ಜಿಲ್ಲೆ

ಕರೆಂಟ್​ ಕೈ ಕೊಟ್ರೇ… ನಿಲ್ಲುತ್ತೆ ಉಸಿರು

ಕಲಬುರಗಿ:  ಜಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ ಬಟಾ ಬಯಲಾಗಿದೆ. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಗಾಗಿ ರೋಗಿಗಳ ಪರದಾಡುವಂತಾಗಿದೆ.

ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ನಂತರದ ವಾರ್ಡ್​ನ ಐಸಿಯುನಲ್ಲಿ ವಿದ್ಯುತ್ ಸ್ಥಗಿತದಿಂದ ಕೆಲ ನಿಮಿಷಗಳು ವೆಂಟಿಲೇಟರ್​ಗಳು ಬಂದ್​ ಆಗಿದ್ದರಿಂದ ಆಮ್ಮಜನಕ ಸಿಗದೆ ರೋಗಿಗಳು ಪರದಾಡಿದ್ರು.

ವಿದ್ಯುತ್ ಕೈಕೊಟ್ಟಾಗ ರೋಗಿಗಳಿಗೆ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಸಲಾಗುತ್ತಿದೆ. ವಿದ್ಯುತ್ ಕೈಕೊಟ್ಟಾಗ ಬ್ಯಾಟರಿ ಬ್ಯಾಕಪ್ ಇಲ್ಲದ ಹಿನ್ನೆಲೆಯಲ್ಲಿ ಆಕ್ಸಿಜನ್‌ಗಾಗಿ ರೋಗಿಗಳ ಪರದಾಡುವಂತಾಗಿದೆ. ಶಸ್ತ್ರಚಿಕಿತ್ಸೆಯ ನಂತರ ದಾಖಲಾಗುವ ಐಸಿಯು ವಾರ್ಡ್‌ನಲ್ಲಿ ಅವ್ಯವಸ್ಥೆ ಮಿತಿಮೀರಿದೆ. ನಿನ್ನೆ ಸಂಜೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದ ಅವ್ಯವಸ್ಥೆಯ ವಿಡಿಯೋ ವೈರಲ್ ಆಗಿದ್ದು, ಆಡಳಿತ ಮಂಡಳಿಗೆ ಜನರು ಶಾಪ ಹಾಕುತ್ತಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುವ ವಿಡಿಯೋವನ್ನು ವೈರಲ್ ಮಾಡಿದ್ದರ ಹಿಂದೆ ಖಾಸಗಿ ಆಸ್ಪತ್ರಗಳ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರಿ ಆಸ್ಪತ್ರೆಯೆ ದಕ್ಷತೆಯನ್ನು ಅವರಿಗೆ ಸಹಿಸಿಕೊಳ್ಳಲಾಗಿತ್ತಿಲ್ಲ, ಹೀಗಾಗಿ ವಿಡಿಯೋ ವೈರಲ್ ಮಾಡಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button