ಜಿಲ್ಲೆಸುದ್ದಿ

2028ಕ್ಕೆ ನಾನೇ ಮುಖ್ಯಮಂತ್ರಿ : ಬಸನಗೌಡ ಪಾಟೀಲ್ ಯತ್ನಾಳ್

ಕಲಬುರಗಿ : ಬಿಜೆಪಿಯಿಂದ ನನ್ನನ್ನು ಹೊರಗೆ ಹಾಕಿರುವ ತಂದೆ-ಮಕ್ಕಳು ಮತ್ತು ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿ ಮುಗಿಯುತ್ತದೆ. 2028ರ ವಿಧಾನಸಭೆ ಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿಯಾಗಿ ಬರುತ್ತೇನೆ, ಎಂದು ಉಚ್ಚಾಟಿತ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದ ಮರುಳಾರಾಧ್ಯ ಶಿವಾಚಾರ್ಯರ ಗುರು ವಂದನಾ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್​ ಹೇಳಿದ್ದಾರೆ . ಹೆಣ್ಣು ಮಕ್ಕಳ ಹಣೆಯ ಮೇಲೆ ಕುಂಕುಮ ಇರಬೇಕೆಂದರೆ ನನಗೆ ಮತ ನೀಡಿ, ನಾನು ಸಿಎಂ ಆದ ಮೇಲೆ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್​ಗಳನ್ನು  ಹಿಂಪಡೆಯುತ್ತೇನೆ. ಉತ್ತರ ಪ್ರದೇಶದ ಮಾದರಿಯಲ್ಲಿ ಜೆಸಿಬಿ ಮುಖಾಂತರ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸುತ್ತೇನೆ.ಪೊಲೀಸರ ಕೈಗೆ ಗನ್ ಕೊಟ್ಟು ದೇಶ ದ್ರೋಹಿಗಳಿಗೆ ಸ್ಥಳದಲ್ಲೇ ಎನ್ ಕೌಂಟರ್ ಮಾಡಲು ಮುಕ್ತವಾಗಿ ಅವಕಾಶ ನೀಡಲಾಗುವುದು ಎಂದರು.

ಬಿಜೆಪಿ ಅಡ್ಜಸ್ಟ್‌ಮೆಂಟ್ ಗಿರಾಕಿಗಳು ರಾತ್ರಿ ಬೆಂಗಳೂರಿನ ಖರ್ಗೆ ಮನೆಲಿ ಇರ್ತಾರೆ, ಬೆಳಗ್ಗೆ ಬಂದು ಭೋಲೋ ಭಾರತ್ ಮಾತಾಕೀ ಜೈ ಅಂತಾರೇ.ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನೆ ಅಮಾಯಕರೆಂದು ಬಿಡುಗಡೆ ಮಾಡಿದೆ ಈ ಸರ್ಕಾರ.ಇದರ ವಿರುದ್ಧ ಬಿಜೆಪಿಯ ಯಾವೋಬ್ಬ ನಾಯಕನು ಹೋರಾಟ ಮಾಡ್ಲಿಲ್ಲ.ಬಿಜೆಪಿ ಮುಖಂಡರು ಹಾಗೂ ಶಾಸಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

Comments (0)

Your email address will not be published. Required fields are marked *

Back to top button