ರಾಜಸ್ಥಾನ: ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ 270 ಕ್ಕೂ ಹೆಚ್ಚು ಮಂದಿ ಸಾವಿಗೀಡಾದ ಪ್ರಕರಣ ಮಾಸುವ ಮುನ್ನವೇ ಭಾರತದ ವಾಯುಪಡೆಗೆ ಸೇರಿದ ಜಾಗ್ವಾರ್ ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನಗೊಂಡಿದೆ.
ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಭಾರತೀಯ ವಾಯುಸೇನೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಪೈಲಟ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನದ ಬಿಡಿಭಾಗಗಳು ಪೈಲಟ್ ದೇಹದ ಜೊತೆಗೆ ಹೊಲವೊಂದೆಲ್ಲಿ ಪತ್ತೆಯಾಗಿದೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪೈಲೆಟ್ ಮತ್ತು ಇನ್ನೊಬ್ಬ ವ್ಯಕ್ತಿಯ ಗುರುತುಗಳನ್ನು ಸೇನೆ ಇನ್ನು ದೃಢಪಡಿಸಿಲ್ಲ.
ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಅಭಿಷೇಕ್ ಸುರಾನ್ ಮಾಹಿತಿ ನೀಡಿದ್ದು, ವಿಮಾನ ದುರಂತದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ.


