ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿ ಮಾಡದಿರುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.. ಇದು ಭಾರತದ ಒಳ್ಳೆಯ ಹೆಜ್ಜೆ ಎಂದು ಭಾರತವನ್ನು ಟ್ರಂಪ್ ಶ್ಲಾಘಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಭಾರತ ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ.. ಸುಮಾರು 70 ರಾಷ್ಟ್ರಗಳ ಮೇಲೆ ಅಮೆರಿಕ ರಫ್ತಿನ ಮೇಲೆ ಸುಂಕವನ್ನು ವಿಧಿಸುವ ಬಗ್ಗೆ ಶ್ವೇತಭವನ ಘೋಷಿಸಿದ ಒಂದು ದಿನದ ಬಳಿಕ ಟ್ರಂಪ್ ಹೇಳಿದ್ದಾರೆ. ಭಾರತವು ಶೇಕಡಾ 25 ರಷ್ಟು ಸುಂಕವನ್ನು ಎದುರಿಸಬೇಕಾಗಿದೆ.. ರಷ್ಯಾದ ಮಿಲಿಟರಿ ಉಪಕರಣಗಳು ಮತ್ತು ಇಂಧನ ಖರೀದಿಯಿಂದಾಗಿ ಭಾರತ ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಭಾರತೀಯ ತೈಲ ಕಂಪನಿಗಳು ಕಳೆದ ವಾರದಿಂದ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿವೆ ಎಂಬ ವರದಿಗಳು ಕೇಳಿ ಬಂದಿವೆ.
ಭಾರತಕ್ಕೆ ಇಂಧನ ಅವಶ್ಯಕತೆಗಳನ್ನು ಪೂರೈಸುವ ವಿಷಯದಲ್ಲಿ, ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ತೈಲ ಬೆಲೆ ಮತ್ತು ಆ ಸಮಯದಲ್ಲಿ ಜಾಗತಿಕ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.


