ಶಬರಿಮಲೆ : ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ವಿಪರೀತ ದಟ್ಟಣೆ ಪರಿಗಣಿಸಿ ಮಂಡಲ ಪೂಜೆಯ ಪ್ರಧಾನ ದಿನಗಳಾದ ಡಿಸೆಂಬರ್‌ 25 ಮತ್ತು 26 ರಂದು ಆನ್‌ಲೈನ್‌ ಬುಕ್ಕಿಂಗ್‌ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ಈ ದಿನಗಳಲ್ಲಿ ಸ್ಪಾಟ್‌ ಬುಕ್ಕಿಂಗ್‌ ತೆರವುಗೊಳಿಸಲಾಗಿದೆ. ಸಾಮಾನ್ಯ ದಿನಗಳಲ್ಲಿಆನ್‌ಲೈನ್‌ ಬುಕ್ಕಿಂಗ್‌ ಸಂಖ್ಯೆ 70 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಡಿಸೆಂಬರ್‌ 25 ರಂದು ಸಂಜೆ ತಂಗ ಅಂಗಿ ಘೋಷ ಯಾತ್ರೆ ಸನ್ನಿಧಾನ ತಲುಪಲಿದೆ. ಅಂದು ಸಂಜೆ 6.30ಕ್ಕೆ ಅಯ್ಯಪ್ಪನಿಗೆ ತಂಗ ಅಂಗಿ ತೊಡಿಸಿ ದೀಪಾರಾಧನೆ ನಡೆಯಲಿದೆ. ಆನ್‌ಲೈನ್‌ ಬುಕ್ಕಿಂಗ್‌ ಸಂಖ್ಯೆಯನ್ನು 54,444ಕ್ಕೆ ಸೀಮಿತಗೊಳಿಸಲಾಗಿದೆ.

ಡಿ. 26ರಂದು ಮಧ್ಯಾಹ್ನ 12 ರಿಂದ 12.30ರ ನಡುವೆ ಅಯ್ಯಪ್ಪನಿಗೆ ತಂಗ ಅಂಗಿ ತೊಡಿಸಿ ಮಂಡಲ ಪೂಜೆ ನೆರವೇರಲಿದೆ. ಅಂದು ಆನ್‌ಲೈನ್‌ ಬುಕ್ಕಿಂಗ್‌ ಸಂಖ್ಯೆ 60 ಸಾವಿರಕ್ಕೆ ಇಳಿಸಲಾಗಿದೆ. ಈ ಎರಡೂ ದಿನ ಸ್ಪಾಟ್‌ ಬುಕ್ಕಿಂಗ್‌ಗೆ ಅವಕಾಶವಿಲ್ಲ. ಮಕರಜ್ಯೋತಿ ದಟ್ಟಣೆ ಪರಿಗಣಿಸಿ ಜ.12ರಂದು 60 ಸಾವಿರ, 13ರಂದು 50 ಸಾವಿರ ಮತ್ತು 14 ರಂದು 40 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಈ ದಿನಗಳಲ್ಲೂಸ್ಪಾಟ್‌ ಬುಕ್ಕಿಂಗ್‌ ತೆರವುಗೊಳಿಸುವ ಸಾಧ್ಯತೆ ಇದೆ.

ಹೆಚ್ಚುತ್ತಿರುವ ದಟ್ಟಣೆ

ಶಬರಿಮಲೆ ಸನ್ನಿಧಾನ ಮತ್ತು ಪಂಪಾದಲ್ಲಿ ಭಕ್ತರ ದಟ್ಟಣೆ ಹೆಚ್ಚಿದೆ. ಎಲ್ಲ ರಸ್ತೆಗಳೂ ಶಬರಿಮಲೆ ಭಕ್ತರಿಂದ ತುಂಬಿ ತುಳುಕುತ್ತಿವೆ. ಭಾನುವಾರ ಮುಂಜಾನೆ 3 ರಿಂದ 7 ಗಂಟೆಯವರೆಗೆ 23,176 ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಶನಿವಾರ ರಾತ್ರಿ ನಡೆ ಮುಚ್ಚುವ ವೇಳೆ 18,600 ಮಂದಿ ಭಕ್ತರು 18ನೇ ಮೆಟ್ಟಿಲ ಕೆಳಗೆ ಸರತಿ ಸಾಲಿನಲ್ಲಿನಿಂತಿದ್ದರು. ನಡೆ ಮುಚ್ಚಿದ ಬಳಿಕವೂ 18 ಮೆಟ್ಟಿಲೇರಲು ಅವಕಾಶ ನೀಡಲಾಗಿದೆ. ಅವರು ಮುಂಜಾನೆ 3ಕ್ಕೆ ನಡೆ ತೆರೆದಾಗ ಉತ್ತರ ದ್ವಾರದ ಮೂಲಕ ಪ್ರವೇಶಿಸಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇದರಿಂದ ದೇಗುಲದ ಪ್ರಾಂಗಣದಲ್ಲಿ ಭಾರಿ ದಟ್ಟಣೆ ಕಂಡು ಬಂದಿದೆ. ಶಬರಿಮಲೆಯಲ್ಲಿಈ ಋುತುವಿನಲ್ಲಿಹಿಂದೆಂದಿಗಿಂತಲೂ ಹೆಚ್ಚು ದಟ್ಟಣೆ ಕಂಡು ಬಂದಿದೆ.

 

Leave a Reply

Your email address will not be published. Required fields are marked *

Verified by MonsterInsights