ಕೊರೊನಾ, ಡೆಂಗ್ಯೂ ಆಯಿತು.. ಈಗ ಮತ್ತೊಂದು ವೈರಸ್ ಭೀತಿ ಭಾರತಕ್ಕೆ ಆವರಿಸಿದೆ. ಕೋವಿಡ್ ಸಾಂಕ್ರಾಮಿಕ ಪರಿಣಾಮ ಇನ್ನೂ ಮರೆಯಾಗಿಲ್ಲ. ಇದರ ನಡುವೆಯೇ ಎಂಪಾಕ್ಸ್ ಸೋಂಕು ಜಾಗತಿಕವಾಗಿ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಾರಕ ಸೋಂಕು ಆಫ್ರಿಕಾಗಷ್ಟೇ ಸೀಮಿತವಾಗಿತ್ತು. ಆದರೆ ಈಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಸೋಂಕು ಪತ್ತೆಯಾಗಿರುವುದು ಭೀತಿ ಹೆಚ್ಚಿಸಿದೆ. ಕೊರೊನಾ ವೈರಸ್‌ಗಿಂತ ಮಂಕಿಪಾಕ್ಸ್ ನಿಧಾನವಾಗಿ ಹರಡುತ್ತದೆ. ಪ್ರಕರಣ ಹೆಚ್ಚಿದಷ್ಟು ಮಾರಕವಾಗಬಹುದು. ಹೀಗಾಗಿ ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

WHO ಪ್ರಕಾರ, 2022 ರಿಂದ 116 ದೇಶಗಳಲ್ಲಿ ಜಾಗತಿಕವಾಗಿ 99,176 ಮಂಕಿಪಾಕ್ಸ್‌ (Monkey Pox) ಪ್ರಕರಣಗಳು ದೃಢಪಟ್ಟಿದ್ದು, 208 ಸಾವುಗಳು ವರದಿಯಾಗಿದ್ದವು. ಆದರೆ, ಈ ವರ್ಷ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2024 ರಲ್ಲಿ ಇದುವರೆಗೆ 15,600 ಪ್ರಕರಣಗಳು ಪತ್ತೆಯಾಗಿದ್ದು, 537 ಮಂದಿ ಬಲಿಯಾಗಿದ್ದಾರೆ. ಆಫ್ರಿಕಾದ ಹೊರಗೆ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ವೈರಸ್‌ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲೇ 4 ಮಂದಿಗೆ ಸೋಂಕು ದೃಢಪಟ್ಟಿದೆ. ಡೆಡ್ಲಿ ವೈರಸ್‌ ಭಾರತಕ್ಕೆ ಕಾಲಿಡುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ.

ತಜ್ಞರು ಹೇಳೋದೇನು?
ಆಫ್ರಿಕಾದಲ್ಲಿನ ಬಾಚಿ ಹಲ್ಲು ಇರುವ ಪ್ರಾಣಿಗಳು (ಮೊಲ, ಇಲಿ, ಅಳಿಲು) ಮತ್ತು ಮಂಗಗಳಲ್ಲಿ ಈ ವೈರಾಣು ಇರಬಹುದು. ಅವುಗಳಿಂದ ಮನುಷ್ಯರಿಗೆ ಸೋಂಕು ತಗಲಬಹುದು ಎಂದು ಅಂದಾಜಿಸಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights