Thursday, August 21, 2025
26.4 C
Bengaluru
Google search engine
LIVE
ಮನೆ#Exclusive NewsTop Newsಸರ್ಕಾರಿ ಕೆಲಸ ಆಂದ್ರೆ.. ಲೂಟಿ ಹೊಡೆಯೋ ಕೆಲಸನಾ.? ಭ್ರಷ್ಟರ ಭಂಡಾರ ‘ಲೋಕಾ’ ಬಯಲು..!

ಸರ್ಕಾರಿ ಕೆಲಸ ಆಂದ್ರೆ.. ಲೂಟಿ ಹೊಡೆಯೋ ಕೆಲಸನಾ.? ಭ್ರಷ್ಟರ ಭಂಡಾರ ‘ಲೋಕಾ’ ಬಯಲು..!

ಬೆಂಗಳೂರು : ಸರ್ಕಾರಿ ಕೆಲಸ ಆಂದ್ರೆ ದೇವರ ಕೆಲಸ ಅಂತಾರೆ.. ಜನರ ಸೇವೆಯೇ ಜನಾರ್ಧನ ಸೇವೆ ಅಂತಾನೂ ಹೇಳ್ತಾರೆ.. ಆದ್ರೆ ಇವರನ್ನು ನೋಡಿದ್ರೆ.. ಸರ್ಕಾರಿ ಕೆಲಸ ಆಂದ್ರೆ.. ಲೂಟಿ ಹೊಡೆಯೋ ಕೆಲಸನಾ .? ಆನ್ನೋ ಅನುಮಾನ ಬಂದ್ರು ಆಶ್ಚರ್ಯಪಡೆಬೇಕಾಗಿಲ್ಲ ಕಣ್ರಿ.. ಏಕೆಂದ್ರೆ ನಾವೀಗ ಹೇಳ ಹೊರಟಿರೋರ ಲಂಚ ಚೆರೀತ್ರೆ ಅಷ್ಟು ಭಯಯಾನಕವಾಗಿದೆ.. ಅಷ್ಟಕ್ಕೂ ಏನಪ್ಪಾ ಮಹಾನ್ ಭ್ರಷ್ಟರ ಭಂಡಾರದ ಸ್ಟೋರಿ ಅಂತಿರಾ ನೀವೆ ನೋಡಿ..

ಬೆಳ್ಳಂಬೆಳಗ್ಗೆ ಬ್ರಹ್ಮಾಂಡ ಭ್ರಷ್ಟರ ಬಿಲಗಳಿಗೆ ಎಂಟ್ರಿಕೊಟ್ಟದ ಲೋಕಾಯುಕ್ತರು.. ಭ್ರಷ್ಟಾಚಾರದ ಸಂಪ್ಪತ್ತಿನ್ನಲ್ಲಿ ಸುಖನಿದ್ರೆಯಲ್ಲಿದ್ದವರು ಪತರ​ಗುಟ್ಟುವಂತೆ ಮಾಡಿದ್ರು.. ಸುಖ ನಿದ್ದೆ ಮಾಡ್ತಿದ್ದ ಲಂಚಾಸುರರಿಗೆ.. ಗುಡ್ ಮಾರ್ನಿಂಗ್ ಎನ್ನುತ್ತಲೇ ಬ್ಯಾಡ್ ನ್ಯೂಸ್​ ಕೊಟ್ಟ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು.. ರಾಜ್ಯದ ನಾಲ್ವರು ಮಹಾನ್ ಭ್ರಷ್ಟ ಅಧಿಕಾರಿಗಳು ಟಾರ್ಗೆಟ್​.. 25ಕ್ಕೂ ಹೆಚ್ಚುಕಡೆ ಲೋಕಾಯುಕ್ತ ಅಧಿಕಾರಿಗಳಿಂದ ತಲಾಷ್​​ ಮಾಡಿ ಭ್ರಷ್ಟರೇ ಎಚ್ಚರ ಎಚ್ಚರ ಲೋಕಾಯುಕ್ತ ಅಲರ್ಟ್​ ಆಗಿದೆ ಅನ್ನೋ ಸಂದೇಶ ಕೊಟ್ಟುಬಿಟ್ಟಿದ್ದಾರೆ..

ಸರ್ಕಾರಿ ಕೆಲಸ ಭ್ರಷ್ಟರ ಕೆಲಸ ಅನ್ನೋ ರೀತಿ ಆಗಿ ಹೋಗಿದೆಯಾ..? ಅಧಿಕಾರಿಗಳ ಭ್ರಷ್ಟತನದ ಗಳಿಕೆ ನೋಡಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಕಣ್ರಿ.. ಏಕೆಂದ್ರೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಟೌನ್ ಪ್ಲ್ಯಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿಗೆ ಸೇರಿದ ಸುಮಾರು 5 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋದಕಾರ್ಯ ನಡೆಸಿದ್ದಾರೆ.. ಈ ವೇಳೆ ತಿಪ್ಪೆಸ್ವಾಮಿಯ ಮನೆಯಲ್ಲಿ… ತಿಪ್ಪೆಯಲ್ಲಿ ಕಸ ಹಾಕಿದ ಹಾಗೆ ಚಿನ್ನಾಭರಣ, ಕೇಜಿಗಟ್ಟಲೇ ಬೆಳ್ಳೆ ಸಾಮಾನುಗಳನ್ನು ತುಂಬಲಾಗಿತ್ತು.. ಜೊತೆಗೆ ನಗದು ಕೂಡ ಪತ್ತೆಯಾಗಿದೆ..

ಭ್ರಷ್ಟರ ಮನೆಗಳಿಗೆ ಎಂಟ್ರಿ ಕೊಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.. ಅಲ್ದೆ ಚಳಿಗಾಲದಲ್ಲೂ ಭ್ರಷ್ಟರು ಬೆವರುವಂತೆ ಮಾಡಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಲ್ಲಿ ಕರ್ನಾಟಕದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.. ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ರಾಜ್ಯದ 22 ಕಡೆಗಳಲ್ಲಿ ಲೋಕಾ ಅಧಿಕಾರಿಗಳು ರೇಡ್ ಮಾಡಿದ್ದಾರೆ. 4 ಅಧಿಕಾರಿಗಳಿಗೆ ಸೇರಿದ 22 ಕಡೆ ರೇಡ್ ಮಾಡಿ, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಹಣ, ಆಸ್ತಿ ಪತ್ರ, ಅತ್ಯಮೂಲ್ಯ ದಾಖಲೆ ಪತ್ರಗಳನ್ನು ಪತ್ತೆ ಹಚ್ಚಿದ್ದಾರೆ.

ರಾಜ್ಯದ ಕಡುಭ್ರಷ್ಟ ಅಧಿಕಾರಿ ಟೌನ್ ಪ್ಲ್ಯಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಲಾಗಿದೆ. ಭೂಮಿ ಕನ್ವರ್ಷನ್ ಮಾಡಿಕೊಡಲು ಲಂಚಕ್ಕಾಗಿ ಪೀಡಿಸುತ್ತಿದ್ದ ತಿಪ್ಪೇಸ್ವಾಮಿ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕ್ವರ್ಷನ್ ಗೆ ಎಕರೆಗಿಷ್ಟು ಎಂದು ದರ ನಿಗದಿ ಮಾಡಿದ್ದ ತಿಪ್ಪೇಸ್ವಾಮಿ ಹಲವು ಪ್ರಕರಣಗಳಲ್ಲಿ ಎಕರೆಗಟ್ಟಲೆ ಜಮೀನನನ್ಜು ಲಂಚವಾಗಿ ಕೇಳಿದ್ದ ಬಗ್ಗೆ ದೂರುಗಳು ದಾಖಲಾಗಿದ್ದವು.

