ಜಿಲ್ಲೆಧರ್ಮ

ಕೃಷ್ಣಾ ನದಿಯಲ್ಲಿ ವಿಗ್ರಹಗಳು ಪತ್ತೆ: ತೆಲಂಗಾಣ ತಕರಾರು ತೆಗೆದಿದ್ದು ಯಾಕೆ?

ರಾಯಚೂರು  :  ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ಹತ್ತಿರವಿರುವ ಕೃಷ್ಣಾನದಿ ತೀರ…ಮೊನ್ನೆ ಇದ್ದಕ್ಕಿದ್ದಂತೆ ಈ ನದಿಯ ಉಳಿಕೆ ನೀರಿನಲ್ಲಿ ವಿಷ್ಣುವಿನ ವಿಗ್ರಹ ಹಾಗೂ ಶಿವಲಿಂಗ ಪತ್ತೆಯಾಗಿದೆ…ಇದೀಗ..ಈ ವಿಗ್ರಹಗಳು ಯಾವ ಕಾಲದ್ದು, ಹೇಗೆ ನದಿಯಲ್ಲಿ ಬಂದ್ವು..ಇತ್ಯಾದಿ ಕೂತುಹಲದ ಬೆನ್ನು ಹತ್ತಿದ್ದಾರೆ ಆರ್ಕಿಯಾಲಜಿ ಇಲಾಖೆ ಅಧಿಕಾರಿಗಳು…ದೊರಕಿರುವ ವಿಗ್ರಹಗಳನ್ನು ಶುದ್ದಗೊಳಿಸಿ ಬಳಿಕ ಮೂರ್ತಿಗಳನ್ನು ಗ್ರಾಮಕ್ಕೆ ತಂದಿಡಲಾಗಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆಯ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಕೃಷ್ಣಾ ನದಿ ಪಾತ್ರದಲ್ಲಿ ಶಂಖ, ಚಕ್ರ ಹಿಡಿದಿರುವ ವಿಷ್ಣು ಮೂರ್ತಿ ಹಾಗೂ ಶಿವಲಿಂಗ ಪತ್ತೆಯಾಗಿದೆ. ಈ ವಿಗ್ರಹಗಳು 11ನೇ ಶತಮಾನದ ಪುರಾತನ ಕಾಲದ ಕೆತ್ತನೆ ಅಂತಾ ಹೇಳಲಾಗ್ತಿದೆ. ವಿಗ್ರಹಗಳು ಮುಪ್ಪಾಗಿರೋ ಕಾರಣ ನದಿಗೆ ಎಸೆಯಲಾಗಿದೆ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ..

ಅತ್ತ ಮೂರ್ತಿಗಳು ನಮ್ಮ ರಾಜ್ಯಕ್ಕೆ ಸೇರಿದ್ದು ಎಂದು ತೆಲಂಗಾಣ ತಕರಾರು ತೆಗೆದಿದ್ದು, ಎರಡು ರಾಜ್ಯಗಳ ಭಕ್ತರ ನಡುವೆ ಇದೀಗ ಪೈಪೋಟಿ ಶುರುವಾಗಿದೆ.  ವಿಗ್ರಹಗಳು ನದಿಯಲ್ಲಿ ತೇಲಿಕೊಂಡು ಬಂದಿವೆ..ಅವು ನಮ್ಮ ರಾಜ್ಯಕ್ಕೆ ಸೇರಿದ್ದು ಅಂತಿದ್ದಾರೆ.ಇನ್ನು ರಾಯಚೂರಿನ ಇತಿಹಾಸ ತಜ್ಞರು ಇದು ಆದಿಲ್ ಶಾಹಿ ಸುಲ್ತಾನರ ದಾಳಿಗೆ ಒಳಗಾದ ಸಂದರ್ಭದಲ್ಲಿ ವಿಗ್ರಹಗಳನ್ನ ನೀರಿಗೆ ಎಸೆದಿರಬಹುದು ಅಂತಿದ್ದಾರೆ.  ಅಂದಾಗೆ ರಾಯಚೂರು ಸುಮಾರು 163 ಬಾರಿ ಮುಸ್ಲಿಂ ದೊರೆಗಳ ದಾಳಿಗೆ ಒಳಗಾಗಿದೆ.ದೋ ಅಬ್ ಪ್ರದೇಶವಾದ ಕಾರಣ ಇದನ್ನ ವಶಪಡಿಸಿಕೊಳ್ಳೋಕೆ ಸಾಕಷ್ಟು ಮುಸ್ಲಿಂ ದೊರೆಗಳು ಪ್ರಯತ್ನ ಮಾಡಿದ್ರು ಅಂತೇಳಲಾಗುತ್ತಿದೆ.

ಅತ್ತ ಅದ್ಯಾವಾಗ ಕೃಷ್ಣ ನದಿ ತಟದಲ್ಲಿ ದೇವರ ದರ್ಶನವಾಯ್ತೋ ನೆರೆ ರಾಜ್ಯ ತೆಲಂಗಾಣ ತಕರಾರು ತೆಗೆದಿದೆ.  ಈ ವಿಗ್ರಹಗಳು ನಮ್ಮ ರಾಜ್ಯಕ್ಕೆ ಸೇರಿದ ಮೂರ್ತಿಗಳು ಅಂತಾ ತೆಲಂಗಾಣ ಭಕ್ತರು ಖ್ಯಾತೆ ತೆಗೆದಿದ್ದು ಎರಡು ರಾಜ್ಯಗಳ ಮಧ್ಯೆ ಪೈಪೋಟಿ ಶುರುವಾದಂತೆ ಕಾಣ್ತಿದೆ…ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿದ್ದಾನೆ.  ಇದೇ ಹೊತ್ತಲ್ಲಿ ವಿಷ್ಣುವಿನ ಮೂರ್ತಿ ಪತ್ತೆಯಾಗಿರೋದು ಭಕ್ತರಿಗೆ ಖುಷಿ ತಂದಿದೆ.

Comments (0)

Your email address will not be published. Required fields are marked *

Back to top button