ಆಟೋ ಎಕ್ಸ್ ಪೋ : ಕೆಲ ವಾರಗಳ ಹಿಂದಷ್ಟೇ ರಾಜ್ಯ ಸರ್ಕಾರದ ಸಚಿವರ ಪ್ರಯಾಣಕ್ಕಾಗಿ 33 ಹೊಸ ಇನ್ನೊವಾ ಕ್ರಸ್ಟಾ ಹೈ ಬ್ರೀಡ್ ಕಾರನ್ನು ಖರೀದಿಸಿತ್ತು. ಸುಮಾರು 9.9 ಕೋಟಿ ರೂ. ವೆಚ್ಚದಲ್ಲಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಿ ಬರದ ಸಮಯದಲ್ಲೂ ಸರ್ಕಾರ, ಸಚಿವರನ್ನ ಸಂತೋಷ ಪಡಿಸೋದ್ರಲ್ಲಿ ಯಶಸ್ಸು ಕಂಡಿತು. ಟೆಂಡರ್ ಕರೆಯದೇ ನೇರವಾಗಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಲು ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ನೀಡಲಾಗಿತ್ತು . ಒಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವನ್ನ ಅಂದಾಜಿಸಿ ಸುಮಾರು 9.9 ಕೋಟಿ ಖರ್ಚು ಮಾಡಿತ್ತು .
೩೩ ಸಚಿವರಿಗೆ ಹಳೆಯ ಕಾರುಗಳು ಕೂಡ ಉಪಯೋಗಕ್ಕೆ ಯೋಗ್ಯವಾಗಿಯೇ ಇತ್ತು ಹಾಗಿದ್ದರೂ ಕೂಡ ಸರ್ಕಾರ ಹೊಸ ಕಾರು ಖರೀದಿ ಎಷ್ಟು ಸರಿ ಎಂದು ಚರ್ಚೆಯಾದ ಬೆನ್ನಲ್ಲೇ ಸಿಎಂ ಸಚಿವಾಲಯ ಉತ್ತರವನ್ನೂ ನೀಡಿತ್ತು. ಹಳೆ ಕಾರುಗಳ ಗರಿಷ್ಠ ಮಿತಿಯಾದ 1 ಲಕ್ಷ ಕಿಮೀಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿಮೀ ಓಡಾಟ ಅಥವಾ 3 ವರ್ಷ ಬಳಕೆಯಾಗಿರುವ ಕಾರು , ಸಚಿವರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದರು.
ಸಚಿವರಿಗೆ ಹೊಸ ಕಾರು ಚರ್ಚೆಯ ಬೆನ್ನಲ್ಲೇ ಸ್ಪೀಕರ್ ಯುಟಿ ಖಾದರ್ ವರಿಗೆ ಐಷಾರಾಮಿ ಕಾರು ಖರೀದಿ ಮಾಡಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ,ಪಂಚ ಗ್ಯಾರಂಟಿ ಅನುಷ್ಠಾನಕ್ಕಾಗಿ ಬೃಹತ್ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. ಅದಕ್ಕಾಗಿ ಹಣ ಹೊಂದಿಸಲು ಸರ್ಕಾರ ಇತರೆ ಇಲಾಖೆಗಳ ಅನುದಾನ ಕಡಿತಗೊಳಿಸುತ್ತಿದೆ ,ರಾಜ್ಯದ ಅಭಿವೃದ್ಧಿಗೂ ಹಣದ ಕೊರತೆ ಎದುರಾಗುವ ಆತಂಕ ವ್ಯಕ್ತವಾಗಿರುವ ಈ ಸಂದರ್ಭದಲ್ಲಿ ಸ್ಪೀಕರ್ ಖಾದರ್‌ಗೆ 41 ಲಕ್ಷದ ಹೊಸ ಐಶಾರಾಮಿ ಕಾರು ಖರೀದಿಸುವ ಅಗತ್ಯವಿತ್ತೇ ಎಂಬ ಮಾತುಗಳು ಕೇಳಿಬರುತ್ತಿವೆ,ಜೊತೆಗೆ ಹಳೆ ಸರ್ಕಾರ ಖರೀದಿಸಿದ್ದ ಹಳೆ ಕಾರುಗಳ ಪೈಕಿ ಕೆಲ ಕಾರುಗಳು ಉಪಯೋಗಕ್ಕೆ ಯೋಗ್ಯವಾಗಿದ್ದರು ಕೂಡ ನೂತನ ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಟೀಕೆ ಮಾಡಲು ಆರಂಭಿಸಿದೆ.