ಸೈಟ್ ಹಾಗೂ ಭೂಮಿಯನ್ನೇ ಲಂಚವಾಗಿ ಕೇಳಿ ಇಡೀ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ತಿಪ್ಪೇಸ್ವಾಮಿ ಗುರಿಯಾಗಿದ್ದರು. ರಾಜ್ಯವ್ಯಾಪಿ ಭೂಪರಿವರ್ತನೆಗಾಗಿ ಬರುವ ಕಡತಗಳು ತಿಪ್ಪೇಸ್ವಾಮಿಯ ಲಂಚದಾಹಕ್ಕೆ ತಿಂಗಳುಗಟ್ಟಲೆ ಕೊಳೆಯುತ್ತಾ ಬಿದ್ದಿರುತ್ತಿದ್ದವು. ಇದಕ್ಕೆ ಬೇಸತ್ತು ಹಲವರು ಲೋಕಾಯುಕ್ತ ಕಚೇರಿಯ ಬಾಗಿಲು ಬಡೆದಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತಿಪ್ಪೇಸ್ವಾಮಿ ಹಾಗೂ ಅವರ ಟೀಮ್ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದ್ದರು.

ತಿಪ್ಪೇಸ್ವಾಮಿ ಅವರ ಬೆಂಗಳೂರಿನ ಗಿರಿನಗರ 4ನೇ ಹಂತದಲ್ಲಿರುವ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳ ದಾಳಿ ವೇಳೆ ಲಂಚಾವತಾರಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ತಿಪ್ಪೇಸ್ವಾಮಿ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಗೋಲ್ಡ್ ಬಿಸ್ಕೆಟ್ ಗಳು ಪತ್ತೆಯಾಗಿತ್ತು..

ಬೆಂಗಳೂರು ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕರಾದ, ತಿಪ್ಪೇಸ್ವಾಮಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆ.. ಲೋಕಾ ಅಧಿಕಾರಿಗಳಿಗೆ ಸಿಕ್ಕಿದ ಮಹತ್ವದ ದಾಖಲೆಗಳು. ಗಿರಿನಗರದ 4th ಫೇಸ್ ವಿಶ್ವೇಶ್ವರಯ್ಯ ರಸ್ತೆ ಬಳಿ ಇರುವ ಬಂಗಲೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾದ ಹಿನ್ನೆಲೆ.. ಲೋಕಾಯುಕ್ತ ಅಧಿಕಾರಿಗಳು ಅಕ್ಕಸಾಲಿಗರನ್ನ ಕರೆಸಿ ಪರಿಶಿಲನೆ ನಡೆಸಿದ್ರು..

ಬೆಂಗಳೂರು ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಲಕ್ಷ, ಲಕ್ಷ ನಗದು, ಬೆಲೆಬಾಳುವ ವಾಚ್‌ಗಳು ಪತ್ತೆಯಾಗಿವೆ. ತಿಪ್ಪೇಸ್ವಾಮಿ ಅವರ ಗಿರಿನಗರದ ಮನೆಯಲ್ಲಿ ಬೆಳಗ್ಗೆಯಿಂದ ಲೋಕಾಯುಕ್ತ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ತಿಪ್ಪೇಸ್ವಾಮಿ ಮನೆಗೆ ಅಕ್ಕಸಾಲಿಗರನ್ನ ಕರೆಸಿದ್ದು ಚಿನ್ನಾಭರಣಗಳ ಮೌಲ್ಯಗಳನ್ನ ಲೆಕ್ಕ ಹಾಕಿದ್ದಾರೆ..

 

 

ಗಿರಿನಗರದ 4ನೇ ಹಂತದ ವಿಶ್ವೇಶ್ವರಯ್ಯ ರಸ್ತೆ ಬಳಿ ತಿಪ್ಪೇಸ್ವಾಮಿ ಅವರ ಬಂಗಲೆ ಇದ್ದು, ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ಅವರ ನೇತೃತ್ವದಲ್ಲಿ ಈ ದಾಳಿ ವೇಳೆ ಪತಯ್ತೆಯಾಷದ ಚಿನ್ನದ ರಾಶಿಯಲ್ಲಿ ಏನೆಲ್ಲಾ ಪತ್ತೆಯಾಗಿತ್ತು ಆಂತ ನೋಡೋದ್ರಾದ್ರೆ.. ತಿಪ್ಪೇಸ್ವಾಮಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ನಡೆಸಿದ್ದ ‘ಲೋಕಾ’ ಆಧಕಿಕಾರಿಗಳೆ, ಸ್ಥಿರಾಸ್ತಿ ನೋಡುವುದಾದ್ರೆ.. 1 ನಿವೇಶನ, 2 ವಾಸದ ಮನೆ, 7-5 ಎಕರೆ ಕೃಷಿ ಜಮೀನು ಈ ಎಲ್ಲಾ ಸೇರಿ ಒಟ್ಟು ಮೌಲ್ಯ 2 ಕೋಟಿ 50 ಲಕ್ಷ ರೂಪಾಯಿಗಳು ಅಂತ ಆಮದಾಜಿಸಿಲಾಗಿದೆ.. ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ ರೂಪಾಯಿ 8 ಲಕ್ಷ ನಗದು
58 ಲಕ್ಷ 73 ಸಾವಿರದ 632 ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, 29 ಲಕ್ಷ 10 ಸಾವಿರ ಬೆಲೆಯ ವಾಹನ, ಒಟ್ಟು ಮೌಲ್ಯ ₹87,98,632, ಸ್ಥಿರಾಸ್ತಿ & ಚರಾಸ್ತಿಯ ಮೌಲ್ಯ 3 ಕೋಟಿ 38 ಲಕ್ಷ 86 ಸಾವಿರ 632 ರೂಪಾಯಿ ಎನ್ನಲಾಗ್ತಿದೆ..

ಲೋಕಾ ಬಲೆಗೆ ಬಿದ್ದ ಮತ್ತೋಬ್ಬ ಮಹಾನ್ ಭ್ರಷ್ಟ ಅಧಿಕಾರಿ.. ಕಾವೇರಿ ನಿಗಮದ ಎಂಡಿ ಮಹೇಶ್ ಮನೆ, ಕಚೇರಿ, ಸಂಬಂಧಿಕರೆ ನಿವಾಸಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.. ಈ ವೇಳೆ ಅಪಾರ ಪ್ರಮಾಣದ ಅಕ್ರಮದ ಮಹತ್ವದ ದಾಖಲೆಗಳು, ಚಿನ್ನಾಭರಣಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ,..

ಕಾವೇರಿ ನಿಗಮದ ಎಂಡಿ ಮಹೇಶ್ ಮೇಲೆ ಲೋಕಾಯುಕ್ತರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಕಳೆದ ವರ್ಷದಿಂದ ನಿಗಮದ ಎಂಡಿ ಆಗಿದ್ದ ಮಹೇಶ್ ತಮ್ಮ ದುರ್ವರ್ತನೆಗಳಿಂದ ಹಾಗೂ ಲಂಚಾವತಾರದಿಂದ ಕುಖ್ಯಾತಿ ಪಡೆದಿದ್ದರು. ಮಹೇಶ್ ಲಂಚಾವತಾರದ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು.

ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಎಂಡಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ವಿರುದ್ಧ ಹಲವು ದೂರು ಬಂದ ಹಿನ್ನೆಲೆ ಮಂಡ್ಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 9 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದ್ದಾರೆ.

ಮಂಡ್ಯದ ಕೆಆರ್ಎಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಳವಳ್ಳಿಯ ದಳವಾಯಿ ಕೋಡಿಹಳ್ಳಿ ನಿವಾಸದಲ್ಲೂ ಅಧಿಕಾರಿಗಳ ತಂಡ ತಲಾಷ್ ನಡೆಸುತ್ತಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದ್ದು, ಬೆಳಗ್ಗೆಯಿಂದ ಲೋಕಾಯುಕ್ತ ಪೊಲೀಸರು ಅಕ್ರಮಕ್ಕೆ ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ದೂರಿನನ್ವಯ ಮಹೇಶ್ ಮನೆ, ಸಂಬಂಧಿಕರ ಮನೆಗಳ ಮೇಲೆ ಹಾಗೂ ದಳವಾಯಿ ಕೋಡಿಹಳ್ಳಿಯಲ್ಲಿರುವ ಮಹೇಶ್ ಅವರ ಅತ್ತೆ ಅವರ ನಿವಾಸಗಳ ಮೇಲೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳು ಹಾಗೂ ಆಸ್ತಿ ಪತ್ರಗಳ ಪರಿಶೀಲಿಸಿದ್ರು..

