ಆ ಊರಲ್ಲಿರುವ ಸಾಕು ಪ್ರಾಣಿಗಳ ಮೇಲೆ ಹುಲಿಗಳು ಎರಗಿ ಕೊಲ್ಲುತ್ತಿದ್ದವು ಎಂಬ ಒಂದೇ ಕಾರಣಕ್ಕೆ ಗುಹೆಯೊಂದಕ್ಕೆ ನುಗ್ಗಿದ ಗ್ರಾಮಸ್ಥರು ಎರಡು ಮರಿ ಹುಲಿಗಳು ಹಾಗೂ ಒಂದು ಗಂಡು ಮತ್ತು ಹೆಣ್ಣು ಹುಲಿಯನ್ನ ಕೊಂದು ಹಾಕಿದ್ರು. ಇಂತಹದ್ದೊಂದು ಘಟನೆ ನಡೆದಿದ್ದು 2020ನೇ ಇಸವಿ ಜನವರಿ 5 ಮತ್ತು 8ನೇ ತಾರೀಖಿನ ನಡುವೆ. ಈ ಹುಲಿಗಳನ್ನ ಕೊಂದ ಬಳಿಕ ಅವರಿಗೆ ಜ್ಞಾನೋದಯವಾಗಿತ್ತು. ತಾವು ತಪ್ಪು ಮಾಡಿದ್ದೀವೇನೋ ಎಂಬ ಭಾವನೆ ಕಾಡುತ್ತಿತ್ತು. ಹೀಗಾಗಿ ಮೊನ್ನೆ ಭಾನುವಾರ ಆ ಜನ ಗುಹೆಯಲ್ಲಿ ಸಮಾವೇಶಗೊಂಡಿದ್ರು.
ಅಂದಾಗೆ ಗೋವಾದ ಸಮೀಪ ಇರುವ ಕೇರಿ ಪ್ರದೇಶದ ಮಹದೇ ವನ್ಯಜೀವಿ ಅಭಾಯರಣ್ಯದ ನಡುವೆ ಗೊಲೌಲಿಮ್ ಎಂಬ ಕುಗ್ರಾಮವಿದೆ. ಈ ಗ್ರಾಮದ ಜನ ಅರಣ್ಯದೊಳಗೆ ವಾಸ ಮಾಡುತ್ತಾ ನೈಸರ್ಗಿಕ ಆಹಾರ ಸೇವಿಸುತ್ತಾ ದನ ಕರುಗಳನ್ನ ಕಟ್ಟಿಕೊಂಡು ಜೀವನ ಮಾಡ್ತಿದ್ರು. ಇವರ ಸ್ಥಳಾಂತರದ ಬಗ್ಗೆಯೂ ಸಾಕಷ್ಟು ವಿವಾದಗಳು ಉಂಟಾಗಿದ್ವು. ಇಂತವರು ಮೊನ್ನೆ ನೈಸರ್ಗಿಕ ಗುಹೆಯಾದ ಸಿದ್ದಾಚಿ ಹೊವ್ರಿಯಲ್ಲಿ ಸಮಾವೇಶಗೊಂಡು ತಮ್ಮ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ರು. ಅಂದಾಗೆ ಹುಲಿಯನ್ನ ದೇವರೆಂದು ನಂಬುವ ಇವರು ವಾರ್ಷಿಕವಾಗಿ ಪೂಜೆ ಸಲ್ಲಿಸುತ್ತಾ ಬಂದಿದ್ರು. 2020ರ ಹುಲಿ ಹತ್ಯೆ ಬಳಿಕ ತಮ್ಮ ತಪ್ಪಿನ ಅರಿವಾಗಿ ಗುಹೆಯಲ್ಲಿ ಕ್ಷಮೆಯಾಚಿಸಿದ್ರು.
ಹುಲಿಗಳ ಹತ್ಯೆ ಬೆಳಕಿಗೆ ಬಂದ ನಂತರ ಬೆಂಗಳೂರಿನ ಫೊರೆನ್ಸಿಕ್ ತಜ್ಞರ ತಂಡವು ಮೊದಲ ಬಾರಿಗೆ ಕೊಳತ ಮಾದರಿ ಪರೀಕ್ಷೆಗೆಂದು ಯುಎಸ್ ನಿಂದ ಆಮದು ಮಾಡಿಕೊಂಡ ಎಲಿಸಾ ಕಿಟ್ ಅನ್ನ ಬಳಸಿ ಸಂಶೋಧನೆ ನಡೆಸಿತ್ತು. ಇನ್ನು 200ಕ್ಕೂ ಹೆಚ್ಚು ಗ್ರಾಮಸ್ಥರು ಗುಹೆ ಬಳಿ ಸೇರಿ ಭಗುತ್ ಎಂಬ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಗುಹೆಗಳಲ್ಲಿ ನೆಲೆಸಿರುವ ಹುಲಿಗಳನ್ನ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು.