ಬೆಂಗಳೂರು: ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನೆಲೆ ಯುವಕನ ಮೇಲೆ ಮನಸೋ ಇಚ್ಚೆ ಥಳಿಸಿ ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ.. ನವೆಂಬರ್ 22 ರಂದು ಈ ಘಟನೆ ನಡೆದಿದ್ದು 32 ವರ್ಷದ ನರಸಿಂಹ ರಾಜು ಎಂಬ ವ್ಯಕ್ತಿಯನ್ನು ಮಹಿಳೆಯ ಸಂಬಂಧಿಕರೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ..
ನರಸಿಂಹ ರಾಜು ಮನೆಗೆ ವಿವಾಹಿತ ಮಹಿಳೆ ಬಂದಿದ್ದಳು. ಇದನ್ನು ತಿಳಿದ ಮಹಿಳೆಯ ಸಂಬಂಧಿಕರು ನರಸಿಂಹ ರಾಜು ಮನೆಗೆ ನುಗ್ಗಿ ಆತನನ್ನು ಎಳೆದುಕೊಂಡು ಬಂದು ರಸ್ತೆ ಉದ್ದಕ್ಕೂ ಹಲ್ಲೆ ನಡೆಸಿದ್ದಾರೆ.. ಈ ವೇಳೆ ಮಧ್ಯೆ ಪ್ರವೇಶಿಸಿ ತಡೆಯಲು ಬಂದ ನರಸಿಂಹ ರಾಜು ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನರಸಿಂಹರಾಜು ಅವರನ್ನು ಸ್ಥಳೀಯರು ತಕ್ಷಣ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲೆಯ ದೃಶ ಸಿಸಿಟಿಯಲ್ಲಿ ಸೆರೆಯಾಗಿದೆ.
ನರಸಿಂಹರಾಜು ಕುಟುಂಬಸ್ಥರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾವಿಗೆ ಆ ಮಹಿಳೆ ಮತ್ತು ಅವಳ ಕುಟುಂಬಸ್ಥರೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಘಟನೆ ನಡೆದು ನಾಲ್ಕು ದಿನ ಕಳೆದರೂ ಯಾವ ಆರೋಪಿಯನ್ನೂ ಬಂಧಿಸದಿರುವುದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.