ಇನ್ನು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಸಮೀಪದ ಪಂಪ್‌ ಹೌಸ್‌, ಮಹೇಶ್‌ ಅವರ ಪತ್ನಿ ಹೆಸರಲ್ಲಿರುವ ನಮ್ರತಾ ಪೆಟ್ರೋಲ್‌ ಬಂಕ್‌ ಮೇಲೆಯೂ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅನೇಕ ಮಹತ್ವದ ದಾಖಲೆಗಳನ್ನು ಜಾಲಾಡಿದ್ದಾರೆ..

ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಹಾಗೂ ಸಂಬಂಧಿಕರ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪವಿರುವ ದಳವಾಯಿಕೋಡಿಹಳ್ಳಿದ ಮಹೇಶ್ ಅವರ ನಿವಾಸದಲ್ಲಿ ಬೆಳಗ್ಗಿನಿಂದ ತನಿಖೆ ನಡೆಯುತ್ತಿದೆ. ಆಸ್ತಿ, ಚಿನ್ನಾಭರಣ ಹಾಗೂ ವಾಹನಗಳ ಮಾಹಿತಿ ಪಡೆದಿದ್ದಾರೆ.. ಇನ್ನು ಭ್ರಷ್ಟ ಆಧಿಕಾರಿ ಮಹೇಶ್ ಆವರ ಭ್ರಷ್ಟ ಭಂಢಾರದ ತೂಕ ಎಷ್ಟಿದೆ ಅಂತ ನೋಡೋದಾದ್ರೆ..

ಅಧಿಕಾರಿ ಮಹೇಶ್​ಗೆ ಸೇರಿದ 7 ಸ್ಥಳಗಳಲ್ಲಿ ರೇಡ್ ಮಾಡಿದ್ದ ಲೋಕಾಯುಕ್ತ ಅಧಿಕಾರಿಗೆಳು, ಬ್ರಷ್ಟರ ಬಿಲ ಆಗೆದು ಅವರ ಭಂಢಾರ ಬಯಲು ಮಾಡಿದ್ದಾರೆ.. ಮಹೇಶ್ ನೋಡೋದಾದ್ರೆ ಸ್ಥಿರಾಸ್ತಿ, 25 ನಿವೇಶನ, 1 ವಾಸದ ಮನೆ, 25 ಎಕರೆ ಕೃಷಿ ಜಮೀನು, ಅದ್ರ ಮವಲ್ಯ 4 ಕೋಟಿ 76 ಲಕ್ಷದ 33 ಸಾವಿರದ 956 ರೂಪಾಯಿ ಎಂದು ಅಂದಾಜಿಸಲಾಗಿದೆ.. ಇನ್ನು ₹1,82,284 ನಗದು, ₹15,00,000 ಚಿನ್ನಾಭರಣ, ₹25,00,000 ವಾಹನ, ₹1,71,05,000 ಇತರೆ ವಸ್ತುಗಳು. ಒಟ್ಟು ಮೌಲ್ಯ 2,12,87,284 ರೂ. ಸೇರಿದಂತೆ ಚರಾಸ್ತಿ & ಸಿರಾಸ್ತಿ ಒಟ್ಟು 6 ಕೋಟಿ 89 ಲಕ್ಷ 21 ಸಾವಿರ ಆಸ್ತಿ ಪತ್ತೆಯಾಗಿದೆ ಎನ್ನಲಾಗ್ತಿದೆ..

 

 

ಇನ್ನು ಮಂಡ್ಯದ ಕೊನ್ನಾಪುರ ಗ್ರಾಮದಲ್ಲಿರುವ ಮಹೇಶ ಅವರ ಪತ್ನಿ ನಮ್ರತಾ ಅವರ ತಂದೆ ನಂಜುಂಡಯ್ಯ ಅಲಿಯಾಸ್ ಕೃಷ್ಣ ಅವರ ಮನೆಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮದ ಸಂಪತ್ತು ಪತ್ತೆಯಾಗಿದ್ದು, ಅಲ್ದೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು.. ಲೊಕಾ ಅಧಿಕಾರಿಗಳು ಇವತ್ತಿನ ದಾಳಿಯಲ್ಲಿ ಪತ್ತಾದ ಎಲ್ಲಾವನ್ನು ಸಹ ಕೌಂಟ್​ ಮಾಡಿ ಪಂಚರ ಮುಂದೆ ಪೈಲ್ ಮಾಡುವ ಕೆಲಸ ಮಾಡಿದ್ದಾರೆ..

ಒಂದುಕಡೆ ಕಾವೇರಿ ನೀರಾವರ ನಿಗಮದ ಎಂಡಿ ಮಹೇಶ್ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ರೆ.. ಮತ್ತೊಂದು ಕಟಡೆ
ಲೋಕಾಯುಕ್ತ ದಾಳಿ ಹಿನ್ನಲೆಯಲ್ಲಿ ಜಿಲ್ಲೆಯಕಾವೇರಿ ನೀರಾವರ ನಿಗಮದ ಕಚೇರಿಗಳಲ್ಲಿ ಸಂಚಲನ ಮೂಡಿದೆ. ಮಹೇಶ್ ಅವರ ಮೇಲಿನ ದಾಳಿ ಇದೀಗ ಇಲಾಖೆಯ ಹಲವು ಅಧಿಕಾರಿಗಳ ಎದೆಯಲ್ಲಿ ಢವಢವ ಶುರುವಾಗಿದೆ.. ಹಲವರು ಎಲ್ಲಿ ಲೋಕಾ ಬಲೆ ನಮ್ಮ ಬುಡಕ್ಕೆ ಬರುತ್ತೋ ಅಂತ ಭಯಗೊಂಡಿದ್ದಾರೆ..

ರಾಜ್ಯ ರಾಜಕೀಯ ವಲಯದಲ್ಲಿ ಸದ್ಯ ಬಿಸಿಬಿಸಿ ಚರ್ಚಾ ಸುದ್ದಿಯಾಗಿರುವ ಅಬಕಾರಿ ಇಲಾಖೆಯ ಅಧೀಕಾರಿ ಮೇಲೆ ಸಹ ಲೊಕಾಯುಕ್ತ ದಾಳಿ ನಡೆದಿದೆ… ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹಾಗೂ ಅಧಿಕಾರಿಗಳ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರಾದ ಆರೋಪ ಕೇಳಿ ಬಂಧಿತ್ತು.. ಇನ್ನು ರಾಜ್ಯ ವ್ಯಾಪಿ ಬಾರ್ ಮಾಲೀಕರು ಪ್ರತಿಭಟನೆಯ ಎಚ್ಚರಿಕೆಯನ್ನು ಕೊಟ್ಟಿದ್ರು.. ಈ ನಡುವೆ ಸಿಎಂ ಸಿದ್ದು ನೇರವಾಗಿ ರಂಗ ಪ್ರವೇಶ ಮಾಡಿ ಕರ್ನಾಟಕ ಬಾರ್ ಮಾಲೀಕರ ಪ್ರತಿಭಟನೆಗೆ ಆಂತ್ಯ ಹಾಡಿ.. ಸಂದಾನದ ಮೂಲಕ ಮನವರಿಕೆ ಮಾಡಿ ಕ್ರಮದ ಸೂಚನೆ ಕೊಟ್ಟು ಕಳುಹಿಸಿದ್ರು..

ಮತ್ತೊಂದು ಕಡೆ ವಿಪಕ್ಷಗಳು ಅಬಕಾರಿ ಇಲಾಖೆಯಲ್ಲಿ 700 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡ್ತಿದ್ರು.. ಅಲ್ದೆ ಸರ್ಕಾರದ ವಿರುದ್ಧ ಗಂಭಿರ ಆರೋಪ ಮಾಡಿ ವಾಗ್ದಾಳಿಯನ್ನು ನಡೆಸಿದ್ರು.. ಈ ಹೊತ್ತಲ್ಲೇ ಬೆಂಗಳೂರು ಅಬಕಾರಿ ಇಲಾಖೆಯ ಗ್ರೇಡ್​ ಒನ್ ಅಧಿಕ್ಷಕ ​ಮೋಹನ್​.ಕೆ ಎಂಬ ಅಧಿಕಾರಿಯ ನಿವಾಸ, ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ..

