ವಿಜಯಪುರ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಯ್ಯಾವ ಸಚಿವರು ಭಾಗಿಯಾಗಿದ್ದಾರೆನ ಅನ್ನೋದು ಗೊತ್ತಿದೆ. ಅಧಿವೇಶನದಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ರನ್ಯಾ ರಾವ್ ಕೇಸ್ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಟಿ ರನ್ಯಾ ರಾವ್ ಚಿನ್ನ ಅಕ್ರಮ ಸಾಗಾಟದಲ್ಲಿ ಭಾಗಿಯಾಗಿರುವ ಸಚಿವರ ಹೆಸರಿ ನನಗೆ ಗೊತ್ತಿದೆ ಅಂತ ಬಾಂಬ್ ಸಿಡಿಸಿದ್ದಾರೆ.
ರನ್ಯಾ ಕೇಸ್ನಲ್ಲಿ ನಂಟು ಹೊಂದಿರುವ ಮಿನಿಸ್ಟರ್ ಯಾರು ಅನ್ನೋದು ಗೊತ್ತಿದೆ. ಅಧಿವೇಶನದಲ್ಲಿ ಅವರುಗಳ ಹೆಸರು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ರನ್ಯಾ ಪ್ರಕರಣದ ನಂಟು ಹೊಂದಿರೋ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೊಕಾಲ್ (ಶಿಷ್ಟಾಚಾರ) ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟುಕೊಂಡು ತಂದ್ರು? ಎಲ್ಲವೂ ಗೊತ್ತಿದೆ ಎಂದು ಹೇಳಿದರು.