ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣಗೆ ಶಿಕ್ಷೆ ವಿಧಿಸಿದ್ರೆ ಬಿಜೆಪಿಗೆಕೇ ಮುಜುಗರ ಆಗುತ್ತೆ..? ಕಾಂಗ್ರೆಸ್ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ.? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ. ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿ ಯಾಸಿನ್ ಮಲ್ಲಿಕ್ ಜೊತೆ ಇರುವ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಎಂದಿದ್ದಾರೆ.
ಇನ್ನು ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡಿದೆ. ತನಿಖೆ ಮಾಡಲಿ. ಎಸ್ಐಟಿ ವರದಿಗೂ ಮುಂಚೆಯೇ ಭಾರಿ ಅಪರಾಧ ಆಗಿದೆ ಎನ್ನುವ ಹಾಗೆ ಬಿಂಬಿಸೋದು ಸರಿಯಲ್ಲ. ತನಿಖೆಯ ವರದಿ ಬರುವರೆಗೂ ಎಲ್ಲರೂ ಕಾಯಬೇಕು. ಕೋರ್ಟಿದೆ, ಕಾನೂನು ಇದೆ. ವೀರೇಂದ್ರ ಹೆಗ್ಗಡೆಯವರೂ ತನಿಖೆಯನ್ನು ಸ್ವಾಗತಿಸಿದ್ದಾರೆ. ತನಿಖೆಗೂ ಮುಂಚೆಯೇ ಇಷ್ಟೆಲ್ಲ ಏಕೆ ಮಾತನಾಡಬೇಕು..? ಎಂದು ಪ್ರಶ್ನಿಸಿದ್ರು.
ಕಾಂಗ್ರೆಸ್ ಪಕ್ಷ ದೇಶದ ಹಿತವನ್ನ ಮರೆತು ಪಾಕಿಸ್ತಾನವನ್ನ ಸಾಫ್ಟ್ ಆಗಿ ನೋಡ್ತಾ ಇದೆ. ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡ್ತಾ ಇದೆ. ಮಾಲೇಗಾಂವ್ ಪ್ರಕರಣದ ನಂತರದ ಘಟನೆಗಳಲ್ಲಿ ನಡೆದುಕೊಂಡದ್ದು ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ ಮಾಡಿದ್ದಾರೆ. ತನಿಖೆ ಬಂದ್ ಮಾಡಿದ ಶರತ್ ಪವಾರ್ರ ಪಕ್ಷ ಹಿಂದೂ ಟೆರರ್ ಅಂತ ಹೇಳೋ ಪ್ರಯತ್ನ ಮಾಡಿದ್ರು. ಸಂಜೋತ್ ಹಾಗೂ ಮಾಲೇಗಾಂವ್ ಲಿಂಕ್ ಮಾಡಿದ್ರು. ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಮುಸಲ್ಮಾನರು ಯಾಕೆ ಮಾಡ್ತಾರೆ ಅಂದ್ರು. ಹಿಂದೂ ಟೆರೇರ್ ಅಂತ ಹೇಳಿ ಪಾಕಿಸ್ತಾನವನ್ನ ರಕ್ಷಿಸುವ ಕೆಲಸ ಮಾಡಿದ್ರು.
ನಾವು ಪಾಕಿಸ್ತಾನವನ್ನ ಜಗತ್ತಿನಲ್ಲಿ ಬೆತ್ತಲೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದೆವು. ಮಲೇಗಾಂವ್ದಲ್ಲಿ ಆರಂಭಿಕ ಆರೋಪಿಗಳನ್ನ ಬಿಡಿಸುವ ಕೆಲಸ ಮಾಡಿದ್ರು . ದಿಗ್ವಿಜಯ ಸಿಂಗ್ ಬಾಂಬೆ ಬ್ಲಾಸ್ಟ್ ಆರ್ಎಸ್ಎಸ್ ಮಾಡಿದ್ದು ಅಂದ್ರು. ದೇಶದಲ್ಲಿ ಹೀರೊ ಆಗೋದನ್ನ ಬಿಟ್ಟು ಪಾಕಿಸ್ತಾನದಲ್ಲಿ ಹೀರೊ ಆಗೋಕೆ ಹೊರಟಿದ್ದಾರೆ ಎಂದ್ರು. ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ ಹಿಂದೂ ಯಾವತ್ತೂ ಟೆರರಿಸ್ಟ್ ಆಗೋಕೆ ಸಾಧ್ಯವೇ ಇಲ್ಲಾ ಅಂತ. ಪಾಕಿಸ್ತಾನವನ್ನ ರಕ್ಷಿಸುವ ಕೆಲಸ ಮಾಡಿ ದೇಶಕ್ಕೆ ದ್ರೋಹ ಮಾಡಿದ್ದಾರೆ. ಮೂರು ಜನ ಪಾಕಿಸ್ತಾನದವರು ಅನ್ನೋಕೆ ಸಾಕ್ಷಿ ಏನು ಅಂತಾರೆ ಚಿದಂಬರಂ ಕಾಂಗ್ರೆಸ್ಸಿನ ಮನಸ್ಥಿತಿ ದೇಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾ ಇದೆ ಎಂದರು. ದೇಶದ ಹಿತಕ್ಕೆ ಕಾಂಗ್ರೆಸ್ ಪಕ್ಷದ ವರ್ತನೆ ದುರ್ದೈವದ ಸಂಗತಿ ಎಂದರು ಕಿಡಿಕಾರಿದ್ರು.