ಬೆಂಗಳೂರಿನಲ್ಲಿ ಒಟ್ಟು ಹನ್ನೊಂದು ಕಡೆ ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ನಡೆದಿದೆ. ಇಂದು ಬೆಳಗ್ಗೆ ಏಳುಗಂಟೆಯಿಂದ ನಡೀತಿರೋ ದಾಳಿ
ಅಬಕಾರಿ ಇಲಾಖೆಯ ಎಸ್ ಪಿ ಮೋಹನ್ ಗೆ ಸಂಬಂಧಿಕರ ಮನೆಗಳ ಮೇಲೋ ಲೋಕಾ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ..
ಬೆಳಗ್ಗೆ ಸುಮಾರು 6.15ಕ್ಕೆ ಮೋಹನ್ ಮನೆ ಮೇಲೆ 15 ಅಧಿಕಾರಿಗಳಿಂದ ರೇಡ್ ಪ್ರಾರಂಭ ಮಾಡಿ ಸುದೀರ್ಘ ಶೋಧವನ್ನು ನಡೆಸಿದ್ರು..

ಅಬಕಾರಿ ಅಧೀಕ್ಷಕ ಮೋಹನ್ ಕೆ ಅವರ ನಿವಾಸದಲ್ಲಿಅಧಿಕಾರಿಗಳು ನಿರಂತರ ಶೋಧ ಮಾಡಿ, ಹಲವು ಮಹತ್ವದ ದಾಖಲೆಗಳು.. ಚಿನ್ನಾಭರಣ ಪತ್ತೆಯಾಗಿದೆ.. ಅಲ್ದೆ ನಗದು ಸಹ ಪತ್ತೆಯಾಗಿದ್ದು ಅ ಬಗ್ಗೆ ಪರಿಶಿಲನೆಯನ್ನು ಮಾಡಲಾಗ್ತಿದೆ ಎಂಬ ಮಾಹಿತಿ ಕೂಡ ಲಭ್ಯವಾಗ್ತಿದೆ.. ಅಷ್ಟೇ ಅಲ್ದೆ ಮೋಹನ್ ಅವರ ಸರ್ಕಾರಿ ವಾಹನದಲ್ಲಿದ್ದ ಕಲೆ ದಾಖಲಾತಿಗಳ ಪರಿಶೀಲನೆ ಕಾರ್ಯ ನಡೆಸಲಾಗಿದೆ ಎನ್ನಲಾಗ್ತಿದೆ..

ಬೆಂಗಳೂರು ಅಬಕಾರಿ ಅಧೀಕ್ಷಕ ಮೊಹನ್ ಅವರ ಮಲೆ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು.. ಬಾರ್ ಮಾಲೀಕರು.. ಸಾಲು ಸಾಲು ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೆ ಅಬಕಾರಿ ಇಲಾಖೆಯ ಅಧಿಕಾರಿ ಲೋಕಾ ಬಲೆಗೆ ಬಿದ್ದಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರಕ್ಕೆ.. ಹಾಗೂ ಲಂಚಾವತಾರಕ್ಕೆ ಕೈಗನ್ನಡಿ ಹಿಡದಂತೆ ಆಗಿದೆ ಅಂತ ಎಲ್ಲೆಡೆ ಸದ್ಯ ಚರ್ಚೆಗಳು ಶುರುವಾಗಿದೆ..

ಹಲವರು ಅಧಿಕ್ಷಕ ಮೋಹನ್ ಮೇಲೆ ಲೋಕಾ ದಾಳಿ ಅಬಕಾರಿ ಇಲಾಖೆಯ ಭ್ರಷ್ಟಾಚಾರದ, ಅಧಿಕಾರಿಗಳ ಹೀಂಡಿನಲ್ಲಿ ಒಬ್ಬರಷ್ಟೆ.. ಅಲ್ಲಿ ಭ್ರಷ್ಟ ಅಧಿಕಾರಿಗಳ ದಂಡೇ ಇದೆ ಅಂತಿದ್ದಾರೆ.. ಈ ನಡುವೆ ಇಲಾಖೆಯ ಹಲವು ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ ಅಂತ ಹೇಳಲಾಗ್ತಿದೆ.. ಅಷ್ಟೇ ಅಲ್ಲ ಮತ್ತೆ ಕೆಲವರು ಸಚಿವ ಆರ್​ ಬಿ ತಿಮ್ಮಾಪುರ್ ಅವರವರೆಗೂ ಲೋಕಾ ತನಿಖೆ ಹೋದ್ರೂ ಆಶ್ಚರ್ಯವಿಲ್ಲ ಅಂತಿದ್ದಾರೆ ಎನ್ನಲಾಗ್ತಿದೆ..

ಲೋಕಾ ಬಲೆಗೆ ಬಿದ್ದ ಮಹಾನ್ ಭ್ರಷ್ಟ ಅಧಿಕಾರಿ.. ಕಾವೇರಿ ನಿಗಮದ ಎಂಡಿ ಮಹೇಶ್ ಮನೆ, ಕಚೇರಿ, ಸಂಬಂಧಿಕರೆ ನಿವಾಸಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.. ಈ ವೇಳೆ ಅಪಾರ ಪ್ರಮಾಣದ ಅಕ್ರಮದ ಮಹತ್ವದ ದಾಖಲೆಗಳು, ಚಿನ್ನಾಭರಣಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ,..

ಕನಕಪುರ ರಸ್ತೆಯಲ್ಲಿರುವ ವಕೀಲ್ ಗಾರ್ಡನ್ ಸಿಟಿಯಲ್ಲಿ ವಾಸವಿರೋ ಬೆಂಗಳೂರು ದಕ್ಷಿಣ ಅಬಕಾರಿ ಅಧೀಕ್ಷಕರಾದ ಕೆ.ಮೋಹನ್​ಗೆ ಸೇರಿದ 5 ಸ್ಥಳಗಳಲ್ಲಿ ಲೋಕಾ ಟೀಂ ಶೋಧಕಾರ್ಯ ನಡೆಸಿದೆ. ಇವರು ಹೊಂದಿರೋ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ 3 ನಿವೇಶನಗಳು. 2 ವಾಸದ ಮನೆಗಳು, 2 ರಿಂದ 25 ಎಕರೆಯಷ್ಟು ಕೃಷಿ ಜಮೀನು ಹೊಂದಿದ್ದಾರೆ.

ಎಲ್ಲಾ ಸೇರಿ ಒಟ್ಟು ಮೌಲ್ಯ 3 ಕೋಟಿ 22 ಲಕ್ಷ 8 ಸಾವಿರ ರೂಪಾಯಿ ಇದೆ. ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 1 ಲಕ್ಷ 17 ಸಾವಿರ 898 ರೂಪಾಯಿ ನಗದು ಇದೆ. 44 ಲಕ್ಷ 58 ಸಾವಿರ 200 ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, 35 ಲಕ್ಷ ಬೆಲೆಯ ವಾಹನಗಳು. ಬ್ಯಾಂಕ್ ಎಫ್ ಡಿಯಲ್ಲಿ 35 ಲಕ್ಷ ರೂಪಾಯಿ ಇದ್ದು, ಎಲ್ಲಾ ಸೇರಿ ಒಟ್ಟು ಮೌಲ್ಯ 1 ಕೋಟಿ 15 ಲಕ್ಷ 76 ಸಾವಿರದ 098 ರೂಪಾಯಿ. ಇವರ ಸ್ಥಿರಾಸ್ತಿ ಮತ್ತು ಚರಾಸ್ಥಿ ಸೇರಿ ಒಟ್ಟು ಮೌಲ್ಯ 4 ಕೋಟಿ 37 ಲಕ್ಷ 84 ಸಾವಿರ 098 ರೂಪಾಯಿ ಇದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.. ಮಂಗಳೂರು ನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿಯವರ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ನಗರದ ಕಂಕನಾಡಿ ಸಮೀಪದ ವೆಲೆನ್ಸಿಯಾದಲ್ಲಿರುವ ಕೃಷ್ಣವೇಣಿಯವರ ನಿವಾಸ ಹಾಗೂ ನಗರದ ಮಲ್ಲಿಕಟ್ಟೆಯಲ್ಲಿರುವ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ..

ಈ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ ಅಂತ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.. ಆದ್ರೆ ಒಟ್ಟಾರೆಯಾಗಿ ಎಷ್ಟು ಪ್ರಮಾಣದ ಅಕ್ರಮ ಆಸ್ತಿ, ಹಾಗೂ ಆದಾಯಕ್ಕಿಂತ ಮೀರಿದ ಆಸ್ತಿಯ ವಿವರಣೆ ಏನು.? ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ.. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಎರಡು ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದಾರೆ.

