Freedom TV

ರಾಜ್ಯದಲ್ಲಿ ಮತ್ತೆ 30 ಇನ್ಸ್ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು : ಮೊನ್ನೆಯಷ್ಟೇ 132 ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ ಮತ್ತೆ ರಾಜ್ಯದಲ್ಲಿ ಮತ್ತೆ 30 ಇನ್ಸ್ ಪೆಕ್ಟರ್ಗಳನ್ನ ವರ್ಗಾವಣೆ ಮಾಡಲಾಗಿದೆ.

ಶೇಖರ್ ಜಿ. – ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು, ಶಿವಕುಮಾರ್ ಪಿ, – ಬೈಯಪ್ಪನಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು, ಸತೀಶ್ ಕುಮಾರ್, ಗಿರಿನಗರ ಪೊಲೀಸ್ ಠಾಣೆ, ಬೆಂಗಳೂರು, ಯೇರಿಸ್ವಾಮಿ ಈ, ಕಾಟನ್ ಪೇಟೆ ಪೊಲೀಸ್ ಠಾಣೆ, ಬೆಂಗಳೂರು, ತಿಪ್ಪೇಸ್ವಾಮಿ ಬಿ.ಎಂ, ಆನೇಕಲ್ ಪೊಲೀಸ್ ಠಾಣೆ,ಸತೀಶ್ ಬಿ.ಎಸ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ, ಗೋವಿಂದರಾಜು, ಪುಲಕೇಶಿ ನಗರ ಪೊಲೀಸ್ ಠಾಣೆ, ಬೆಂಗಳೂರು ಸೇರಿದಂತೆ 25 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ.

ಇನ್ನು, ನರೇಂದ್ರ ಬಾಬು, ಸಿಐಡಿಯಿಂದ ಕಾಟನ್ ಪೇಟೆಗೆ ವರ್ಗಾವಣೆ ಆಗಿದ್ದ ಇನ್ಸ್ಪೆಕ್ಟರ್, ಐಯಣ್ಣ ರೆಡ್ಡಿ ಬಿ. ಹೆಬ್ಬಗೋಡಿಯಿಂದ ವರ್ಗಾವಣೆ ಆಗಿದ್ದ ಇನ್ಸ್ಪೆಕ್ಟರ್, ಮುನಿರೆಡ್ಡಿ ವಿ, ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಆಗಿದ್ದ ಇನ್ಸ್ಪೆಕ್ಟರ್, ಸುಬ್ರಮಣ್ಯ ಸ್ವಾಮಿ ಎಂ.ಎಲ್, ವಿವಿ ಪುರಂ ಸಂಚಾರ ಠಾಣೆಯಿಂದ ವರ್ಗಾವಣೆಯಾಗಿದ್ದ ಇನ್ಸ್ಪೆಕ್ಟರ್, ಮುನಿಕೃಷ್ಣ ಡಿ.ಎಚ್, ಮಾಸ್ತಿ ಪೊ.ಠಾಣೆಗೆ ವರ್ಗಾವಣೆ ಆಗಿದ್ದ ಇನ್ಸ್ಪೆಕ್ಟರ್ ಐವರು ಇನ್ಸ್ಪೆಕ್ಟರ್ ವರ್ಗಾವಣೆ ರದ್ದು ಮಾಡಲಾಗಿದೆ.

Comments (0)

Your email address will not be published. Required fields are marked *

Back to top button