ರಾಯಚೂರು: ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ ಎಂದು ಸತೀಶ್ ಜಾರಕಿಹೊಳಿ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಅವಧಿಗೆ ಸಿಎಂ ಆಗಲು ಬರುವುದಿಲ್ಲ. ಈಗ ಮುಖ್ಯಮಂತ್ರಿಗಳು ಇದ್ದಾರೆ. ಹಾಗಾಗಿ ಅಂತಹ ಅವಶ್ಯಕತೆ ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಆಕಾಂಕ್ಷಿ, ಸಿಎಂ ಸ್ಥಾನದ ವಿಚಾರಗಳು ಈಗ ಇಲ್ಲ ಎಂದಿದ್ದಾರೆ.
ಸಿಎಂ ಕುರ್ಚಿಗೆ ಒಬ್ಬರಾದ ಮೇಲೆ ಒಬ್ಬರು ಟವಲ್ ಹಾಕುತ್ತಲೇ ಇದ್ಧಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್ನಲ್ಲಿ ಹಲವು ಬಣಗಳಾಗಿವೆ. ಗುಪ್ತ ಸಭೆಗಳು ಕೂಡ ಆಗಾಗ ನಡೆಯುತ್ತಿರುತ್ತವೆ.ಹೊಸ ವರ್ಷದ ಪ್ರಯುಕ್ತ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿದ್ದಾಗ ಅವರ ಅನುಪನಸ್ಥಿತಿಯಲ್ಲಿ ರಹಸ್ಯ ಸಭೆ ವಿಚಾರವಾಗಿ ಮಾತನಾಡಿದ ಅವರು, ರಹಸ್ಯ ಸಭೆ ಏನು ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದೇವೆ. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ. ಸಭೆಯಲ್ಲಿ ಅಂತಾ ರಾಜಕೀಯ ಚರ್ಚೆ ಯಾವುದು ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.