ಇನ್ನು ಕೃಷ್ಣವೇಣಿ ಚಿಕ್ಕಬಳ್ಳಾಪುರದಲ್ಲಿದ್ದಾಗ ಆವರ ವಿರುದ್ದ, ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ್ದಾರೆಂದು ದೂರುಗಳು ದಾಖಲಾಗಿತ್ತು.. ಆದರ ಹಿನ್ನಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ.. ಅಷ್ಟೇ ಅಲ್ದೆ ಕೃಷ್ಣವೇಣೀ ಅವರು ಚಿಕ್ಕಬಳ್ಳಾಪುರದಲ್ಲಿದ್ದಾಗ.. ಮೈನ್ಸ್ ಇಲಾಖೆಯ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೆಳಿಬಂದಿತ್ತು.. ಖುದ್ದು ಕೃಷ್ಣವೇಣಿ ವಿರುದ್ದ ಹಲವು ದೂರುಗಳು ದಾಖಲಾಗಿತ್ತು.. ಈ ನಡುವೆ ಅವರು ಮಂಗಳೂರಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿದ್ದರು..

ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಎಂ.ಸಿ.ಕೃಷ್ಣವೇಣಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ತಂಡ ಶೋಧ ನಡೆಸಿದೆ. ಇವರ ಬಳಿ ಒಟ್ಟು ಸ್ಥಿರಾಸ್ತಿಯ ಅಂದಾಜು ಮೌಲ್ಯ 3 ನಿವೇಶನ ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು ಇದೆ.

ಎಲ್ಲಾ ಸೇರಿ ಒಟ್ಟು ಮೌಲ್ಯ 10 ಕೋಟಿ 41 ಲಕ್ಷ 38 ಸಾವಿರ 286 ರೂಪಾಯಿ ಇದೆ. ಒಟ್ಟು ಚರಾಸ್ತಿಯ ಅಂದಾಜು ಮೌಲ್ಯ 56 ಸಾವಿರದ 450 ರೂಪಾಯಿ ನಗದು, 66 ಲಕ್ಷ 71 ಸಾವಿರದ 445 ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು, 60 ಲಕ್ಷ ರೂಪಾಯಿ ಬೆಲೆಬಾಳುವ ವಾಹನಗಳು, 24 ಲಕ್ಷ 40 ಸಾವಿರ ರೂಪಾಯಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಈ ಎಲ್ಲಾ ಸೇರಿ ಒಟ್ಟು ಮೌಲ್ಯ 1,51, 67,895 ರೂಪಾಯಿ ಇದ್ದು, ಸ್ಥಿರಾಸ್ತಿ ಹಾಗೂ ಚರಾಸ್ಥಿ ಸೇರಿ ಒಟ್ಟು ಮೌಲ್ಯ 11,93,06,181 ರೂಪಾಯಿ ಇದೆ.

ಒಂದೇ ದಿನ ನಾಲ್ವರು ಭ್ರಷ್ಟರ ಬಿಲಿಗಿಗೆ ಹೊಗೆಯಿಟ್ಟು.. ಬಗೆದು ಭ್ರಷ್ಟ ಭಂಡಾರ ಬಯಲುಮಾಡಿರು ಲೊಕಾಯುಕ್ತರು.. ಮುಂದಿನ ಕಾನುನಿ ಸಮರಕ್ಕೆ ಹಣಿಯಾಗ್ತಿದ್ದಾರೆ.. ಈ ನಡುವೆ ರಾಜ್ಯದ ಆಡಳಿತವಲಯದಲ್ಲಿ ಹಲವು ಅಧಿಕಾರಿಗಳಿಗೆ ‘ಲೋಕಾ’ ಗುಮ್ಮ ಕಾಡುತ್ತಿದೆ ಅನ್ನೋ ಸುದ್ದು ಸದ್ಯ ಎಲ್ಲೆಡೆ ಗುಸು ಗುಸು ಆಗ್ತಿದೆ…

ಲೋಕಾಯುಕ್ತ ಅಧಿಕಾರಿಗಳ ದಾಳಿಗಳ ಬಗ್ಗೆ ಒಂದಷ್ಟು ಜನಸಾಮಾನ್ಯರಲ್ಲಿ ಅನುಮಾನಗಳು.. ಗೊಂದಲುಗಳು ಇರೋದು ಸಹಜ.. ಆದ್ರೆ ರಾಜ್ಯದಲ್ಲಿ ‘ಲೋಕಾ’ ಅಧಿಕಾರಿಗಳ ಅಲರ್ಟ್​ ಬೆನ್ನಲ್ಲೇ ಆಡಳಿತ ವಲಯದಲ್ಲಿ ಗುಸುಗುಸು… ಪಿಸುಪಿಸು ಶರುವಾಗಿದೆ.. ಅಷ್ಟಕ್ಕೂ ಏನಪ್ಪಾ ಅಂತಹ ಗುಸುಗುಸು ಪಿಸುಪಿಸು ಅಂತಿದ್ದಾರೆ.

ಅಡಿಕೆಗೆ ಹೋದಾ ಮಾನ ಅನೇ ಕೊಟ್ರು ಬರೋಲ್ಲ ಅಂತಾರೆ.. ಹಾಗೇಯೇ ಅಡಿಕೆ ಕದ್ರು ಕಳ್ಳಾನೇ.. ಆನೇ ಕ್ರದು ಕಳ್ಳಾನೇ.. ಅದೇರಿತಿಯಾಗಿ ಹತ್ತು ರೂಪಾಯಿ ಲಂಚಪಡೆದ್ರು ತಪ್ಪೆ.. ಹತ್ತು ಕೋಟಿ.. ಅಷ್ಟೇ ಯಾಕೆ ಹತ್ತು ಸಾವಿರ ಕೋಟಿ ಲಂಚಪಡೆದ್ರು ತಪ್ಪೆ.. ಇಷ್ಟೇಲ್ಲಾ ನಾವು ಏಕೆ ಪೀಠೀಕೆ ಹಾಕ್ತಿದ್ದದೇವೆ ಅಂದ್ರೆ.. ಕಳ್ಳ ಕಳ್ಳಾನೇ.. ಅದು ದೊಡ್ಡ ಕಳ್ಳ ಚಿಕ್ಕ ಕಳ್ಳ ಅಂತ ಇರೋಲ್ಲಾ ಕಾನೂನುನ ಮುಂದೆ ಎಲ್ರೂ ಓಂದೆ.. ಆದ್ರೆ ಲೋಕಾ ದಾಳಿಗಳ ವಿಚಾರದಲ್ಲಿ ಅದು ಆಗ್ತಿದೆಯಾ.? ಆಗಿದ್ರೆ ಎಷ್ಟರ ಪ್ರಮಾಣದಲ್ಲಿ ಆಗಿದೆ.. ಒಮದು ವೇಳೆ ಆಗ್ತಿಲ್ಲ ಆಂದ್ರೆ ಏಕೆ ಆಗ್ತಿಲ್ಲ ಅನ್ನೋದೆ ಸದ್ಯದ್ಯದ ಚರ್ಚೆ..

ಲೋಕಾಯುಕ್ತ ಅಧಿಕಾರಿಗಳ ಸಾಲು ಸಾಲು ದಾಳಿಗಳ ಬೆನ್ನಲ್ಲೆ ಇದೀಗ.. ರಾಜ್ಯದ ಆಡಳಿತವಲಯದಲ್ಲೋಂದು ಚರ್ಚೆ ಶುರುವಾಗಿದೆ.. ನಾವು ಮಾತ್ರ ಭ್ರಷ್ಟರಾ..? IAS, IPS ಅಧಿಕಾರಿಗಳು ಸಾಚಾನಾ..? ಅಂತ ಲೋಕಾ ರೇಡ್ ಬೆನ್ನಲ್ಲೇ ರಾಜ್ಯ ಆಡಳಿತ ವಲಯದಲ್ಲಿ ಗುಸಗುಸು..! ಪಿಸುಪಿಸು ಶುರುವಾಗಿದೆ.. ಇನ್ನು IAS, IPSಗಳ ಮೇಲೆ ಲೋಕಾಯುಕ್ತ ದಾಳಿ ಯಾಕಿಲ್ಲ ಎಂಬ ಚರ್ಚೆಗಳು ಸಹ ತುಟಿಗಳ ಒಳಗೆಯೇ ಜೋರಾಗಿ ನಡೆಯುತ್ತಿದೆ..

