ಮೈಸೂರು: 70 ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷ ಆಡಳಿತ ನಡೆಸಿವೆ ಹಿಂದುಗಳಿಗೆ ಅನ್ಯಾಯ ಆಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರ ಮಂಗಳ ಸೂತ್ರ ಮಾತ್ರ ಅಲ್ಲ, ತಮ್ಮ ಗಂಡಂದಿರು, ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಾರೆ ಎಂದು ನರೇಂದ್ರ ಮೋದಿ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೋಮುಗಲಾಭೆ, ದೋಂಬಿ ಮಾಡಿ ಅವರ ಮಕ್ಕಳನ್ನು ಸಾಯುವಂತೆ ಮಾಡ್ತಾರೆ, ಒಬ್ಬರನ್ನೊಬ್ಬರು ಬಡಿದಾಡಿಕೊಳ್ತಾರೆ. ಸಮಾಜವನ್ನು ಅತಪಥನಕ್ಕೆ ಹೋಗುವಂತೆ ಮಾಡ್ತಾರೆ. ಮಕ್ಕಳನ್ನು ಕೋಮು ಗಲಭೆಯಲ್ಲಿ ತೊಡಗಿಸಿ ನಿರುದ್ಯೋಗಿಯಾಗಿ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಯಾವುದೇ ಪ್ರಜಾ ಪ್ರಭುತ್ವದಲ್ಲೂ ಈ ರೀತಿ ಮಾತನಾಡೋಲ್ಲ. ಮೋದಿ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಮತಿಯ ಭಾವನೆ ಕೆರಳಿಸುವ ರೀತಿ ಮೋದಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದ್ಯೋ ಗೊತ್ತಿಲ್ಲಎಂದು ಮೈಸೂರಿನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ.
ಇನ್ನೂ ಮೈಸೂರು ಕೊಡಗು ಅಭ್ಯರ್ಥಿ ಯದುವೀರ್, ಚಾಮರಾಜನಗರ ಅಭ್ಯರ್ಥಿ ಬಾಲರಾಜು ಅವರನ್ನು ಅಮಾನತು ಮಾಡಬೇಕು, ಹಣದಿಂದಲೇ ಬಿಜೆಪಿ ಚುನಾವಣೆ ನಡೆಸುತ್ತಿದೆ ಅಂತಾ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬೆಂಗಳೂರಿನಲ್ಲಿ ಸಿಕ್ಕ 2 ಕೋಟಿ ಹಣದಿಂದ ಇವರ ಚುನಾವಣೆ ಯಾವ ರೀತಿ ಅಂತಾ ಗೊತ್ತಾಗುತ್ತದೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಒತ್ತಾಯ ಮಾಡಿದರು.


