ರಾಜ್ಯ

ಯುದ್ದಕ್ಕೆ ನಾನು ಬೆಂಬಲಿಸುವುದಿಲ್ಲ : ಮಾಜಿ ಸಂಸದೆ ರಮ್ಯಾ

ಯುದ್ದ ಮಾಡುವುದರಿಂದ ಸಾಯೋದು ನಮ್ಮ ಸೈನಿಕರೇ, ಈ ಕಾರಣಕ್ಕಾಗಿ ನಾನೆಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದು ಮಾಜಿ ಸಂಸದೆ, ನಟಿ ರಮ್ಯಾ ಹೇಳಿದ್ದಾರೆ..

ಪಹಲ್​ಗಾಮ್​ ದಾಳಿ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟಿ ರಮ್ಯಾ,ಯುದ್ಧ ಮಾಡುವುದರಿಂದ ಯಾರಿಗಾದರೂ ಒಳ್ಳೆಯದಾಗುತ್ತಾ..? ಅಥವಾ ಎಲ್ಲದ್ದಕ್ಕೂ, ಎಲ್ಲಕ್ಕೂ ಯುದ್ಧವೊಂದೇ ಪರಿಹಾರವಲ್ಲ,ಯುದ್ಧ ಶುರುವಾದರೆ ಸಾಯೋದು ನಮ್ಮ ಸೈನಿಕರೇ, ಹೀಗಾಗಿ ವೈಯುಕ್ತಿಕವಾಗಿ ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸಲ್ಲ ಎಂದು ನಟಿ ರಮ್ಯಾ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ನಮ್ಮ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಿರುವುದು ನಮ್ಮನ್ನು ರಕ್ಷಣೆ ಮಾಡಲಿ ಎಂದಲ್ಲವೇ, ನಮ್ಮ ನಾಯಕರು ರಕ್ಷಣೆ ನೀಡದೇ,ಯುದ್ಧ ಎನ್ನುವುದಾದರೆ ಸಾಯೋದು ನಮ್ಮ ಸೈನಿಕರಲ್ಲವೇ..? ಎಂದು ಪ್ರಶ್ನೆ ಮಾಡಿದ ನಟಿ ರಮ್ಯಾ..

ಭದ್ರತಾ ಲೋಪವಾಗಿರುವುದರಿಂದ ಪಹಲ್​ಗಾಮ್​ ದಾಳಿ ಸಂಭವಿಸಿದೆ.ಈ ಬಗ್ಗೆ ನಾವು ಸರ್ಕಾರಕ್ಕೆ ಪ್ರಶ್ನೆ ಮಾಡ್ಬೇಕು.ಗಡಿ ಭಾಗ, ಸೂಕ್ಷ್ಮ ಪ್ರದೇಶಗಳಲ್ಲಿ ಏಕೆ ಭದ್ರತಾ ವೈಫಲ್ಯವಾಗಿದೆ..? ಇಂತಹ ದೊಡ್ಡ ಭದ್ರತಾ ಲೋಪ ಏಕೆ ಆಗಿದೆ..? ಈ ಬಗ್ಗೆ ನಾವು ಪ್ರಶ್ನೆ ಮಾಡ್ಬೇಕು..? ಎಂದು ಮಾಜಿ ಸಂಸದೆ, ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ..

 

Comments (0)

Your email address will not be published. Required fields are marked *

Back to top button