KAS ಹಾಗೂ ಅಧೀನ ಅಧಿಕಾರಿ ವಲಯದಲ್ಲಿ ಈ ಬಗೆಯ ಚರ್ಚೆಯಂತೂ ತೀವ್ರವಾಗಿದ್ರೆ.. ಇತ್ತ PWD, MI, RDPR ವಲಯದಲ್ಲೂ ಇದೇ ವಿಚಾರದ ಬಗ್ಗೆ ಚರ್ಚೆ, ಮಾತೆತ್ತಿದ್ರೆ ನಮ್ಮ ಮೇಲೆ ಲೋಕಾಯುಕ್ತ ದಾಳಿ ನಡೆಯುತ್ತದೆ..! ದೊಡ್ಡ ಕರಪ್ಶನ್ ಬಗ್ಗೆಯೂ ಲೋಕಾಯುಕ್ತ ಗಮನ ಹರಿಸಲಿ..!ಅಂತಿದ್ದಾರೆ…

ಇನ್ನು ಈ ಹಿಂದೆ ಸುಮಾರು ಎರಡು ವರ್ಷಗಳ ಹಿಂದೆ.. ಬೆಂಗಳುರುನಗರದ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಮೇಲೆ ಕೊನೆಯ ದಾಳಿ ಅಂತ ಹೇಳಾಲಾಗ್ತಿದೆ.. ಅಂದ್ರೆ ಭ್ರಷ್ಟಾಚಾರ ತನಿಖೇ ಇಲಾಖೆ ಆಂದ್ರೆ ಎಸಿಬಿ ದಾಳಿ ಮಾಡಿದ್ದು ಬಿಟ್ರೆ ಈ ವರೆಗೆ ಆ ಗ್ರೇಡ್​ ಮಟ್ಟದ ಅಧಿಕಾರಿಗಳ ಮೇಲೆ ಎಲ್ಲೂ ದಾಳಿ ಆಗಿರೋದು ದಾಖಲಾಗಿಲ್ಲ.. ಅಥವಾ ಮುನ್ನಲೆಗೆ ಬಂದಿಲ್ಲ ಅಂತ ಹೇಳಲಾಗ್ತಿದೆ..

ಆ ಬಳಿಕ ಮತ್ತೆ ಯಾವೋಬ್ಬ IAS ಅಧಿಕಾರಿಯ ಮೇಲೂ ದಾಳಿ ನಡೆದಿಲ್ಲ, ಆದ್ರೆ ಈ ಹಿಂದೆ ಕ್ರೀಡಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಐಎಎಸ್ ಆದಿಕಾರಿ ಕಪಿಲ್ ಮೋಹನ್ ಅವರ, ಮೇಲೆ ಲೋಕಾ ದಾಳಿ ನಡೆದಿತ್ತು.. ಅದು ಕೂಡ ಸಿಐಡಿ ಎಕಾಮಿಕ್ ವಿಂಗ್ ಹಾಗೂ ಐಟಿ ಅಧಿಕಾರಿಗಳ ಜಂಟಿ ದಅಳಿ ಬಳಿಕ.. ಸರ್ಕಾದ ಅನುಮತಿಯಂತೆ.. ಆರ್​ಡಿಪಿಆರ್ ಅಧಿಕೃತ ಆದೇಶದಂತೆ 2015ರ ಸೆಪ್ಟಂರ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು..

ಇನ್ನು ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಆಂದ್ರೆ ಭ್ರಷ್ಟರು ನಿದ್ದೆಗಣ್ಣಿನಲ್ಲೂ ಬೆಚ್ಚಿ ಬೀಳ್ತಿದ್ದ ಕಾಲವೊಂದಿತ್ತು ಅದು ನ್ಯಾ.ವೆಂಕಟಾಚಲಯ್ಯ ಅವರು ಲೋಕಾಯುಕ್ತರಾಗಿದ್ದಾಗ, ಬಳಿಕ ಬಂದಂತ ನ್ಯಾ.ಸಂತೋಷ್ ಹೆಗಡೆ ಅವರು ಕಾಲದಲ್ಲೂ ಆದೇ ಚಾರ್ಮ್​ ಮುಂದುವರಿದಿತ್ತು.. ಆದ್ರ ಕಾಲಾನಂತರದಲ್ಲಿ ಲೋಕಾಯುಕ್ತದ ಆಧಿಕಾರವು… ಎಸಿಬಿಗೆ ವರ್ಗಾಯಿಸಲಾಯ್ತು.. ಆದ್ರಿಂದ ಭ್ರಷ್ಟರ ಪಾಲಿಗೆ ಸಿಂಹ್ಸ್ವಪ್ನವಾಗಿದ್ದ ಲೋಕಾಯುಕ್ತ 2018ರಿಂದ 2022ರವರೆಗೂ ಹಲ್ಲುಕಿತ್ತಿದ ಹಾವಿನಂತೆ ಇತ್ತು ಅನದ್ನೋದು ಕೆಲ ರಾಜಕೀಯ ಚಿಂತಕರ ಅಭಿಪ್ರಾಯವಾಗಿದೆ..

ಇತ್ತಚಿಗೆ ನ್ಯಾಯಾಲಯಗಳ ಮಧ್ಯ ಪ್ರವೇಶದಿಂದ ಇತಿಹಾಸದ ಪುಟಗಳಲ್ಲಿ ಸೇರುತ್ತಿದ್ದ, ಲೋಕಾಯುಕ್ತಕ್ಕೆ ಮರುಜೀವ ಬಂದಿದೆ.. ಅಷ್ಟೇ ಅಲ್ಲ ಭ್ರಷ್ಟರು ಮತ್ತೆ ಅಲರ್ಟ್ ಆಗ್ತಿದ್ದಾರೆ.. ಲಂಚಾಸುರರು ಮೈಯಲ್ಲಾ ಕಣ್ಣು ಮಾಡಿಕೊಳ್ಳು ಪರಿಸ್ಥಿತಿ ಮತ್ತೆ ನಿರ್ಮಾಣವಾಗ್ತಿದೆ ಅಂತಿದ್ದಾರೆ.. ಜನಸಾಮಾನ್ಯರು.. ಏಕೆಂದ್ರೆ ಕಳದೆ ಕೆಲ ತಿಂಗಳಿಂದ ಲೋಕಾ ಆದೀಕಾರಿಗಳು ಎಲ್ಲಾ ಭ್ರಷ್ಟರಿಗೂ ಬಿಸಿ ಮುಟ್ಟಿಸುವ, ಕೆಲಸ ಶುರು ಮಾಡ್ತಿದ್ದಾರೆ..

ರಾಜ್ಯಾದದ್ಯಂತ ಎಲ್ಲಾ ಚೆಕ್​ ಪೋಸ್ಟ್​ಗಳ ಮೇಲೆ ಲೋಕಾಯುಕ್ತರು ಏಕಕಾಲದಲ್ಲಿ ದಾಳಿ ನಡೆಸಿ.. ಸಾರಿಗೆ ಇಲಾಖೆ ಅಧಿಕಾರಿಗಳ ಅಕ್ರಮಗಳ ಅಡ್ಡೆಗಳನ್ನು ಪುಡಿಗುಟ್ಟಿದ್ದರು.. ಅಷ್ಟೇ ಅಲ್ಲ ಶಾಲಾ ಕಾಲೇಜುಗಳ ಮಕ್ಕಳ ಬಳಿ ಹಣ ಪೀಕುವ ಮಾಸ್ಟಾರ್​ ಗಳ ಬೆವರಿಳಿಸಿದ್ರು.. ಜನಸಾಮನ್ಯರ ಪೀಡಿಸುವ ಪಿಡಿಓಗಳ ಬೆಂಡ್ ಎತ್ತಿ… ಅವರ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ಕೆಲಸ ಮಾಡ್ತಿದ್ದಾರೆ.. ಈ ನಡುವೆ ಸದ್ಯ ಮಹಾನ್ ಭ್ರಷ್ಟಾಚಾರಿಗಳ ಮೆಲೆ ದಾಳಿ ಮಾಡಿದ್ದು.. ಇದೀಗ ಮತ್ತಷ್ಟು ಹಸಿಬಸಿ ಚರ್ಚೆಗಳು ಶುರುವಾಗಿದೆ..

