ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ವಯಸ್ಸಿಗೆ ಕಾಲಿಟ್ಟ ನಂತರ ರಾಜಕೀಯದಿಂದ ನಿವೃತ್ತರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ. 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಅಂತ ಹೇಳಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ತಿಂಗಳಷ್ಟೆ ನಿವೃತ್ತಿಯ ಸೂಚನೆ ರವಾನಿಸಿದ್ದ ಸಂಘದ ಸರ್ವೋಚ್ಛ ನಾಯಕ ಮೋಹನ್ ಭಾಗವತ್, ದಿಢೀರ್ ತಮ್ಮ ಮಾತಿನಿಂದ ಯೂಟರ್ನ್ ಹೊಡೆದಿದ್ದಾರೆ.. 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಅಂತ ಹೇಳಿಲ್ಲ.. ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂ ಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನನಗೆ 80 ವರ್ಷವಾದ್ರೂ ಸಂಘ ನಡೆಸು ಅಂದ್ರೆ ಮುನ್ನಡೆಸಬೇಕು. ಇಲ್ಲ ನನಗೆ 75 ವರ್ಷ ಆಗಿದೆ. ನಾನು ವಿಶ್ರಾಂತ ಜೀವನ ಕಳೆಯಲು ಬಯಸ್ತೇನೆ ಅಂತ ಹೇಳುವಂತಿಲ್ಲ. ನಾನು 80 ವರ್ಷವಾದ್ರೂ ಸಂಘವನ್ನ ಮುನ್ನಡೆಸ್ತೇನೆ ಅನ್ನೋ ಮೂಲಕ ಮೋಹನ್ ಭಾಗವತ್ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ..
ಒಟ್ಟಾರೆ, ಮೋಹನ್ ಭಾಗವತ್ ಕೊಟ್ಟ ನಿನ್ನೆಯ ಸಂದೇಶ, ಬಿಜೆಪಿಯಲ್ಲಿನ ಸಂಘರ್ಷಕ್ಕೆ ವಿರಾಮ ನೀಡಿದೆ.. ತಮ್ಮ ಹೇಳಿಕೆಯಿಂದ ಪ್ರಧಾನಿ ಮೋದಿ ನಿವೃತ್ತಿ ಕುರಿತಾದ ರಾಜಕೀಯ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.. ಆದರೇ, ಮೋಹನ್ ಭಾಗವತ್ ಅವರನ್ನು ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ.
ಆರ್.ಎಸ್.ಎಸ್ ಹಾಗೂ ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಬೇರೆಯವರಿಗೆಲ್ಲಾ 75 ವರ್ಷ ವಯಸ್ಸಿನ ಮಿತಿ ವಿಧಿಸಿದ್ದ ಬಿಜೆಪಿ ಹಾಗೂ ಆರ್‌ಎಸ್ಎಸ್ ಈಗ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿಗೆ ಮಾತ್ರ ವಯಸ್ಸಿನ ಮಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಆರ್‌ಎಸ್ಎಸ್ ಹಾಗೂ ಬಿಜೆಪಿಯ ಅನುಕೂಲ ಸಿಂಧು ರಾಜಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ.