Top Newsದೇಶ/ವಿದೇಶ

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಳ್ಳಾಟ; ರಾಹುಲ್​ ಗಾಂಧಿ ವಾಗ್ದಾಳಿ

ದೆಹಲಿ: ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚರ್ಚೆಯ ಬೇಡಿಕೆಗಳು ಸಂಸತ್ತನಲ್ಲಿ ವಿಪಕ್ಷಗಳು ಅಡ್ಡಿಪಡಿಸಿದ್ದು, ಇದರಿಂದ ಸಂಸತ್​ನ ಮೂರನೇ ದಿನವೂ ಮುಂದೂಡಲಾಗಿದೆ.  ಬಳಿಕ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಮತಗಳನ್ನು ಹೇಗೆ ಕದಿಯಲಾಗುತ್ತಿದೆ ಎಂದು ಕಾಂಗ್ರೆಸ್ ಕಂಡುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಮತಗಳ ಕಳ್ಳತನವನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಬ್ಯಾಕ್​ & ವೈಟ್​ ನಲ್ಲಿ ಜನರು ಮತ್ತು ಚುನಾವಣಾ ಆಯೋಗದ ಮುಂದೆ ಇಡುವುದಾಗಿ ಪ್ರತಿಪಾದಿಸಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಎಸ್‌ಐಆರ್‌ನಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ, ಚುನಾವಣಾ ಅಧಿಕಾರಿಗಳು ಇದುವರೆಗೆ 52 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ವಿಳಾಸಗಳಲ್ಲಿ ಇಲ್ಲ ಮತ್ತು ಇನ್ನೂ 18 ಲಕ್ಷ ಜನರು  ಸಾವನ್ನಪ್ಪಿದ್ದಾರೆ ಎಂದು ಚುನಾವಣಾ ಆಯೋಗ ಇತ್ತೀಚಿಗೆ ಬಹಿರಂಗಪಡಿಸಿರುವುದನ್ನು ರಾಹುಲ್​ ಗಾಂಧಿ ಎತ್ತಿ ತೋರಿಸಿದ್ದಾರೆ.

ಇದು ಕೇವಲ 52 ಲಕ್ಷ ಜನರ ವಿಷಯವಲ್ಲ. ಇದು ಕೇವಲ ಬಿಹಾರದ ಬಗ್ಗೆ ಅಲ್ಲ, ಅವರು ಮಹಾರಾಷ್ಟ್ರದಲ್ಲಿ ಮೋಸ ಮಾಡಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳಿದ್ದೇವೆ, ಮತದಾರರ ಪಟ್ಟಿಯನ್ನು ತೋರಿಸಲು ಕೇಳಿದ್ದೇವೆ. ಆದ್ರೆ  ಅವರು ನಮಗೆ ಮತದಾರರ ಪಟ್ಟಿಯನ್ನು ತೋರಿಸಲಿಲ್ಲ. ಮಹಾರಾಷ್ಟ್ರದಲ್ಲಿ ಒಂದು ಕೋಟಿ ಹೊಸ ಮತದಾರರು ಬಂದಿದ್ದರು ಮತ್ತು ಚುನಾವಣೆಯಲ್ಲಿ ಕದ್ದಿದ್ದಾರೆ ಎಂದ್ರು.

ಇನ್ನು ಕರ್ನಾಟಕದಲ್ಲಿಯೋ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಡೊಡ್ಡ ಕಳ್ಳತನ ನಡೆದಿರುವುದನ್ನು ನಾವು ನೋಡಿದ್ದೇವೆ. ನಾವು ಅದನ್ನು ಜನರಿಗೆ ಹಾಗೂ ಚುನಾವಣೆ ಆಯೋಗಕ್ಕೆ ತೋರಿಸುತ್ತೇವೆ. ಕಳ್ಳತನ ಹೇಗೆ ಮತ್ತು ಎಲ್ಲಿಂದ ಮಾಡಲಾಯಿತು ಎಂಬುದನ್ನು ನಾವು ತೋರಿಸುತ್ತೇವೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button