Wednesday, April 30, 2025
30.3 C
Bengaluru
LIVE
ಮನೆಮನರಂಜನೆಬಿಗ್ ಬಾಸ್ ಮನೆಯಲ್ಲಿ ಅಕ್ಕ ತಮ್ಮನ ನಡುವೆ ಅನುಮಾನ

ಬಿಗ್ ಬಾಸ್ ಮನೆಯಲ್ಲಿ ಅಕ್ಕ ತಮ್ಮನ ನಡುವೆ ಅನುಮಾನ

Big Boss Kannada 10 : ಬಿಗ್ ಬಾಸ್ ಸೀಸನ್ 10 ಶುರುವಾಗಿನಿಂದಲೂ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಇಬ್ಬರು ಅಕ್ಕ ತಮ್ಮನಂತೆ ಇದ್ದರು. ಆದರೆ ಇವರಿಬ್ಬರ ನಡುವೆ ಬಿರುಕು ಬಂದಿದೆ. ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ದೀದಿ ದೀದಿ ಎಂದು ಕರೆಯುತ್ತಿದ್ದರು. ಬಿಗ್ ಬಾಸ್ ಸೀಸನ್ ಶುರುವಾಗಿನಿಂದಲೂ ಸಂಗೀತಾ ಮತ್ತು ಪ್ರತಾಪ್ ತುಂಬಾ ಕ್ಲೋಸ್ ಆಗಿದ್ದರು , ಈವಾಗ ಅಕ್ಕ ತಮ್ಮನ ನಡುವೆ ದೊಡ್ಡ ಬಿರುಗಾಳಿ ಉಂಟುಮಾಡಿದೆ. ಇದಕ್ಕೆ ಕಾರಣವೇನು ಗೊತ್ತಾ.?

ಬಿಗ್ ಬಾಸ್ ಸೀಸನ್ ಶುರುವಾಗಿ ಇವತ್ತಿಗೆ 87 ದಿನಗಳು ಕಳೆದಿವೆ. ಇವತ್ತಿನ ಎಪಿಸೋಡ್​ನಲ್ಲಿ ಸಂಗೀತಾ ಶೃಂಗೇರಿ ಅವರು ಪ್ರತಾಪ್ ಅವರ ಮೇಳೆ ನಿಂದನೆ ಮಾಡಿದ್ದಾರೆ.  ಸಂಗೀತಾ ಶೃಂಗೇರಿ ಹೇಳಿದ ಮಾತು ಕೇಳಿ ಡ್ರೋನ್ ಪ್ರತಾಪ್ ಅವರಿಗೆ ಕೋಪ ಬಂದಿದೆ. ತಮ್ಮ ಮೇಲಿನ ಆರೋಪವನ್ನು ಅವರು ಅಲ್ಲಗಿಳಿದ್ದಾರೆ. ತಾವು ತಮಾಷೆ ಮಾಡಿದ್ದು ಎಂದು ಸಂಗೀತಾ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಪ್ರತಾಪ್ ಅವರು ತಮಾಷೆಯಾಗಿ ಸ್ವೀಕರಿಸಿಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಇವರಿಬ್ಬರ ಕಿತ್ತಾಟದಲ್ಲಿ ತುಕಾಲಿ ಸಂತು ಮತ್ತು ವರ್ತೂರ್ ಸಂತೋಷ್​ ಫುಲ್ ಎಂಜಾಯ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಹಗಲು ಹೊತ್ತಿನಲ್ಲಿ ಯಾರು ನಿದ್ದೆ ಮಾಡುವಂತಿಲ್ಲ. ಒಂದು ವೇಳೆ ಮಲಗಿದರೆ ಶಿಕ್ಷೆ ನೀಡಲಾಗುತ್ತದೆ. ಡ್ರೋನ್ ಪ್ರತಾಪ್ ಅವರು ಬಾತ್ ರೂಮ್​ನಲ್ಲಿ ಮಲಗಿರಬಹುದು ಎಂಬುದು ಕೆಲವರ ಅನುಮಾನ . ಆ ಬಗ್ಗೆ ಬಿಗ್ ಬಾಸ್ ಮನೆಯೊಳಗೆ ಮಾತುಕತೆ ನಡೆದಿದೆ. ಅದರ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯವರು ಹಂಚಿಕೊಂಡಿದ್ದಾರೆ. ಪ್ರತಾಪ್ ಆವಾಗಿನಿಂದ ಮಲಗಿದ್ದಾನೆ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಬಾತ್​ರೂಮ್​ನಲ್ಲಿ ಮಲಗಿದ್ದಾನಾ ಎಂದು ವಿನಯ್​ ಅವರು ಟಾಂಗ್ ಕೊಟ್ಟಿದ್ದಾರೆ. ಅವನು ನೀರು ಹಾಕಿಕೊಳ್ಳುವ ಶಬ್ದವು ಕೇಳುತ್ತಿಲ್ಲ, ಬಟ್ಟೆ ಒಗೆಯುವ ಶಬ್ದವು ಕೇಳುತ್ತಿಲ್ಲ ಅಂತ ಸಂಗೀತಾ ಪ್ರತಾಪ್ ಅವರ ಕಾಲು ಎಳೆದಿದ್ದಾರೆ. ಸಂಗೀತಾ ಅವರ ಮಾತನ್ನು ಕೇಳಿದ ಪ್ರತಾಪ್​ ಅವರು ರೊಚ್ಚಿಗೆದ್ದು ನಾನು ಸ್ನಾನಕ್ಕೆ ಹೋದರೆ ಸ್ನಾನ ಮಾಡೋಕೆ ಹೋಗ್ತೀನಿ ಎನ್ನುವ ಮೂಲಕ ತಮ್ಮ ಆರೋಪವನ್ನು ಪ್ರತಾಪ್ ರೇಗಾಡಿದ್ದಾರೆ. ನಾವು ತಮಾಷೆ ಮಾಡಿದ್ದು ಸಂಗೀತಾ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಪ್ರತಾಪ್ ಅವರು ತಮಾಷೆಯಾಗಿ ಸ್ವೀಕರಿಸಿಲ್ಲ.

ಇದೆಲ್ಲಾ ನೋಡ್ತಾ ಇದ್ದರೆ ಬಿಗ್ ಬಾಸ್ ಮನೆಯಲ್ಲಿ ಯಾರಿಗೆ ಯಾರು ಫ್ರೆಂಡ್ಸ್ ಇಲ್ಲ , ಯಾರು ಅಕ್ಕ-ತಮ್ಮ ಇಲ್ಲ, ಯಾರು ಅಣ್ಣ-ತಮ್ಮ ಅಲ್ಲ ಎಲ್ಲಾರು ಬಂದಿರೊದು ತಮ್ಮ ತಮ್ಮ ಸಾಮಾರ್ಥ್ಯ ಮೀರಿ ಅವರವರ ಆಟವನ್ನು  ಆಡಿ  ಗೆಲ್ಲಬೇಕು ಅನ್ನೋದೇ ಅವರ ತಲೆಯಲ್ಲಿ ಇದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments