Monday, June 23, 2025
26.3 C
Bengaluru
Google search engine
LIVE
ಮನೆದೇಶ/ವಿದೇಶಪಾಕಿಸ್ತಾನದ ಮೇಲೆ ಭಾರತ 2ನೇ ದಾಳಿ - ಪಾಕ್ ಉಡೀಸ್..!

ಪಾಕಿಸ್ತಾನದ ಮೇಲೆ ಭಾರತ 2ನೇ ದಾಳಿ – ಪಾಕ್ ಉಡೀಸ್..!

ಭಾರತವನ್ನು ಕೆಣಕಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೈನಿಕರು ಪೆಟ್ಟಿನ ಮೇಲೆ ಪೆಟ್ಟು ಕೊಡ್ತಿದ್ದಾರೆ. ಇದರ ನಡುವೆ ಪಾಕಿಸ್ತಾನವೇ ಪ್ರತೀಕಾರವಾಗಿ ಭಾರತದ 15 ಕಡೆ ದಾಳಿ ಮಾಡಲು ಪ್ರಯತ್ನ ನಡೆಸಿದೆ. ಭಾರತದ ಮೇಲೆ ಚೀನಾ ಕೊಟ್ಟಿದ್ದ HQ-9 ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಲು ಪ್ರಯತ್ನಿಸಿತ್ತು. ಆದರೆ ಪಾಕಿಸ್ತಾದನ ಎಲ್ಲ ಕ್ಷಿಪಣಿಗಳನ್ನೂ ಭಾರತೀಯ ಸೇನೆ ನಿಷ್ಕ್ರಿಯಗೊಳಿಸಿದೆ.

ಮಧ್ಯರಾತ್ರಿ ವೇಳೆ ಭಾರತದ ಮೇಲೆ ದಾಳಿಗೆ ಪಾಕಿಸ್ತಾನ ಯತ್ನಿಸಿದೆ. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ ಕೋಟ್, ಅಮೃತ್​ ಸರ, ಕಪುರ್ತಾಲಾ, ಲೂಧಿಯಾನಾ, ಜಲಂಧರ್, ಆದಂಪುರ್, ಭಟಿಂಡ, ಚಂಢೀಗಡ, ನಲ್, ಫಲೋಡಿ, ಉತ್ತರಲಾಯ್, ಭುಜ್ ಮೇಲೆ ಪಾಕಿಸ್ತಾನ ದಾಳಿಗೆ ಪ್ರಯತ್ನಿಸಿದೆ. ಕ್ಷಿಪಣಿ ಹಾಗೂ ಡ್ರೋಣ್​​ಗಳನ್ನ ಇದಕ್ಕಾಗಿ ಪಾಕ್ ಬಳಸಿದೆ. ಆದ್ರೆ ಭಾರತದ ಸೇನೆ ಅವೆಲ್ಲವನ್ನೂ ಮಾರ್ಗಮಧ್ಯೆಯೇ ಹೊಡೆದುರುಳಿಸಿದೆ.

ಭಾರತವನ್ನು ರಕ್ಷಿಸಿದ ಸುದರ್ಶನ ಚಕ್ರ

ಭಾರತದ 15 ಪ್ರದೇಶಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಲು ಮುಂದಾದಾಗ, ಭಾರತದ ಸುದರ್ಶನ ಚಕ್ರವೇ ಆ ಕ್ಷಿಪಣಿಗಳನ್ನ ನಿಷ್ಕ್ರಿಯಗೊಳಿಸಿದೆ.  ಭಾರತೀಯ ಸೇನೆಯಲ್ಲೂ ಇಸ್ರೇಲ್ ಮಾದರಿಯ ಐರನ್ ಡೋಮ್ ಇದೆ. ಇದರ ಹೆಸರು ಸುದರ್ಶನ ಚಕ್ರ. ಪಾಕಿಸ್ತಾನದಿಂದ ಹಾರಿಬರ್ತಿದ್ದ ವಿನಾಶಕಾರಿ ಚೀನೀ ನಿರ್ಮಿತ ಕ್ಷಿಪಣಿಗಳನ್ನ ಈ S-400 ಸುದರ್ಶನ ಚಕ್ರ ಹೆಸರಿನ ಏರ್ ಡಿಫೆನ್ಸ್ ಸಿಸ್ಟಂ ತಡೆದಿದೆ. ಅಲ್ಲದೇ S-400 ಸುದರ್ಶನ ಚಕ್ರ ಪಾಕಿಸ್ತಾನದ ದಾಳಿಯನ್ನ ಹಿಮ್ಮೆಟ್ಟಿಸಿದೆ.

ಪಾಕ್ ಮೇಲೆ ಭಾರತ 2ನೇ ದಾಳಿ

ಪಾಕ್ ಪ್ರತೀಕಾರದ ದಾಳಿ ಬೆನ್ನಲ್ಲೇ, ಭಾರತ ಮತ್ತೆ ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವಂತಾ ಹೊಡೆತ ಕೊಟ್ಟಿದೆ. ಬೆಳಿಗ್ಗೆಯೇ ಲಾಹೋರ್ ಏರ್​​ಪೋರ್ಟ್​​ನ ಏರ್ ಡಿಫೆನ್ಸ್ ಸಿಸ್ಟಂ ಅನ್ನು ಭಾರತ ನಿಷ್ಕ್ರಿಯಗೊಳಿಸಿದೆ. ಅಲ್ಲದೇ ಕರಾಚಿ ಬಂದರಿನ ಮೇಲೂ ಭಾರತ ಡ್ರೋಣ್ ಹಾಗೂ ಮಿಸೈಲ್​​ಗಳ ಮೂಲಕ ದಾಳಿ ಮಾಡಿದೆ. ಅಲ್ಲದೆ ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂ ಮೇಲೂ ಡ್ರೋಣ್ ಮೂಲಕ ದಾಳಿ ಮಾಡಿದೆ

ಭಾರತೀಯ ಸೇನೆಯಿಂದ 17 ಕಮಿಕೋಝ್​ ಡ್ರೋಣ್ ಮೂಲಕ ಲಾಹೋರ್, ಶೆಖ್​​ಪುರ್, ಸಿಯಾಲ್​​ಕೋಟ್​, ಗುಂಜನ್​ವಾಲಾ, ನರೋವಾಲ್, ಚೆಕ್​​ವಾಲ್ ಮೇಲೆ ದಾಳಿ ಮಾಡಿದೆ. ಭಾರತದ ದಾಳಿಗೆ  ಪಾಕಿಸ್ತಾನ ವಿಲವಿಲ ಎನ್ನುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments