ಸಿನಿಮಾ

ನಾನು ಆನ್‌ಲೈನ್‌ನಲ್ಲೇ ಇದ್ದೇನೆ. ಆ ರೀತಿ ವದಂತಿಗಳನ್ನು ಯಾರು ನಂಬಬೇಡಿ -ನಟಿ ಹೇಮಾ

ಮೇ 19ರಂದು ಮಧ್ಯರಾತ್ರಿವರೆಗೂ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಆ ದಾಳಿಯಲ್ಲಿ ಡ್ರಗ್ಸ್ ಪತ್ತೆಯಾಗಿರುವ ವಿಚಾರ ಗೊತ್ತಾಗಿದೆ. ಇನ್ನು, ಈ ಪಾರ್ಟಿಯಲ್ಲಿ ತೆಲುಗಿನ ಜನಪ್ರಿಯ ನಟಿ ಹೇಮಾ ಅವರು ಭಾಗಿಯಾಗಿದ್ದರು ಎಂಬ ಗುಸುಗುಸು ಕೇಳಿಬಂದಿದೆ. ಈ ಸಂಬಂಧ ನಟಿ ಹೇಮಾ ಸ್ಪಷ್ಟನೆ ನೀಡಿದ್ದು, ”ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೂ ನನಗೂ ಯಾವುದೇ ಸಂಬಂಧ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಎಲ್ಲಿಯೂ ಹೋಗಿಲ್ಲ. ಇಲ್ಲೇ ಹೈದರಾಬಾದ್‌ನ ಫಾರ್ಮ್‌ಹೌಸ್‌ವೊಂದರಲ್ಲಿ ಆರಾಮಾಗಿ ಎಂಜಾಯ್ ಮಾಡಿಕೊಂಡು ಹೋಗಿದ್ದೇನೆ. ನನ್ನ ಬಗ್ಗೆ ಹಬ್ಬಿರುವ ಸುದ್ದಿಯು ಸುಳ್ಳು. ಅಲ್ಲಿ ಯಾರಿದ್ದಾರೋ, ಏನೋ ನನಗೆ ಗೊತ್ತಿಲ್ಲ. ನಾನು ಆನ್‌ಲೈನ್‌ನಲ್ಲೇ ಇದ್ದೇನೆ. ಆ ರೀತಿ ವದಂತಿಗಳನ್ನು ಯಾರು ನಂಬಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ, 35 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹೇಮಾ, 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Comments (0)

Your email address will not be published. Required fields are marked *

Back to top button