ನೆಲಮಂಗಲ ; ಚನ್ನಪಟ್ಟಣವನ್ನು ಕೈ ವಶ ಮಾಡಿಕೊಳ್ಳಲು ಡಿಸಿಎಂ ಡಿಕೆಶಿ ಮಾಡಿದ್ರಾ ಮಾಸ್ಟರ್ ಫ್ಲಾನ್, ನಾನೇ ಚನ್ನಪಟ್ಟಣದ ಕೈ ಅಭ್ಯರ್ಥಿ ಎನ್ನುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಲು ಮುಂದಾದಾ ಕನಕಪುರ ಬಂಡೆ. ಇನ್ನು ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳಿಂದ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಬಗೆ ಹರಿಯುವುದಕ್ಕೂ ಮೊದಲೇ, ಟ್ವಿಸ್ಟ್ ಕೊಟ್ಟ ಡಿಸಿಎಂ.ಇನ್ನೂ ಕೈ ಅಭ್ಯರ್ಥಿ ಯಾರಗಿಲಿದ್ದಾರೆ ಎಂದು ಚನ್ನಪಟ್ಟಣದ ಮತದಾರರು ಗೊಂದಲದಲ್ಲಿರುವಾಗಲೇ, ಚನ್ನಪಟ್ಟಣ ಉಪಚುನಾವಣೆ ಕೈ ಅಭ್ಯರ್ಥಿ ನಾನೇ ಎಂದು ನೆಲಮಂಗಲದ ವೀರಭದ್ರ ದೇಗುಲದಲ್ಲಿ ಪೂಜೆ ಸಲ್ಲಿಸಿ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೀಗೆ ಹೇಳಿರುವುದು, ಎದುರಾಳಿಗಳ ಎದುರಿಸಿಲು ಗಾಳಿಯಲ್ಲಿ ಗುಂಡು ಹಾರಿಸಿದ್ರಾ, ಕಮಲಪಾಳೆಯ, ದಳಪತಿಗಳ ಎದುರಿಸಲು ತಾವೇ ಸ್ವತಃ ಅಖಾಡಕ್ಕೆ ಇಳಿಯೋ ಯೋಚನೆ ಮಾಡಿದ್ದಾರೆ ಅನ್ನು ಚರ್ಚೆ ಡಿಸಿಎಂ ಡಿಕೆಶಿ ಹೇಳಿಕೆ ಇದೀಗ ರಾಜ್ಯ ರಾಜಕೀಯ ಪಡೆಸಾಲೆಯಲ್ಲಿ ಜೋರು ಸದ್ದು ಮಾಡುತ್ತಿದೆ.