ತುಮಕೂರು: ಸ್ವಲ್ಪ ಯಾಮಾರಿದ್ರು ಆ ಕುಟುಂಬದವರ ಕಥೆ ಮುಗಿದು ಹೋಗ್ತಿತ್ತು. ಗ್ರಾಮೀಣ ಭಾಗ ಅಂದ ಮೇಲೆ ರಸ್ತೆಗಳಲ್ಲಿ ಹೊಲ ಗದ್ದೆಗಳಲ್ಲಿ ಹಾವು ಚೇಳು ಕಣ್ಣಿಗೆ ಕಾಣೋದು ಕಾಮನ್..ಕೆಲವೊಮ್ಮೆ ಮನೆಯ ಜಂತೆಗಳಲ್ಲಿ, ಕೊಟ್ಟಿಗೆಗಳಲ್ಲಿ ಹಾವು ಕಾಣಿಸಿಕೊಂಡಿರೋದನ್ನ ನಾವು ನೀವು ಕೇಳಿದ್ದೀವಿ ನೋಡಿದ್ದೀವಿ. ಆದ್ರೆ ಮಲಗೋ ಮಂಚದ ಮೇಲೆ ನಾಗರಹಾವೊಂದು ಕಂಡಿದ್ದು ಇದೇ ಮೊದಲು.
ಹೌದು.. ತುಮಕೂರು ತಾಲೂಕಿನ ಕಂಬಳಾಪುರ ಗ್ರಾಮದ ಮುನಿಯಪ್ಪ ಎಂಬುವವರ ಮನೆಯ ಮಂಚದ ಮೇಲೆ ನಾಗರಹಾವು ಕಾಣಿಸಿಕೊಂಡಿದೆ. ಸುಮಾರು ಐದು ಅಡಿ ಉದ್ದವಿದ್ದ ನಾಗರಹಾವು ಕಂಡು ಮನೆಯವರು ಗಾಬರಿಯಾಗಿದ್ದಾರೆ. ಇಷ್ಟಕ್ಕೂ ಈ ಹಾವು ಮನೆಯೊಳಗೆ ಯಾವಾಗ ಬಂತು..ಬೆಡ್ ರೂಂ ಸೇರಿಕೊಂಡಿದ್ದು ಯಾವಾಗ..ಬೆಡ್ ರೂಮಿನ ಮಂಚ ಏರಿ ಕೂತಿದ್ದು ಯಾವಾಗ..? ಗೊತ್ತಿಲ್ಲ.. ಆದ್ರೆ ಅದು ಬುಸುಗುಟ್ಟಿ ಯಾರಿಗಾದ್ರೂ ಕಚ್ಚಿ ಪ್ರಾಣ ತೆಗೆಯುವ ಮುನ್ನವೇ ಕಾಣಿಸಿಕೊಂಡಿದೆ.
ಮನೆಯ ರೂಮಿನ ಮಂಚದ ಮೇಲೆ ಹಾವು ಇರೋದನ್ನ ಕಂಡ ಮನೆಯವರು, ಮನೆಯಿಂದ ಹೊರ ಓಡಿ ಬಂದಿದ್ದಾರೆ. ತಕ್ಷಣ ಸ್ಥಳೀಯರಾದ ರಾಜೇಶ್ ಎಂಬುವವರು ತಕ್ಷಣ ಉರಗ ತಜ್ಞ ದಿಲೀಪ್ ಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ವಾರಂಗಲ್ ಪೌಂಢೇಶನ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡ ಸ್ಥಳಕ್ಕಾಗಮಿಸಿ ಮಂಚದ ಮೇಲಿರೋ ಬೆಡ್ ಶೀಟ್ ಒಳಗಿದ್ದ ಹಾವನ್ನ ರಕ್ಷಿಸಿದ್ದಾರೆ. ಅಲ್ಲದೇ ಅದನ್ನ ಸಮೀಪದ ಕಾಡಿಗೆ ಬಿಟ್ಟಿದ್ದಾರೆ. ಯಾರೊಬ್ಬರಿಗೂ ನಾಗರಹಾವು ಏನು ಮಾಡದೇ ಇರೋದೇ ಪುಣ್ಯ.. ಸಾವಿನ ಕದ ಬಡಿದು ಬಚಾವ್ ಆಗಿದೆ ಮುನಿಯಪ್ಪ ಕುಟುಂಬ..
ಗ್ರಾಮೀಣ ಭಾಗದಲ್ಲಿ ವಾಸ ಮಾಡುವವರು ಸ್ವಲ್ಪ ಎಚ್ಚರದಿಂದ ಇರಬೇಕು. ಯಾವಾಗ ಹಾವು ಚೇಳುಗಳು ಮನೆಯೊಳಗೆ ಬರ್ತಾವೋ ಗೊತ್ತಾಗೋದಿಲ್ಲ.. ಹೀಗಾಗಿ ಅದಕ್ಕೆ ಮುಂಜಾಗ್ರತಾ ಕ್ರಮವಹಿಸೋದು ಅತ್ಯಗತ್ಯ. ಇಲ್ಲವಾದರೆ ಇಂತಹ ವಿಷ ಜಂತುಗಳಿಂದ ಯಾವಾಗ ಬೇಕಾದ್ರೂ ಅಪಾಯ ಎದುರಾಗಬಹುದು…ಸೋ ಗ್ರಾಮೀಣ ಪ್ರದೇಶದ ನಿವಾಸಿಗಳೇ ಎಚ್ಚರ..