ಕೆಳಹಂತದ ಆಧಿಕಾರಿಗಳ ಮೆಲೆ ಲೋಕಾಸ್ತ್ರಾ ಪ್ರಯೋಗವಾಗ್ತಿದೆ.. ಆದ್ರೆ ಲೋಕಾಯುಕ್ತರು IAS, IPSಗಳ ಮೇಲೂ ನಿಗಾ ಇಡಬೇಕು ಅಂತಿದ್ದಾರೆ.. ನಾವಷ್ಟೇ ಭ್ರಷ್ಟಾಚಾರಿಗಳಾ..? ನಾವೇಲ್ಲಾ ಸರಿಯಿಲ್ಲ ನೀವೇಲ್ಲಾ ಸಾಚಾಗಳಾ ಅಂತ ಅವರಲ್ಲಿ ಅವರೇ ಪಿಸುಗುಡ್ತಿದ್ದಾರೆ..ಅಷ್ಟೇ ಅಲ್ಲ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, IAS ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಯಾಕಿಲ್ಲ..? ಅವರು ಮನುಷ್ಯರಲ್ಲವೇ ಅವರು ತಪ್ಪೇ ಮಾಡಿಲ್ವೇ ಅನ್ನೋ ಮಾತುಗಳು ಸಹ ಕೇಳಿ ಬರ್ತಿದೆ..

ಈ ನಡುವೆ ಅಂತಹ ಹಿರಿಯ ಐಎಎಸ್ ಅಧಿಕಾರಿಗಳ ಮೇಲೆ ಏಕೆ ದಾಳಿಯಿಲ್ಲ.. ಅಂತ ನೋಡೋದಾದ್ರೆ.. ಹಲವರು ಹಲವು ಕಾರಣಗಳನ್ನು, ವಿಚಾರಗಳನ್ನ ಹೇಳಲು ಮುಂದಾಗ್ತಾರೆ.. ಆದ್ರಲ್ಲಿ ಕೆಲ ಪ್ರಮುಖ ಅಂಶಗಳನ್ನು ನಾವು ನೋಡೋದಾದ್ರೆ.. ಮೊದಲನೆಯದಾಗಿ IAS, IPSಗಳು ಜನಸಾಮಾನ್ಯರ ಸಂಪರ್ಕಕ್ಕೆ ಸಿಗುವುದಿಲ್ಲ… ಎರಡನೇಯದಾಗಿ IASಗಳು ಕಡತಗಳಿಗೆ ಅಂತಿಮವಾಗಿ ಸಹಿ ಹಾಕುತ್ತಾರೆ.. ಮೂರನೆಯದಾಗಿ IASಗಳ ಮೇಲೆ ದೂರು ದಾಖಲಾಗೋದು ಬಹಳ ವಿರಳ.. ನಾಲ್ಕನೆಯದಾಗಿ IAS, IPSಗಳ ಮೇಲೆ ದೂರು ನೀಡಲು ಜನರ ಹಿಂದೇಟು ಹಾಕ್ತಾರೆ ಸಹಜವಾಗಿ ಅನ್ನೋದು.. ಐದನೆಯದಾಗಿ ದೊಡ್ಡವರನ್ನು ಎದುರು ಹಾಕ್ಕೊಂಡ್ರೆ ಸಮಸ್ಯೆ ಆಗುತ್ತೇನೋ ಅನ್ನೋ ಭಯದಲ್ಲಿ ಸಾಮಾನ್ಯ ಜನರಿದ್ದಾರೆ ಅಂತ ಹೇಲಲಾಗ್ತಿದೆ.. ಮತ್ತೊದು ವರ್ಗದ ಜನರು ಒಂದು ವೇಳೆ ದೂರು ದಾಖಲಾದ್ರೆ ಕ್ರಮ ಖಚಿತತೆ ಬಗ್ಗೆ ಜನರಿಗಿನ್ನೂ ವಿಶ್ವಾಸ ಮೂಡಿಲ್ಲ.. ಅಂತಹ ವಿಶ್ವಸಾಸ ಮೂಡಿಸುವ ಕೆಲಸ ಮೊದಲು ಆಗಬೇಕು ಅಂತಿದ್ದಾರೆ..

ಇನ್ನೂ ಇಂತಹ ವಿಚಾರಗಳನ್ನು ಅಲ್ಲಗೆಳೆಯುತ್ತಿರುವ ಲೊಕಾಯುಕ್ತ ಅಧಿಕಾರಿಗಳು ನಮಗೆ ಮಾಹಿತಿ ಮುಖ್ಯ, ಹುದ್ದೆ, ಹಿರಿತನ ಅಲ್ಲ.. ಭ್ರಷ್ಟಾಚಾರ ಯಾರೇ ಮಾಡಿದ್ರು ಕ್ರಮ ಶತಸಿದ್ಧ ಅಂತಿದ್ದಾರೆ.. ಯಾರೆಲ್ಲ ಮೇಲೆ ‘ಲೋಕಾ’ ದಾಳಿ ಮಾಡಬಹುದು ಗೊತ್ತಾ..?, FDA, KAS ಅಧಿಕಾರಿಗಳ ಮೇಲೆ ಮಾತ್ರ ರೇಡ್ ಮಾಡ್ಬೇಕಾ..? , IAS, IPS ಅಧಿಕಾರಿಗಳ ಮೇಲೂ ದಾಳಿ ಮಾಡಬಹುದಾ..?
ಸರ್ಕಾರದ ಅಧೀನದ ಅಧಿಕಾರಿಗಳ ಮೇಲೂ ದಾಳಿ ನಡೆಸಬಹುದು, ಖಚಿತ ಮಾಹಿತಿ ಮೇರೆಗೆ ಕೋರ್ಟ್ ಆದೇಶದ ಮೇಲೆ ದಾಳಿ, ಭ್ರಷ್ಟ ಅಧಿಕಾರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಬಹುದು ಅಂತಿದ್ದಾರೆ.. ಲೊಕಾ ಆಧಿಕಾರಿಗಳು..

ಇನ್ನು ಹಲವರಿಗೆ ಲೋಕಾಯುಕ್ತ ದಾಳಿ ಹೇಗೆ ನಡೆಯುತ್ತೆ..? ಪ್ರಕ್ರಿಯೆಗಳೇನು..? ಅನ್ನೋದು ಬಹಳ ಜನರಿಗೆ ಈವರೆಗೂ ಒಂದುಷ್ಟು ಗೊಂದಲ ಇದೆ.. ಆ ಕೆಲವು ಗೊಂಧಲಗಳನ್ನು ನಿವಾರಿಸುವ ಒಂದು ಪ್ರಯತ್ನ ಆಗ್ತಿದೆ.. ಸಾಮಾನ್ಯವಾಗಿ ಲೊಕಾಯುಕ್ತ ಅಧಿಕಾರಿಗಳು ಖಚಿತ ಮಾಹಿತಿ ಮೆರೆಗೆ ದಅಳಿ ಮಾಡಿ.. ತದನಂತರ ಆರೋಪಿ ಅಧಿಕಾರಿಯ ಚರಾಸ್ತಿ, ಸ್ಥಿರಾಸ್ತಿಗಳ ಮಾಹಿತಿ ಸಂಗ್ರಹ
ದಾಖಲೆಗಳು, ಬ್ಯಾಂಕ್ ಅಕೌಂಟ್, ನಗದು, ಚಿನ್ನಾಭರಣ, ಬೆಲೆ ಬಾಳುವ ಎಲ್ಲಾ ವಸ್ತುಗಳ ಮಾಹಿತಿ ಸಂಗ್ರಹಿಸುತ್ತಾರೆ..

