#Exclusive NewsTop Newsಜಿಲ್ಲೆರಾಜಕೀಯಸುದ್ದಿ
ಅವರು ನಾಟಕ ಮಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತೆ : ಜಮೀರ್ ಅಹ್ಮದ್

ಕೊಪ್ಪಳ ನಗರದಲ್ಲಿ ಸಚಿವ ಜಮೀರ್ ಅಹ್ಮದ್, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಗುದ್ದಾಟ ಅವರ ಆಂತರಿಕ ವಿಚಾರ ಎಂದು ಹೇಳಿದ್ದಾರೆ. ಇನ್ನು ಅವರು ಕಾಂಗ್ರೆಸ್ ಬರೋ ಹಾಗೆ ಕಾಣೋದಿಲ್ಲಾ. ಆದರೆ ಕಾಂಗ್ರೆಸ್‌ಗೆ ಕೈ ತೋರಿಸಿ ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ನಾಟಕ ಮಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತೆ. ನಾವು ಯಾರು ಅವರನ್ನು ಪಕ್ಷಕ್ಕೆ ಕರೆದಿಲ್ಲಾ. ನಮ್ಮ ಪಕ್ಷಕ್ಕೆ ತಗೋಬೇಕಾದ್ರೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.




