ಜಿಲ್ಲೆ

ಸಾವಿರಾರು ಮರಗಳನ್ನ ಧರೆಗುರುಳಿಸಿದ್ರಾ ಶಾಸಕ ವಿನಯ್​ ಕುಲಕರ್ಣಿ?

ಧಾರವಾಡ: ಹಳ್ಳಿಗೇರಿಯಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರಗಳ ಮಾರಣಹೋಮ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮರಗಳ ಕಡಿದು ರಸ್ತೆ ನಿರ್ಮಾಣ ಮಾಡುತ್ತಿದ್ದು, ತಪ್ಪಿತಸ್ಥರ ಬಂಧನಕ್ಕೆ ಬಸವರಾಜ್ ಕೊರವರ ಆಗ್ರಹಿಸಿದ್ದಾರೆ.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಶಾಸಕ ವಿನಯ್ ಕುಲಕರ್ಣಿ ಅವರ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಸಾವಿರಾರು ಮರಗಳನ್ನು ಅಲ್ಲಿ ಕಡಿದು ಹಾಕಲಾಗಿದೆ. ಪ್ರಭಾವಿಗಳು ಮುಂದೆ ನಿಂತು ರಸ್ತೆ ಮಾಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಯಾರೋ ಸಣ್ಣಪುಟ್ಟ ಸಿಬ್ಬಂದಿ ಮೇಲೆ ಅಲ್ಲ ಎಂದು ಒತ್ತಾಯಿಸಿರುವ ಕೊರವರ ಈ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button