ಕ್ರಿಕೆಟ್
ಇಂದಿನಿಂದ ಐಪಿಎಲ್ ಆರ್ಭಟ ಶುರು

ದೆಹಲಿ: ಕ್ರಿಕಟ್ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದ ಐಪಿಎಲ್ 2025 ಇಂದಿನಿಂದ ಆರಂಭವಾಗಲಿದೆ. ಈಡನ್ ಗಾರ್ಡ್ನ್ನಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ.
ಈ ನಡುವೆ ಇದೀಗ ಈಡನ್ ಗಾರ್ಡನ್ ಮೈದಾನದ ಸುತ್ತ ದಟ್ಟ ಮೋಡ ಕವಿದ ವಾತಾವರಣವಿದ್ದು, ಮಳೆಯ ಸೂಚನೆಯಿದೆ. ಆದರೆ ಸದ್ಯಕ್ಕೆ ಮಳೆ ಬರುವ ಲಕ್ಷಣವಿಲ್ಲವಾದ್ದರಿಂದ ಉದ್ಘಾಟನಾ ಸಮಾರಂಭ ನಡೆಯಬಹುದು.
ಆದರೆ ನಂತರ ರಾತ್ರಿ ವೇಳೆ ಮಳೆ ಸುರಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಕಾರ್ಮೋಡ ಕವಿದಿದೆ. ಇಂದಿನ ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ಐಪಿಎಲ್ ಮ್ಯಾಚ್ ವೀಕ್ಷಿಸಬಹುದು.