ಬಳಿಕ ದಾಳಿ ವೇಳೆ ಸಿಕ್ಕ ವಸ್ತುಗಳ ಬಗ್ಗೆ ಸ್ಥಳದಲ್ಲೇ ಪಂಚನಾಮೆ ಮಾಡಲಾಗುತ್ತೆ, ಆರೋಪಿತರ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಸ್ಥಳದಲ್ಲೇ ಪಟ್ಟಿ ತಯಾರು
ಆಸ್ತಿ ವಿವರಗಳ ಪಟ್ಟಿಗೆ ಆರೋಪಿತರ ಸಹಿ ಪಡೆಯಲಾಗುತ್ತದೆ. ಯಾವುದೇ ವಸ್ತುಗಳನ್ನು ಲೋಕಾಯುಕ್ತರು ಸೀಜ್ ಮಾಡೋದಿಲ್ಲ ಬದಲಿಗೆ ಅಕ್ರಮ ಗಳಿಕೆ ಬಗ್ಗೆ ಮಾಹಿತಿಯಷ್ಟೇ ಸಂಗ್ರಹಿಸ್ತಾರೆ.. ತದನಂತರ ಅಕ್ರಮ ಆಸ್ತಿ ಅಥವಾ ತಾವು ರೆಡ್ ಮಾಡಿದ ಮನೆ ಕಚೇರಿ ಕಾರ್ ಇತಯ್ಯಾದಿಕಡೆ ಸಿಕ್ಕ ವಸ್ತುಗಳ ಸಂಪೂರ್ಣ ಪಟ್ಟಿ ತಯಾರಿಸುತ್ತಾರೆ.. ಎಷ್ಟರ ಮಟ್ಟಿಗೆ ಆಮದ್ರೆ ಕಾಸ್ಟ್ಲಿ ಚಪ್ಪಲಿಗಳಿಂದ ಹಿಡಿದು.. ಮನೆಗೆ ಬಳಸಿರುವ ಟೈಲ್ಸ್​.. ಡೋರ್​ ಇತ್ಯಾದಿ ಎಲ್ಲವೂ ಪಿನ್​ ಟು ಪಿನ್ ಮಾಹಿತಿ ಕಲೆ ಹಾಕುತ್ತಾರೆ..

ಭ್ರಷ್ಟಚಾರ ಆರೋಪಿತರ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಪಂಚರ ಮುಂದೆ ಸಹಿಪಡೆದು ಬರುತ್ತಾರೆ.. ಅಲ್ದೆ ಮತ್ತೆ ವಿಚಾರಣೆಗೆ ಅವಶ್ಯಕತೆಯಿದ್ರೆ ಅವರಿಗೆ ನೊಟೀಸ್ ಕೊಟ್ಟು ಬರುವ ಅಥವಾ ಬಳಿಕ ತದನಂತರ ದಿನಗಲ್ಲಿ ನೊಟೀಸ್ ಕೊಡುವ ಸಾಧ್ಯತೆಕೂಡ ಇರುತ್ತದೆ.

ಇನ್ನು ಮಾಹಿತಿ ಸಂಗ್ರಹಿಸಿದ ಬಳಿಕ ವಿಸ್ತೃತ ಚಾರ್ಜ್ಶೀಟ್ ಸಿದ್ಧತೆ ಮಾಡಲಗುತ್ತದೆ,, ಅಕ್ರಮ ಆದಾಯ ಗಳಿಕೆ ಬಗ್ಗೆ ಸಂಪೂರ್ಣ ಸಾಕ್ಷ್ಯಗಳ ಸಂಗ್ರಹಮಾಡಿ,, ನಮತರ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹ ಮಾಡಿ ಚಾರ್ಜ್ಶೀಟ್ ತಯಾರಿ ಮಾಡಲಗುತ್ತದೆ.. ಚಾರ್ಜ್ಶೀಟ್ ಸಿದ್ಧಪಡಿಸಿದ ಬಳಿಕ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗುತ್ತದೆ. ಪ್ರಾಸಿಕ್ಯೂಷನ್ಗೆ ಅನುಮತಿ ಸಿಕ್ಕ ಬಳಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಿ., ಅನುಮತಿ ಸಿಕ್ಕ ಬಳಿಕ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತದೆ.. ನಂತರದಲ್ಲಿ ಕೋರ್ಟ್ ಬಳಿಕ ಟ್ರಯಲ್, ವಾದ-ಪ್ರತಿವಾದ, ಸಾಕ್ಷ್ಯಗಳ ಹೇಳಿಕೆ ದಾಖಲು
ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ..

ಇನ್ನು ಅನೇಕ ದಾಳಿಗಳ ಮಾಹಿತಿ, ಸುದ್ದಿಗಳು, ಭ್ರಷ್ಟರಿಗೆ ಬಿಸಿ, ಡ್ರಿಲ್ , ಲಾಕ್ ಇತ್ಯಾದಿಗಳನ್ನು ನಾವು ಮಾದ್ಯಮಗಳಲ್ಲಿ ಕೇಳು್ತೇವೇ, ನೊಡಿದ್ದೇವೆ ಆದ್ರೆ ಕಾನೂನಿನ ಕ್ರಮ ಎಲ್ಲಿ ಆಗುತ್ತಿದೆಯಾ..
ನಿಜವಾಗ್ಲೂ ಭ್ರಷ್ಟರು ಬುದ್ಧಿ ಕಲಿಯುತ್ತಿದ್ದಾರಾ..? ಮತ್ತೆ ಮರುಕಳಿಸುತ್ತಾ ನ್ಯಾ. ಆರ್.ಜೆ.ವೆಂಕಟಾಚಲಯ್ಯ ಕಾಲ..?, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗುತ್ತಾ ಲೋಕಾಯುಕ್ತ..? ಮತ್ತೆ ಶುರುವಾಗುತ್ತಾ ಲೋಕಾಯುಕ್ತಕ್ಕೆ ಸುವರ್ಣಯುಗ..?, ಎಸಿಬಿ ರಚನೆ ಬಳಿಕ ಚಾರ್ಮ್ ಕಳೆದುಕೊಂಡಿದ್ದ ಲೋಕಾಯುಕ್ತ
ಹಲ್ಲಿಲ್ಲದ ಹಾವಿನಂತಿದ್ದ ‘ಲೋಕಾ’ಗೆ ಕೋರ್ಟ್ ಮರುಜೀವ ಕೊಟ್ಟಿದ್ದು, ಕೆಲ ವರ್ಷಗಳಿಂದ ಸಣ್ಣ ತಿಮಿಂಗಲಗಳಿಗೆ ಮಾತ್ರ ‘ಲೋಕಾ’ ಗಾಳ
ನಿನ್ನೆ ಒಂದೇ ದಿನ ನಾಲ್ವರು ಮಹಾನ್ ಕಡುಭ್ರಷ್ಟರಿಗೆ ಮೆಗಾ ಶಾಕ್ ಕೊಟ್ಟಿದ್ದು.. ಕೋಟಿ ಕೋಟಿ ಭ್ರಷ್ಟ ಕುಳಗಳ ಬಿಲಗಳಿಗೆ ಲೋಕಾಸ್ತ್ರಾ ನುಗ್ಗುತ್ತಾ ಅಂತ ಜನರು ಚರ್ಚೆ ಶುರುಮಾಡಿದ್ದಾರೆ..

ಭ್ರಷ್ಟರ ಬಿಲಗಳನ್ನು ಧೂಳೆಬ್ಬಿಸುತ್ತಿರುವ ‘ಲೋಕಾ’ಸ್ತ್ರಾ.. ಲಂಚಾಸುರರಿಗೆ ಲೋಕಾಯುಕ್ತ ಅಧಿಕಾರಿಗಳ ಗುನ್ನಾ.. ಮತ್ತೆ ಮರುಕಳಿಸುತ್ತಾ ನ್ಯಾ. ಆರ್.ಜೆ.ವೆಂಕಟಾಚಲಯ್ಯ ಕಾಲ..?
ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗುತ್ತಾ ಲೋಕಾಯುಕ್ತ..? ಅಧಿಕಾರಿಗಳು ಭ್ರಷ್ಟಾಚಾರದ ಕಾಸು ಮುಟ್ಟುವ ಮುನ್ನ ಒಂದು ಸಾವಿರ ಭಾರಿ ಯೋಚೆನೆ ಮಾಡುವ ಕಾಲ ಇನ್ನು ದೂರ ಇಲ್ವಾ..? ಅನ್ನೂ ಮಾತು ಕೆಳಿ ಬರ್ತಿದ್ದು.. ಆ ಮಾತುಗಳ ಸತ್ಯವಾಗ್ಲಿ ಅನ್ನೋದೇ ನಮ್ಮ ಆಶಯ ಕೂಡ..

ಫ್ರೀಡಂ ಟಿವಿ ಕ್ರೈಂ ಬ್ಯೂರೋ..

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments