ಹುಬ್ಬಳ್ಳಿ: ರೀಲ್ಸ್ ಸ್ಟಾರ್ ಮುಕಳೆಪ್ಪ ಅನ್ಯಧರ್ಮದ ಯುವತಿ ಜೊತೆ ಮದುವೆಯಾದ ಪ್ರಕರಣ ಸಂಬಂಧ ಮುಕಳೆಪ್ಪ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ಇಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವಿಬ್ಬರು ಮತಾಂತರಗೊಂಡಿಲ್ಲ. ನಾವಿಬ್ಬರು ನಮ್ಮ ನಮ್ಮ ಧರ್ಮದಲ್ಲಿಯೇ ಇರುತ್ತೇವೆ. ಕಲಾವಿದರ ಮಧ್ಯೆ ಜಾತಿ ಧರ್ಮ ತರಬೇಡಿ. ನಾನು ಕರ್ನಾಟಕದಲ್ಲಿಯೇ ಹುಟ್ಟಿದ್ದೇನೆ. ಹೀಗಿರುವಾಗ ನಾನೂ ಕೂಡ ಕನ್ನಡದ ಹಿಂದೂನೇ ಎಂದು ವಿಡಿಯೋ ಮೂಲಕ ಮುಕಳೆಪ್ಪ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮುಕಳೆಪ್ಪ ಪತ್ನಿ ಗಾಯತ್ರಿ ಕೂಡ ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಂಬಬೇಡಿ, ನನಗೆ ಯಾರೂ ಮತಾಂತರ ಮಾಡಿ ಬಲವಂತವಾಗಿ ಮದುವೆ ಮಾಡಿಸಿಲ್ಲ, ನಾವು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ ಎಂದು ವಿಡಿಯೊ ಮೂಲಕ ಹೇಳಿದ್ದಾರೆ.


