Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop Newsಆಟೋಗಳ ಮೇಲೆ ಮಚ್ಚು ಹಿಡಿದ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

ಆಟೋಗಳ ಮೇಲೆ ಮಚ್ಚು ಹಿಡಿದ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

ಬೆಂಗಳೂರು: ಆಟೋಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ಇನ್ನು ಮುಂದೆ ಭಾರೀ ದಂಡ ಬೀಳಲಿದೆ. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದು, ದಂಡದ ಜೊತೆ ಸೀಜ್ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ.

ಇನ್ಮುಂದೆ ಆಟೋ, ಟ್ಯಾಕ್ಸಿ, ಇತರೆ ವಾಹನ ಚಾಲಕರ ಗಮನದಲ್ಲಿರಲಿ. ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ ಹಾಕಿ, ಯಾವುದೋ ವಿವಾದಾತ್ಮಕ ಫೋಟೋ ಅಥವಾ ಬರಹಗಳನ್ನು ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮರ ಸಾರಲು ಮುಂದಾಗಿದ್ದಾರೆ.

ನಟರು ಮಚ್ಚು ಹಿಡಿಯುವ ಪೋಸ್ಟರ್ ಅಥವಾ ಕೆಲವರ ಭಾವನೆಗಳನ್ನು ಕೆರಳಿಸುವ ಬರಹಗಳು, ಫೋಟೋಗಳನ್ನು ಹಾಕಿದರೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ. ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದೆ. ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಕರು, ತಮ್ಮ ವಾಹನಗಳ ಮೇಲೆ ಯಾವುದಾದರೂ ಹಳೆಯ ಕೇಸುಗಳಿದ್ದರೆ ಅಂತ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡಲಿದ್ದಾರೆ.

ಅಶ್ಲೀಲ, ಅಸಭ್ಯ ಹಾಗೂ ಕ್ರೌರ್ಯವನ್ನು ಬಿಂಬಿಸುವ ಬರಹಗಳು, ಕೆಲವು ಪೋಸ್ಟರ್‌ಗಳನ್ನ ಆಟೋ, ಟ್ಯಾಕ್ಸಿಗಳ ಮೇಲೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಇದು ನಕಾರಾತ್ಮಕ ಪರಿಣಾಮ ಬೀಳುತ್ತಿದ್ದು, ಸಾರಿಗೆ ನಿಯಮಗಳನ್ನ ಉಲ್ಲಂಘಿಸಿ ಇಂತಹ ಪೋಸ್ಟರ್‌ಗಳನ್ನು ಹಾಕುವುದನ್ನು ನಿಲ್ಲಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments