ಕೊಪ್ಪಳ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದಿರುವ ಘಟನೆ ಕೊಪ್ಪಳ ಜಿಲ್ಲೆಯ ಬೂದಗುಂಪ ಗ್ರಾಮದಲ್ಲಿ ನಡೆದಿದೆ.
ಮುನಿರಾಬಾದ ಠಾಣಾ ವ್ಯಾಪ್ತಿಯ ಬೂದಗುಂಪ ಗ್ರಾಮ ದ್ಯಾಮಣ್ಣ ಮೃತ ದುರ್ದೈವಿಯಾಗಿದ್ದಾನೆ. ಪತ್ನಿ ನೇತ್ರಾವತಿ ಎಂಬಾಕೆ ಪ್ರಿಯಕರ ಸೋಮಪ್ಪನೊಂದಿಗೆ ಸೇರಿ ಹತ್ಯೆಗೈದಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜುಲೈ 25 ರಂದು ಜಮೀನಿನಲ್ಲಿ ಕೆಲಸ ಇದೆ ಎಂದು ಗಂಡ ದ್ಯಾಮಪ್ಪನನ್ನು ಕೊರೆದೊಯ್ದ ಪತ್ನಿ ನಂತರ ಜಮೀನಿನಲ್ಲಿ ಪ್ರಿಯಕರ ಸೋಮಪ್ಪನ ಸಹಾಯದಿಂದ ತಲೆಗೆ ರಾಡ್ನಿಂದ ಹೊಡೆದು ಹತ್ಯೆಗೈದು ಬಳಿಕ ಗುರುತು ಸಿಗದಂತೆ ಶವ ಸುಟ್ಟ ಹಾಕಲಾಗಿತ್ತು.
ದ್ಯಾಮಣ್ಣನ ಕುಟುಂಬಸ್ಥರಿಗೆ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾಗಿ ಹೇಳಿಕೊಂಡು ನೇತ್ರಾವತಿ ನೆಮ್ಮದಿಯಾಗಿದ್ದಳು. ಅನುಮಾನಗೊಂಡ ದ್ಯಾಮಣ್ಣನ ಕುಟುಂಬಸ್ಥರು ಆಕೆಯ ವಿರುದ್ಧ ಮುನಿರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಮಾಡಿದ ಪೊಲೀಸರು ಪತ್ನಿಯನ್ನು ವಿಚಾರಣೆ ಮಾಡಿದಾಗ ಪತ್ನಿಯೇ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದಿರುವುದು ಬಯಲಾಗಿದೆ. ಇದೀಗ ನೇತ್ರಾವತಿ ಹಾಗೂ ಸೋಮಪ್ಪನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.


