ಜಿಲ್ಲೆರಾಜಕೀಯರಾಜ್ಯ

ಮುಂಜೂರಾದ ಸೇತುವೆಯನ್ನು ಸ್ಥಳಾಂತರಿಸದಿರಲು ಒತ್ತಾಯ

ಶಿರಹಟ್ಟಿ : ತಾಲೂಕಿನ ಕಲ್ಲಾಗನೂರ ಗ್ರಾಮದ ಬಳಿ ತುಂಗಭದ್ರ ನದಿಗೆ ಅಡ್ಡಲಾಗಿ ಕಲ್ಲಾಗನೂರ ಗ್ರಾಮದಿಂದ ಹೂವಿನ ಹಡಗಲಿ ತಾಲೂಕಿನ ಮಾಗಳ ಗ್ರಾಮಕ್ಕೆ ಸಂಪರ್ಕಿಸಲು ಅಂದಾಜು ಸುಮಾರು 65-ಕೋಟಿ ರೂ.ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಸೇತುವೆಯ ನಿರ್ಮಾಣ ದಿಂದಾಗಿ ಗಡಿ ಭಾಗದ ಹಲವು ಗ್ರಾಮಗಳ ಜನರಿಗೆ ಪಕ್ಕದ ವಿಜಯನಗರ ಜಿಲ್ಲೆಗೆ ಸಂಪರ್ಕ ಸಾಧಿಸಲು ತುಂಬಾ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟು ಸೇರಿದಂತೆ ಪಕ್ಕದಲ್ಲಿಯೆ ಇರುವ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಸಾಗಿಸಲು ಬಹಳಷ್ಟು ಅನುಕೂಲವಾಗಲಿದೆ.

ಇಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೇತುವೆಯನ್ನು ಕಲ್ಲಾಗನೂರ-ಮಾಗಳ ಗ್ರಾಮಗಳ ಬಳಿ ಬದಲಾಗಿ ಬೇರೆ ಕಡೆಗೆ ನಿರ್ಮಿಸಲು ಹುನ್ನಾರ ನಡೆಸಲಾಗಿದೆ ಎಂಬ ರಾಜಕೀಯ ಪ್ರೇರಿತ ಉಹಾಪೋಹದ ಮಾತುಗಳು ಕೇಳಿ ಬರುತ್ತಿದ್ದು, ಯಾವುದೇ ಕಾರಣಕ್ಕೂ ಸ್ಥಳ ಬದಲಾವಣೆ ಮಾಡಬಾರದು ಎಂದು ಕಲ್ಲಾಗನೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಾಗಾ ಕೂಡಲೇ ಈ ಕಾರ್ಯವನ್ನು ಕೈ ಬೀಡಬೇಕು.

Comments (0)

Your email address will not be published. Required fields are marked *

Back to top button