ಇಸ್ರೇಲ್ ಮತ್ತು ಇರಾನ್ ದೇಶಗಳು ಅಗತ್ಯ ಬಿದ್ದರೆ ಮತ್ತೆ ದಾಳಿಯ ಎಚ್ಚರಿಕೆ ನೀಡಿವೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಹೆಚ್ಚಿದೆ. ಮಂಗಳವಾರ ಹಿಜ್ಜುಲ್ಲಾಉಗ್ರರ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಹಿಜ್ಜುಲ್ಲಾ ಉಗ್ರರು, ಯೆಮೆನ್ ಸೇನೆ ಮತ್ತು ಇರಾನ್ ಸೇನೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದವು. ಅದರ ಮುಂದುವರೆದ ಭಾಗವಾಗಿ ಬುಧವಾರ ಮತ್ತೆ ದಾಳಿಯ ಮಾತುಗಳನ್ನು ಆಡಿರುವ ಇರಾನ್, ಸದ್ಯಕ್ಕೆ ದಾಳಿ ನಿಲ್ಲಿಸಿದ್ದೇವೆ. ಒಂದು ವೇಳೆ ಇಸ್ರೇಲ್ ಪ್ರತೀಕಾರದ ಮಾತುಗಳನ್ನು ಆಡಿದರೆ ಇಸ್ರೇಲ್‌ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಅದರ ಬೆನ್ನಲ್ಲೇ ತಿರುಗೇಟು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಇರಾನ್ ಮಾಡಿದ ಅತಿ ದೊಡ್ಡ ತಪ್ಪಿಗೆ ಬೆಲೆ ಕಟ್ಟಲಿದೆ’ ಎಂದು ಗುಡುಗಿದ್ದಾರೆ. ಮತ್ತೊಂದೆಡೆಹಿಟ್ಟುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನ ಭೂಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ನೆತನ್ಯಾಹು ಘೋಷಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಲೆಬನಾನ್ ಗಡಿಯಲ್ಲಿರುವ 24 ಹಳ್ಳಿಗಳ ತೆರವಿಗೆ ಇಸ್ರೇಲಿಗರಿಗೆ ಸೂಚಿಸಿದ್ದಾರೆ.
ವಿಶ್ವಸಂಸ್ಥೆ ಕಳವಳ: ಈ ನಡುವೆ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿರುವವಿಶ್ವಸಂಸ್ಥೆಯಮಹಾಪ್ರಧಾನಕಾರ್ಯದರ್ಶಿ ಆ್ಯಂಟಾನಿಯಾ ಗ್ಯುಟೆರೆಸ್, ‘ಲೆಬನಾನ್ ಯುದ್ಧದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದ್ದು, ಇದನ್ನು ತಡೆಯಬೇಕು’ ಎಂದು ಕರೆ ನೀಡಿದ್ದಾರೆ. ಅದರ ಬೆನ್ನಲ್ಲೇ ತನ್ನ ಮೇಲಿನ ಇರಾನ್ ದಾಳಿಯನ್ನು ಖಂಡಿಸದ ಗ್ಯುಟೆರೆಸ್ ಅವರಿಗೆ ತನ್ನ ದೇಶದ ಪ್ರವೇಶವನ್ನು ಇಸ್ರೇಲ್ ನಿರ್ಬಂಧಿಸಿದೆ.