Freedom TV

ಸೂರ್ಯನಿಗೆ ಉಗುಳಿದರೆ ಕಾಂಗ್ರೆಸ್ ನವರ ಮೇಲೆ ಬೀಳುತ್ತೆ – ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನೇಹಾ ಕೊಲೆಯನ್ನು ಮುಸ್ಲಿಂ ಯುವಕ ಮಾಡಿರೋದು ಖಂಡನೀಯ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೋಮವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕರ್ನಾಟಕದಲ್ಲಿ ಹಿಂದೂ ಸಮಾಜಕ್ಕೆ ರಕ್ಷಣೆ ಇಲ್ಲ, ಹಾಡಹಗಲಿನಲ್ಲಿ ಕಾಲೇಜಿನ ವಿದ್ಯಾರ್ಥಿಯನ್ನು ಕೊಲೆ ಮಾಡಿರೋದು ಸರ್ಕಾರದ ಬೇಜವಾಬ್ದಾರಿ ಕಾಣಿಸುತ್ತದೆ ಎಂದು ಕಿಡಿಕಾರಿದರು.

ನಿಮ್ಮ ಬೇಜವಾಬ್ದಾರಿ ಹೇಳಿಕೆಯಿಂದ ರಾಜ್ಯದ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್ ನವರು ಹಿಂದೂ ಸಮಾಜಕ್ಕೆ ಅಪಮಾನ ಮಾಡುತ್ತಿದ್ದಾರೆ. ಸುರ್ಜೇವಾಲ ಕೊಲೆ ಆಗಲು ಬಿಡಲ್ಲ ಅನ್ನಬೇಕಿತ್ತು, ಸುರ್ಜೇವಾಲ ಅವರೇ ನಿಮ್ಮ ಮಗಳಿಗೆ ಹೀಗೆ ಆಗಿದ್ದರೇ ಏನ್ ಮಾಡುತ್ತಿದ್ದೀರಿ..? ಈ ಘಟನೆ ಖಂಡಸಿ ನಾವು ಇವತ್ತು ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಹಿಂದೂಗಳ ರಕ್ಷಣೆ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಈ ಪ್ರಕರಣವನ್ನು ಚುನಾವಣೆಗಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಗೃಹ ಸಚಿವರು ತನಿಖೆ ಆಗದೇ ಹೇಳಿಕೆ ನೀಡುತ್ತಿದ್ದಾರೆ. ಸಿಎಂ, ಗೃಹಮಂತ್ರಿ ಬೇಜವ್ದಾರಿ ಹೇಳಿಕೆ ಕೊಡಬಾರದು. ಹಿಂದೂ ಸಮಾಜ ಜಾಗೃತ ಆಗಬೇಕು. ಹಿಂದೂ ಸಮಾಜ ಕಾನೂನು ಕೈ ತೆಗೆದುಕೊಂಡರೆ ಏನು ಆಗಬಹುದು ಯೋಚಿಸಿ, ಸೂರ್ಯನಿಗೆ ಉಗುಳಿದರೆ ಕಾಂಗ್ರೆಸ್ ನವರ ಮೇಲೆ ಬೀಳುತ್ತೆ, ಹಾಗಾಗಿ ಮೋದಿ ವಿರೋಧಿ ಮಾಡೋದು ಸರಿಯಲ್ಲ, ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ನವರಿಗೆ ಚಂಬೂ ಸಿಗುತ್ತೆ ಎಂದರು.

Comments (0)

Your email address will not be published. Required fields are marked *

Back to top button