Monday, June 23, 2025
25.9 C
Bengaluru
Google search engine
LIVE
ಮನೆSports2ನೇ ದಿನದ ಅಂತ್ಯೆಕ್ಕೆ ಆಸ್ಟ್ರೇಲಿಯಾ 405 ರನ್ : 6 ವಿಕೆಟ್‌ ಕಿತ್ತು ದಾಖಲೆ ಬರೆದ...

2ನೇ ದಿನದ ಅಂತ್ಯೆಕ್ಕೆ ಆಸ್ಟ್ರೇಲಿಯಾ 405 ರನ್ : 6 ವಿಕೆಟ್‌ ಕಿತ್ತು ದಾಖಲೆ ಬರೆದ ಬುಮ್ರಾ

ಬ್ರಿಸ್ಪೇನ್‌: ಭಾರತದ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ಹಿಡಿತ ಸಾಧಿಸಿದರೂ ಬುಮ್ರಾ 6 ವಿಕೆಟ್‌ ಗಳಿಸಿ ದಾಖಲೆ ಬರೆದಿದ್ದಾರೆ.

ಮೂರನೇ ದಿನವಾದ ಇವತ್ತು ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದೆ. ಆಸಿಸ್​ ಬ್ಯಾಟರ್​​ಗಳನ್ನು ಔಟ್ ಮಾಡಲು ಟೀಂ ಇಂಡಿಯಾ ಪರದಾಟ ನಡೆಸಿತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 445 ರನ್​ಗಳಿಸಿದೆ. ಮೂರನೇ ದಿನವಾದ ಇವತ್ತು ಕೂಡ ಆಸ್ಟ್ರೇಲಿಯಾಗೆ ಅಲೆಕ್ಸ್ ಕ್ಯಾರಿ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಸ್ಮಿತ್ ಅವರ 101, ಹೆಡ್​ 152 ರನ್​ಗಳ ಕಾಣಿಕೆಯ ಜೊತೆಗೆ ಕ್ಯಾರಿ 70 ರನ್​ಗಳಿಸಿ ಇಂದು ಆಕಾಶ್ ದೀಪ್​ಗೆ ವಿಕೆಟ್ ಒಪ್ಪಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 6 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ 5 ವಿಕೆಟ್‌ ಪಡೆದ ಆಸ್ಟ್ರೇಲಿಯಾ ಪ್ಯಾಟ್‌ ಕಮ್ಮಿನ್ಸ್‌  ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ಯಾಟ್‌ ಕಮ್ಮಿನ್ಸ್‌ ಮತ್ತು ಬುಮ್ರಾ 9 ಬಾರಿ 6 ವಿಕೆಟ್‌ ಗೊಂಚಲು ಪಡೆದಿದ್ದಾರೆ. ಕಗಿಸೋ ರಬಡಾ 7 ಬಾರಿ, ಆಸ್ಟ್ರೇಲಿಯಾದ ಜೋಶ್‌ ಹ್ಯಾಝಲ್‌ವುಡ್‌ ಮತ್ತು ನ್ಯೂಜಿಲೆಂಡ್‌ನ ಟಿಮ್‌ ಸೌಥಿ ತಲಾ 6 ಬಾರಿ 5 ವಿಕೆಟ್‌ ಪಡೆದಿದ್ದಾರೆ.

ಬುಮ್ರಾ 6 ವಿಕೆಟ್‌ ಪಡೆದರೆ ಸಿರಾಜ್‌ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ತಲಾ ಒಂದೊಂದು ವಿಕೆಟ್‌ ಪಡೆದರು. ಮಳೆಯಿಂದಾಗಿ ಮೊದಲ ದಿನ ರದ್ದಾಗಿತ್ತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments