ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಅಂತ ಮೊದಲಿನಿಂದಲೂ ಹೇಳಿಕೊಂಡು ಬಂದೆ ಎಂದು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಇಡೀ ರಾಜ್ಯದ ಕಾರ್ಯಕರ್ತರ ಧ್ವನಿಯಾಗಿ ನಾನು ಮಾತಾಡಿದೆ. ದಿಕ್ಕು ತಪ್ಪಿಸುವ ಕೆಲಸವನ್ನು ಯಡಿಯೂರಪ್ಪ, ವಿಜಯೇಂದ್ರ ಮಾಡಿದರು.ಆಗಲೂ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಂಡು ಬಂದೆ. ನಾನು ಸ್ವತಂತ್ರ ಸ್ಪರ್ಧೆ ಮಾಡುತ್ತೇನೆ ಅಂತ ಹೇಳಿಕೊಂಡೆ ಬಂದೆ. 35 ಸಾವಿರ ಜನರೊಂದಿಗೆ ನಾಮಪತ್ರ ಸಲ್ಲಿಸಿದೆ ಎಂದು ತಿಳಿಸಿದರು.
ಈಶ್ವರಪ್ಪ ನಾಮಪತ್ರ ವಾಪಾಸು ತಗೊತ್ತಾರೆ ಅಂದುಕೊಂಡು ವಿಜಯೇಂದ್ರ ಬಂದರು. ನಾಮಪತ್ರ ಹಿಂಪಡೆದಿಲ್ಲ ಅಂತ ಇವತ್ತು ಗೊತ್ತಾಯ್ತು, ಈಗ ಎಲ್ಲರಿಗೂ ಪಕ್ಷೇತರ ಸ್ಪರ್ಧೆ ಮಾಡುತ್ತೇನೆ ಅಂತ ಗೊತ್ತಾಗಿದೆ. ವಾಪಾಸು ತಗೆದುಕೊಳ್ಳದಿರೋದು ಸಂತೋಷ ಆಗಿದೆ ಅಂತ ಜನ ಹೇಳುತ್ತಿದ್ದಾರೆ. ನನಗೆ ಯಾವುದೇ ಉಚ್ಚಾಟನೆ ಪತ್ರ ನನಗೆ ಬಂದಿಲ್ಲ ಎಂದರು.
ನಾನು ಸಹ ಉಚ್ಚಾಟನೆ ಬಯಸುತ್ತಿದ್ದೆ,ನಾನು ಯಾವ ಉಚ್ಚಾಟನೆಗೂ ಹೆದರುವುದಿಲ್ಲ, ನಾನು ಗೆದ್ದು ನರೇಂದ್ರ ಮೋದಿಯವರ ಕೈ ಹಿಡಿಯುತ್ತೇನೆ, ನನಗೆ ರೈತರ ಚಿಹ್ನೆ ಸಿಕ್ಕಿರುವುದು ಸಂತಸ ಆಗಿದೆ. ರೈತನ ಹೆಸರಿನಲ್ಲಿ ವೋಟ್ ಕೋಡಿ ಎನ್ನಲು ಸಂತೋಷ ಆಗುತ್ತೆ, ರೈತನ ಹೆಸರಿನಲ್ಲಿ ಮೋದಿ ಹೆಸರಿನಲ್ಲಿ ಮತ ಕೇಳುತ್ತೇನೆ ಎಂದು ಮಾತನಾಡಿದರು.
ಇಡೀ ಕ್ಷೇತ್ರದ ಜನ ಅಪ್ಪ- ಮಕ್ಕಳ ಸುಳ್ಳಿಗೆ ಭಯುತ್ತಿದ್ದಾರೆ, ಯಾವ ಮುಖ ಇಟ್ಟುಕೊಂಡು ನನ್ನ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ಕೋಡ್ತಾರೆ ಎಲ್ಲಾ ಹಿಂದೂತ್ವವಾದಿಗಳನ್ನು ಯಡಿಯೂರಪ್ಪ ಹಿಂದೆ ಸರಿಸಿದ್ದಾರೆ, ಬಿಜೆಪಿ ಶುದ್ದೀಕರಣ ಮಾಡಲು ಹೊರಟಿರುವುದೆ ನನಗೆ ಸಂತೋಷ, ಇಡೀ ರಾಜ್ಯದ ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಕಮಲ ಚಿಹ್ನೆ ಇಲ್ಲದೆ ಸ್ಪರ್ಧೆ ಮಾಡುತ್ತಿರುವುದು ಕೇವಲ ತಾತ್ಕಾಲಿಕ, ಕಮಲ ಚಿಹ್ನೆ ಇಲ್ಲದೆ ಮೊದಲ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ, ಐದು ಭಾರಿ ಬಿಜೆಪಿಯಿಂದ ಗೆದ್ದಿದ್ದೇನೆ ಆಣೆ ಮಾಡಿ ಜನ ಹೇಳುತ್ತಿದ್ದಾರೆ ನಿಮಗೆ ವೋಟ್ ಮಾಡುತ್ತೇವೆ ಅಂತ ಎಂದರು.