಾಗಿ ಇರುವ ಫೋಟೋವೊಂದು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಈ ಸುದ್ದಿಗೆ ಸಂಬಂಧಿಸಿದಂತೆ ಈಗ ಸ್ವತಃ ಮಿಯಾ ಖಲೀಫಾ ಅವರೇ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ವೈರಲ್ ಆಗಿದ್ದ ಫೋಟೋ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮಿಯಾ ಖಲೀಫಾ, ಗೈಸ್, ನಾನು ಒಬ್ಬ ಮೂರ್ಖನ ಜೊತೆ ಡೇಟಿಂಗ್ ಮಾಡುತ್ತಿರುವುದು ನಿಜ, ಆದರೆ ಖಂಡಿತವಾಗಿಯೂ ಅದು ಮಿಸ್ಟರ್ ಬೀನ್ ಅಲ್ಲಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ರೋವನ್ ಅಟ್ಕಿನ್ಸನ್ ಅವರೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಆ ಫೋಟೋ ಅಸಲಿಗೆ ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಲಾದ ಚಿತ್ರ ಎಂಬುದು ದೃಢಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಇಂತಹ ಸುಳ್ಳು ಸುದ್ದಿಗಳು ಮತ್ತು ಎಐ ಸೃಷ್ಟಿತ ಚಿತ್ರಗಳು ಹರಿದಾಡುವುದು ಸಾಮಾನ್ಯವಾಗಿದ್ದು, ಮಿಯಾ ಖಲೀಫಾ ಅವರ ಈ ಸ್ಪಷ್ಟನೆಯಿಂದ ಅಭಿಮಾನಿಗಳ ಗೊಂದಲ ಬಗೆಹರಿದಿದೆ.

Comments (0)

Your email address will not be published. Required fields are marked *

Back to top button