#Exclusive NewsTop Newsಮನರಂಜನೆಸಿನಿಮಾಸುದ್ದಿ

ನಾನು ಉಪೇಂದ್ರ ಅವರ ಅಭಿಮಾನಿ : ಅಮಿರ್​ ಖಾನ್

ಇನ್ನು ಕೆಲವೇ ದಿನಗಳಲ್ಲಿ ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡಿದೆ. ಉಪೇಂದ್ರ ಅವರು ನಿರ್ದೇಶನ ಮಾಡಿರುವುದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಡಿಸೆಂಬರ್​ 20ರಂದು ರಿಲೀಸ್​ ಆಗಲಿರುವ ‘ಯುಐ’ ಸಿನಿಮಾ ಬಗ್ಗೆ ಬಾಲಿವುಡ್​ ನಟ ಅಮಿರ್​ ಖಾನ್ ಅವರು ಮಾತನಾಡಿದ್ದಾರೆ. ವಿಶೇಷ ಏನೆಂದರೆ, ‘ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ’ ಎಂದು ಆಮಿರ್​ ಖಾನ್​ ಅವರು ಹೇಳಿದ್ದಾರೆ.

‘ಯುಐ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಆಮಿರ್​ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅಮಿರ್​ ಖಾನ್ ಅವರು ‘ಯುಐ’ ಚಿತ್ರದ ಟ್ರೇಲರ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ, ಉಪೇಂದ್ರ ಅವರ ಪ್ರತಿಭೆಯನ್ನು ಕೂಡ ಅಮಿರ್​ ಖಾನ್​ ಹೊಗಳಿದ್ದಾರೆ. ಫ್ಯಾನ್ಸ್ ವಲಯದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

‘ನಾನು ಈಗ ಉಪೇಂದ್ರ ಜೊತೆ ಇದ್ದೇನೆ. ಅವರ ಸಿನಿಮಾ ಡಿಸೆಂಬರ್​ 20ರಂದು ಬಿಡುಗಡೆ ಆಗುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ. ಟ್ರೇಲರ್​ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೇಲರ್​ ಮಾಡಿದ್ದಾರೆ’ ಎಂದು ಆಮಿರ್​ ಖಾನ್​ ಅವರು ಮನಸಾರೆ ಹೊಗಳಿದ್ದಾರೆ. ಟ್ರೇಲರ್​ ಇಷ್ಟ ಆಗಿದ್ದಕ್ಕೆ ಅವರು ಉಪ್ಪಿಯ ಬೆನ್ನು ತಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button