- ಬೆಳಗಾವಿಯಲ್ಲಿ ನಾವೇ ಕಸ ಹೊಡೆಯುತ್ತೇವೆ..!
- ಅಲ್ಲಿಂದಲೇ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತೇವೆ..!
- ಹುಬ್ಬಳ್ಳಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ..
ಹುಬ್ಬಳ್ಳಿ ; ಬೆಳಗಾವಿಯಿಂದಲೇ ಸರ್ಕಾರ ಪತನ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರ, ಗಾಂಧಿ ಬಾವಿಯ ನೀರನ್ನು ಬಳಸಿ, ಅಲ್ಲಿಂದಲೇ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತೇವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿಯಿಂದಲೇ ಕಾಂಗ್ರೆಸ್ ಪತನ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಜೈ ಬಾಪೂ, ಜೈ ಭೀಮ , ಜೈ ಸಂವಿಧಾನ ಕಾರ್ಯಕ್ರಮ ಜನವರಿ 21 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನವರಿ 18 ರಂದು ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಇದರಲ್ಲಿ ಸುರ್ಜೇವಾಲಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಬೆಳಗಾವಿಯಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.
ಇದು ಸರ್ಕಾರದ ಕಾರ್ಯಕ್ರಮ, ಸಿಎಂ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಪಕ್ಷ ಭೇದ ಮರೆತು ಎಲ್ಲರನ್ನೂ ಇದಕ್ಕೆ ಆಹ್ವಾನಿಸಲಾಗುವುದು. ಜೈಬಾಪೂ, ಜೈಭೀಮ, ಜೈ ಸಂವಿಧಾನ ಎಂಬ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಬಹುದು. ಇದೊಂದು ದೊಡ್ಡ ಇತಿಹಾಸವಾಗಲಿದೆ ಎಂದರು.


