ಮಂಡ್ಯ : ಡಿ.20, 21, 22 ರಂದು 3 ದಿನ ಮಂಡ್ಯದಲ್ಲಿ ಜರುಗಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪಿನೊಂದಿಗೆ ನಾಲಿಗೆಗೂ ರುಚಿ ರುಚಿಯಾದ  ಭಾರಿ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಬಗೆಗಿನ ತಿಂಡಿ, ತಿನಿಸುಗಳನ್ನು ಸವಿಯುವ ಅವಕಾಶ ದೊರೆಯಲಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಕರು, ಮಾಧ್ಯಮ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ ಸೇರಿ ಅಂದಾಜು ಮೂರು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 4 ಪ್ರತ್ಯೇಕ ಸ್ಥಳಗಳಲ್ಲಿ ಅಂದಾಜು 300 ಕೌಂಟರ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಳಗಿನ ಉಪಹಾರ ಮಧ್ಯಾಹ್ನದ ಊಟ, ಸಂಜೆಯ ಸ್ನಾಕ್ಸ್, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 350 ಜನ ಬಾಣಸಿಗರು 900 ಜನ ಬಡಿಸುವವರು ಮತ್ತು ಅಡಿಗೆ ಸ್ವಚ್ಛತೆಗೆ ಸಿಬ್ಬಂದಿಯನ್ನು ಆಯೋಜಿಸಲಾಗಿದೆ.3 ದಿನದ ಊಟೋಪಾಚಾರದಲ್ಲಿ ಮಂಡ್ಯದ ಸೊಗಡಿನ ಮುದ್ದೆ ಸೊಪ್ಪಿನ 검은다. ಮೊಳಕೆ ಸಾಂಬರ್, ಚಿತ್ತಕದ ಬೇಳೆ ಸಾಂಬರ್, ರಾಗಿ ದೋಸೆ, ತಟ್ಟೆ ಇಡ್ಲಿ ಖಾದ್ಯಗಳು ಇರಲಿದೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ಟೆ ಪುಡಿ ಮೊಸರು ಇರ ಲಿದೆ. ಬೆಲ್ಲದ ಹೋಳಿಗೆ, ಕಾಯಿ ಮಿಠಾಯಿ, ಬಾದೂಷ, ಜಾಮೂನ್, ಮೈಸೂರು ಪಾಕ್, ಸಿಹಿ ಪೊಂಗಲ್, ಲಾಡು ಇರಲಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಪ್ರತಿ ನಿಧಿಗಳು, ಜನಸಾಮಾನ್ಯರಿಗೆಲ್ಲಾ ಒಂದೇ ರೀತಿ ಊಟದ ವ್ಯವಸ್ಥೆ ಮಾಡಲಾಗಿದೆ.

ಮೂರು ದಿನದ ಊಟದ ಮೆನು

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿ ಭರಾಟೆಗಳ ಜೊತೆಗೆ ಊಟದ ಭರಾಟೆ ಕೂಡ ಜೋರಾಗಿದೆ. ಬಾಯಿ ಚಪರಿಸುವಂತಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿ, ರುಚಿಯಿಂದ ಕೂಡಿದ ಬಗೆ ಬಗೆಯ ಭೋಜನವನ್ನು ಸಾಹಿತ್ಯ ಪ್ರೇಮಿಗಳಿಗೆ ಉಣಬಡಿಸಲು ಭರ್ಜರಿ ಊಟದ ಮನು ಸಿದ್ದಪಡಿಸಲಾಗಿದೆ.

ಡಿ.20ರ ಮೆನು ತಿಂಡಿಗೆ ತಟ್ಟೆ ಇಡ್ಲಿ, ವಡೆ, ಚಟ್ನಿ, ಸಾಂಬರ್, ಮೈಸೂರು ಪಾಕ್,  ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿ ಪುಡಿ, ಮೆಂತ್ಯ ಬಾತ್, ಅನ್ನ, ಮೊಳಕೆ ಕಾಳು ಸಾಂಬಾರ್, ಬಾಳೆ ಹಣ್ಣು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್. ರಾತ್ರಿ ಪೂರಿ ಸಾಗು, ಮೈಸೂರು ಪಾಕ್, ಅವರೆ ಕಾಳು ಬಾತು,  ಮೊಸರು, ಬಾಳೆಹಣ್ಣು,, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಪಲ್ಯ, ಸಲಾಡ್.

ಡಿ.21ರ ಮೆನು ತಿಂಡಿಗೆ ರಾಗಿ ದೋಸೆ, ಸಿಹಿ ಮತ್ತು ಖಾರ ಪೊಂಗಲ್, ಮಧ್ಯಾಹ್ನ ಅಕ್ಕಿ ರೊಟ್ಟಿ, ಮಿಶ್ರ ತರಕಾರಿ ಪಲ್ಯ, ವೆಜ್‌ ಪಲಾವ್ ರಾಯಿತ, ಅನ್ನ, ಚಿತ್ತಕದ ಬೇಳೆ ಸಾಂಬಾರ್, ಲಾಡು, ಉಪ್ಪು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್ ಇರಲಿದೆ. ರಾತ್ರಿ ಊಟಕ್ಕೆ ಚಪಾತಿ, ಸಾಗು, ಗೀರೈಸ್, ಕುರ್ಮ, ಡ್ರೈ ಜಾಮೂನು, ಅನ್ನ, ತರಕಾರಿ ಸಾಂಬಾ‌ರ್, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್ ಇರಲಿದೆ.

ಡಿ.22ರ ಮೆನು ತಿಂಡಿಗೆ ದೋಸೆ ಚಟ್ಟಿ, ಟೊಮೆಟೋ ಬಾತ್, ಕ್ಯಾರೆಟ್ ಹಲ್ವ, ಊಟಕ್ಕೆ ಬಿಳಿ ಹೋಳಿಗೆ, ಸಾಗು, ಜೀರಾರೈಸ್ ಪಪ್ಪು, ಬಾದೂಷ, ಮುದ್ದೆ, ಅನ್ನ, ಸೊಪಿನ ಸಾಂಬರ್, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಉಪ್ಪಿನ ಕಾಯಿ, ಹಪ್ಪಳ, ಸಲಾಡ್. ರಾತ್ರಿ ಊಟಕ್ಕೆ ಮೆಂತ್ಯ ಬಾತ್, ರಾಯಿತ, ఊబ్బరి, మిఠాయి, ಅನ್ನ, ರಸಂ, ಮೊಸರು, ಬಾಳೆಹಣ್ಣು, ಉಪ್ಪು, ಕೋಸಂಬರಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ ಸಲಾಡ್ ಇರಲಿದೆ

Leave a Reply

Your email address will not be published. Required fields are marked *

Verified by MonsterInsights