ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ತಿಮ್ಮೇಗೌಡ ಒಂದು ತಿಂಗಳ ಹಿಂದೆಯಷ್ಟೇ ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಯಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. 98ರ ಬ್ಯಾಚ್ ಅಧಿಕಾರಿಯಾಗಿದ್ದ ತಿಮ್ಮೇಗೌಡ ಬಿಡದಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ತಿಮ್ಮೇಗೌಡ ಬಹಳ ಟೆನ್ಶನ್‌ನಲ್ಲಿ ಇದ್ದರು.
ಬಿಡದಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಯಾವ ಕಾರಣಕ್ಕೆ ಟೆನ್ಷನ್‌ನಲ್ಲಿ ಇದ್ದೇನೆ ಎನ್ನುವುದರ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ. ವಾಸವಾಗಿದ್ದ ಮನೆಯಿಂದ 15 ಕಿ.ಮೀ ದೂರದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಲ್ನೋಟಕ್ಕೆ ಹಣಕಾಸು ತೊಂದರೆಯಿಂದ ಆತ್ಮಹತ್ಮೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.