ಮೈಸೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಸಿದ್ದರಾಮಯ್ಯ ಅವರು ಸಿಎಂ ಆಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವುದರಿಂದ ಸಿಎಂ ಸ್ಥಾನವನ್ನು ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ನೀಡಬೇಕೆಂದು ಡಿಕೆ ಬಣದ ಕಾಂಗ್ರೆಸ್ ಶಾಸಕರು ಲಾಬಿ ಆರಂಭಿಸಿದ್ದಾರೆ. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಪ್ರವಾಸಕೈಗೊಂಡಿರುವ ಸಿಎಂ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ್ದಾರೆ.. ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಎಲ್ಲದನ್ನ ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ಇಲ್ಲಿಯವರೆಗೆ ಏನಾದರು ಮಾತನಾಡಿದ್ಯಾ? ಇಲ್ಲ ತಾನೇ, ಹಾಗಾದ್ರೆ ಮತೆ ಯಾಕೆ ಆ ಪ್ರಶ್ನೆ. ಹೈಕಮಾಂಡ್ ಹೇಳುವುದನ್ನ ನಾನು, ಶಾಸಕರು ಪಾಲಿಸಬೇಕು ಎಂದು ತಿಳಿಸಿದರು.
ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ. ನಾಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡ್ತೀನಿ ಎಂದರು.
ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ ಎಂಬ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದು.. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಿದ್ದೇನೆ. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸಿದ್ದೇನೆ ಎಂದು ಡಿಕೆ ಬ್ರದರ್ಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಶಿವಕುಮಾರ್ ಅವರು ಶಾಸಕರ ದೆಹಲಿ ಭೇಟಿಯ ಬಗ್ಗೆ ಮಾತನಾಡಿದ್ದು, ನಾಳೆ ಖರ್ಗೆ ಅವರನ್ನು ಭೇಟಿಮಾಡುತ್ತೇನೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ಶಾಸಕರ ದೆಹಲಿ ಭೇಟಿಯ ಬಗ್ಗೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಯುತ್ತದೆ. ಇಕ್ಬಾಲ್ ಹುಸೇನ್ ಅವರ ಹೇಳಿಕೆಯಂತೂ ಹೈಕಮಾಂಡ್ ಹೇಳಿದ್ದನ್ನು ಪಾಲಿಸಬೇಕು ಎಂದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಯು ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗುರಿಯಾಗಿದ್ದು, ಶಿವಕುಮಾರ್ ಪ್ರಶಾಂತರಾಗಿರುವುದು ಗಮನಕ್ಕೆ ಬಂದಿದೆ. 2023ರ ಚುನಾವಣೆಯ ನಂತರ ಹೈಕಮಾಂಡ್ ಇಬ್ಬರ ನಡುವೆಯ ಸಮತೋಲನವನ್ನು ಕಾಪಾಡಿಕೊಂಡಿತ್ತು. ಆದರೆ ಈಗ ಸರ್ಕಾರದ ಮಧ್ಯಭಾಗದಲ್ಲಿ ನಾಯಕತ್ವ ಬದಲಾವಣೆಯ ಒತ್ತಡ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು 16 ಬಜೆಟ್‌ಗಳನ್ನು ಮಂಡಿಸಿದ್ದು, 17ನೇ ಬಜೆಟ್ 2026ರಲ್ಲಿ ಮಂಡಿಸುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ
ಮೆಕ್ಕೆಜೋಳದ ಬಗ್ಗೆ ಮೀಟಿಂಗ್ ಮಾಡಲಾಗಿದೆ. ಎಂಎಸ್‌ಪಿ 2,400 ರೂ. ನಿಗದಿಯಾಗಿದೆ. ಖರೀದಿ ಕೇಂದ್ರ ಸ್ಥಾಪನೆ ಮಾಡಿಲ್ಲ. ರೈತರಿಗೆ ಖರೀದಿ ಕೇಂದ್ರ ಸ್ಥಾಪನೆ ಮಾಡಲು ಒತ್ತಾಯಿಸಿದ್ರು. ಮಾರುಕಟ್ಟೆಯಲ್ಲಿ ರೇಟ್ ಬಿದ್ದಿದ್ದೆ. ಮೆಕ್ಕೆಜೋಳವನ್ನ ರೈತರು ಜಾಸ್ತಿ ಬೆಳೆದಿದ್ದಾರೆ. 55 ಲಕ್ಷ ಮೆಟ್ರಿಕ್ಟ್ ಟನ್ ಉತ್ಪಾದನೆಯಾಗಿದೆ. ಇದು ಗೊತ್ತಿದ್ರು ಕೂಡ ಕೇಂದ್ರ ಸರ್ಕಾರ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನ ಆಮದು ಮಾಡಿಕೊಳ್ಳುತ್ತಿದೆ. ಇದರ ಅಗತ್ಯ ಇರಲಿಲ್ಲ. ಕರ್ನಾಟಕದಲ್ಲಿ ಬೆಳೆದಿದ್ದೇವೆ, ಇಲ್ಲೇ ಖರೀದಿ ಮಾಡಬಹುದಾಗಿತ್ತು. ಕೇಂದ್ರ ಸರ್ಕಾರ ಖರೀದಿ ಮಾಡುವ ಪ್ರಕ್ರಿಯೆ ಮಾಡಿಲ್ಲ. ಡಿಸ್ಟಲರಿಸ್‌ಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದಾರೆ. ಇದು ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ.
ಡಿಸ್ಟಲರಿಸ್‌ಗಳ ಜೊತೆ ಮಾತನಾಡಿ ಖರೀದಿ ಮಾಡುವಂತೆ ತಿಳಿಸಿದ್ದೇನೆ. ರೈತರಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತದೆ. ಮಾರುಕಟ್ಟೆ ಫೆಡರೇಷನ್‌ಗೆ ಖರೀದಿ ಮಾಡಲು ಸೂಚನೆ ಮಾಡಿದ್ದೇನೆ. 10 ಲಕ್ಷ ಖರೀದಿ ಮಾಡಲು ಸೂಚನೆ ನೀಡಿದ್ದೇನೆ. ಖರೀದಿ ಕೇಂದ್ರ ಸ್ಥಾಪನೆ ಮಾಡಲು ತಿಳಿಸಿದ್ದೇನೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಅಮದು ಮಾಡಿಕೊಳ್ಳುವಂತೆ ಪತ್ರ ಬರೆಯುತ್ತೇನೆ. ನಮ್ಮಲ್ಲಿ ಹೆಚ್ಚು ಬೆಳೆದಿದ್ದಾರೆ ಹೊರಗಡೆ ಆಮದು ಮಾಡಿಕೊಳ್ಳುವುದನ್ನ ನಿಲ್ಲಿಸುವಂತೆ ಪತ್ರ ಬರೆಯುತ್ತೇನೆ. ಹಣಕಾಸು ಸೆಕ್ರೆಟರಿ ಈ ಬಗ್ಗೆ ಮೀಟಿಂಗ್ ಮಾಡಲು ಸೂಚನೆ ನೀಡಿದ್ದೇನೆ. ಆಮದು ಮಾಡಿಕೊಳ್ಳದಂತೆ ಪತ್ರ ಬರೆದಿದ್ದೇನೆಂದು ಹೇಳಿದರು.


