ಕಿಚ್ಚ ಸುದೀಪ್ ಯಾಕೆ ಪೌರಾಣಿಕ ಸಿನಿಮಾ ಮಾಡೋದಿಲ್ಲ.ಜನ್ಮ ದಿನದ ಹಿನ್ನೆಲೆಯಲ್ಲಿಯೇ ಆಯೋಜಿಸಿದ್ದ ಪ್ರೆಸ್ ಮೀಟ್ ಅಲ್ಲಿಯೇ ಸುದೀಪ್ ಈ ಬಗ್ಗೆ ಹೇಳಿದ್ದಾರೆ. ಇದರೊಟ್ಟಿಗೆ ಕುದುರೆ ಕಥೆಯನ್ನೂ ಹೇಳಿದ್ದಾರೆ.
ನಾನು ಪೌರಾಣಿ ಚಿತ್ರ ಮಾಡೋಕೆ ಇಷ್ಟ ಪಡೋದಿಲ್ಲ. ಕಾರಣ ಇಂತಹ ಚಿತ್ರ ಮಾಡಿದ್ರೆ ಕುದುರೆ ಸವಾರಿ ಮಾಡ್ಬೇಕಾಗುತ್ತದೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಜನ್ಮ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ಅವರು, ಪೌರಾಣಿಕ ಚಿತ್ರದಲ್ಲಿ ಯುದ್ಧದ ಸನ್ನಿವೇಷಗಳೂ ಇರುತ್ತವೆ. ಆದರೆ, ಕುದುರೆ ಬಗ್ಗೆ ನನಗೆ ಭಯ ಇದೆ. ಈ ಭಯ ಹುಟ್ಟುಕೂ ಕಾರಣ ಇದೆ.
ನಾನು ಸಿನಿಮಾರಂಗಕ್ಕೆ ಬರೋ ಮೊದಲು ಎಲ್ಲವನ್ನೂ ಕಲಿತುಕೊಂಡಿದ್ದೇನೆ. ಆ ರೀತಿನೇ ಕುದುರೆ ಸವಾರಿ ಕೂಡ ಕಲಿತುಕೊಂಡಿದ್ದೇನೆ. ಹೆಚ್ಚು ಕಡಿಮೆ 10 ದಿನ ಅಭ್ಯಾಸ ಕೂಡ ಮಾಡಿದ್ದೇನೆ. ಆದರೆ, ಆ ಒಂದು ದಿನ ಆ ಕುದುರೆ ಅದ್ಯಾಕೋ ರೊಚ್ಚಿಗೆದ್ದೇ ಬಿಡ್ತು.
ಅದರಿಂದ ಮೇಲೆ ಕುಳಿತುಕೊಂಡ ನಾನು ಕೆಳಗೆ ಜಾರಿ ಬಿಟ್ಟೆ. ಹಾಗೆ ಆ ಕುದುರೆ ನನ್ನ ಎಳೆದುಕೊಂಡು ಹೋಗಿಯೇ ಬಿಡ್ತು. ಹಾಗಾಗಿಯೇ ಕುದುರೆ ಬಗ್ಗೆ ಹಾಗೂ ಕುದುರೆ ಮೇಲೆ ಕುಳಿತುಕೊಳ್ಳುವುದು ಅಂದ್ರೆ ಭಯ ಆಗುತ್ತದೆ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.