ಬೆಂಗಳೂರು : ಪ್ರಾಣಿಗಳ ಮೇಲೆ ಯಾಕೆ ದ್ವೇಷ? ಈ ಥರ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷ, ಗಲಾಟೆ ಇದ್ದರೂ ಈ ಥರ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗಳನ್ನು ಪರಿಶೀಲನೆ ನಡೆಸಿದರು.
ಯಾರೇ ಆದ್ರೂ ಅವನ ಮೇಲೆ ಕಠಿಣ ಕ್ರಮ
ಪ್ರಾಣಿಗಳ ಮೇಲೆ ಯಾಕೆ ದ್ವೇಷ, ಈ ತರ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷ, ಗಲಾಟೆ ಇದ್ರೂ ಈ ತರ ಮಾಡಬಾರದು. ನಾನು ಕೂಡ ಪೊಲೀಸರಿಗೆ ಹೇಳಿದ್ದೇನೆ. ಯಾರೇ ಆದ್ರೂ ಅವನ ಮೇಲೆ ಕಠಿಣ ಕ್ರಮ ಆಗಬೇಕು ಎಂದರು. ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನು ಇದೀನಿ ಎಂದರು.